ಬ್ರೇಕಿಂಗ್ ನ್ಯೂಸ್
28-01-22 10:24 pm HK Desk news ಕ್ರೀಡೆ
ನವದೆಹಲಿ, ಜ.28 : ಕ್ರಿಕೆಟ್ ಬೆಟ್ಟಿಂಗ್ ವಿಚಾರವನ್ನು ಮುಚ್ಚಿಟ್ಟ ಆರೋಪದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಯು ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್ ಟಯ್ಲರ್ ಅವರಿಗೆ ಮೂರು ವರ್ಷ, ಆರು ತಿಂಗಳ ವರೆಗೆ ಎಲ್ಲ ಮಾದರಿಯ ಕ್ರಿಕೆಟ್ ಆಟದಿಂದ ನಿಷೇಧ ವಿಧಿಸಿದೆ.
ಇತ್ತೀಚೆಗೆ ಬ್ರೆಂಡನ್ ಟಯ್ಲರ್ ತನ್ನನ್ನು ಭಾರತದ ಉದ್ಯಮಿಯೊಬ್ಬ ಕ್ರಿಕೆಟ್ ಬೆಟ್ಟಿಂಗ್ ವಿಚಾರದಲ್ಲಿ 2019ರಲ್ಲಿ ಬ್ಲಾಕ್ಮೇಲ್ ಮಾಡಿದ್ದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಕೊಕೇನ್ ಸೇವಿಸಿದ್ದ ಸಂದರ್ಭದ ಫೋಟೋ ಮುಂದಿಟ್ಟು ಆತ ಬ್ಲಾಕ್ಮೇಲ್ ಮಾಡಿದ್ದ. ಸ್ಪಾಟ್ ಬೆಟ್ಟಿಂಗ್ ಬಗ್ಗೆ ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು ಎಂದು ಹೇಳಿಕೊಂಡಿದ್ದರು. ಆದರೆ, ಈ ಬಗ್ಗೆ ಮಾಹಿತಿ ಹೊರಬಿಟ್ಟ ಬ್ರೆಂಡನ್ ಟಯ್ಲರ್ ಗೆ ಐಸಿಸಿ ನಿಷೇಧದ ಬರೆ ಹಾಕಿದೆ.
ಐಸಿಸಿ ನಿಯಮದ ನಾಲ್ಕು ನೀತಿಗಳನ್ನು ಟಯ್ಲರ್ ಉಲ್ಲಂಘಿಸಿದ್ದಾರೆ. ಐಸಿಸಿ ಏಂಟಿ ಕರಪ್ಶನ್ ಕೋಡ್ ಮತ್ತು ಐಸಿಸಿ ಏಂಟಿ ಡೋಪಿಂಗ್ ಕೋಡ್ ಕೂಡ ಉಲ್ಲಂಘನೆ ಮಾಡಿದ್ದಾರೆ. ಮೂರು ವರ್ಷಗಳ ನಂತರ ಇಚ್ಚಿಸಿದರೆ ಜುಲೈ 28, 2025ರಲ್ಲಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಬಹುದು ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಸ್ಪಾಟ್ ಫಿಕ್ಸಿಂಗ್ ವಿಚಾರದಲ್ಲಿ ತನಗಾದ ಕಿರುಕುಳದ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ್ದ ಟಯ್ಲರ್, ಒಂದು ದಿನ ಸಂಜೆ ಪಾರ್ಟಿ ಆಯೋಜಿಸಲಾಗಿತ್ತು. ನಮಗೆ ಬಹಿರಂಗವಾಗಿಯೇ ಅವರು ಕೊಕೇನ್ ಆಫರ್ ಮಾಡಿದ್ದರು. ಅವರ ಒತ್ತಡಕ್ಕೆ ಬಿದ್ದು ಕೊಕೇನ್ ಸೇವನೆ ಮಾಡಿದ್ದೆ. ಆದರೆ ಮರುದಿನ ನಮ್ಮನ್ನು ಹೊಟೇಲಿನಲ್ಲಿ ಕೂಡಿಹಾಕಿದ್ದ ತಂಡ, ನಮ್ಮ ವಿಡಿಯೋ ಚಿತ್ರೀಕರಿಸಿ ಕೊಕೇನ್ ಸೇವಿಸಿರುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತೇವೆ. ಇಲ್ಲದಿದ್ದರೆ ಸ್ಪಾಟ್ ಫಿಕ್ಸಿಂಗ್ ನಡೆಸಲು ಸಹಕರಿಸಬೇಕು ಎಂದು ಒತ್ತಡ ಹಾಕಿದ್ದರು.
ಆದರೆ ನಾನು ಯಾವುದೇ ರೀತಿಯ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಬೆಟ್ಟಿಂಗ್ ನಲ್ಲಿ ಶಾಮೀಲಾಗಿಲ್ಲ. ನನ್ನಿಂದ ತಪ್ಪುಗಳಾಗಿದ್ದರೂ, ನಾನು ಯಾವುದೇ ಮೋಸ ಮಾಡಿಲ್ಲ. ಕ್ರಿಕೆಟನ್ನು ತುಂಬ ಪ್ರೀತಿಯಿಂದ ಆಡಿದ್ದೇನೆ. ಬೆದರಿಕೆ ಇದ್ದರೂ ಅದಕ್ಕೆ ಸೊಪ್ಪು ಹಾಕದೆ ಕ್ರಿಕೆಟನ್ನು ಆಡಿದ್ದೆ ಎಂದು ಜನವರಿ 24ರಂದು ಹೇಳಿಕೆಯಲ್ಲಿ ತಿಳಿಸಿದ್ದರು.
Former Zimbabwe (Zimbabwe) captain Brendon Taylor (Brendan Tayl) has been sentenced to three-and-a-half years ban from all forms of cricket by the International Cricket Committee 's (ICC) Anti-Corruption Unit (anti-corruption unit), for failing to immediately inform him about the invitation to do spot fixing (Spot Fixing). In a media release on Friday, the ICC accepted Taylor Kuda's ban sentence and the sentence will begin from January 28. He is also accused of violating the Doping Rule (Doping Code).
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm