ಬ್ರೇಕಿಂಗ್ ನ್ಯೂಸ್
07-09-21 03:02 pm MyKhel Kannada ಕ್ರೀಡೆ
ಲಂಡನ್ : ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ 157 ರನ್ಗಳ ಭರ್ಜರಿ ಜಯ ಗಳಿಸಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಸೋಮವಾರ (ಸೆಪ್ಟೆಂಬರ್ 6) ಮುಕ್ತಾಯಗೊಂಡ ನಾಲ್ಕನೇ ಟೆಸ್ಟ್ ಪಂದ್ಯದ ಬಳಿಕ ಭಾರತ-ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಗಳಿಸಿದೆ. ಪಂದ್ಯದ ಆರಂಭಿಕ ಇನ್ನಿಂಗ್ಸ್ನಲ್ಲಿ 99 ರನ್ ಹಿನ್ನಡೆ ಗಳಿಸಿದರೂ ಭಾರತ ಪಂದ್ಯ ಗೆದ್ದಿರುವುದು ವಿಶೇಷವೆನಿಸಿದೆ.
ಭಾರತ vs ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವಲ್ಲಿ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರ ಕೊಡುಗೆಯೂ ಪ್ರಮುಖವೆನಿಸಿತ್ತು. ಭಾರತದ ದ್ವಿತೀಯ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ಶರ್ಮಾ, ತಂಡಕ್ಕೆ ರನ್ ಬಲ ತುಂಬಿದ್ದರು. ಅಲ್ಲದೆ ಆ ಶತಕದೊಂದಿಗೆ ವಿಶಿಷ್ಠ ದಾಖಲೆಗಳನ್ನೂ ನಿರ್ಮಿಸಿದ್ದರು. ಆದರೆ ಕೊನೇ ಟೆಸ್ಟ್ನಲ್ಲಿ ಹಿಟ್ಮ್ಯಾನ್ ಶರ್ಮಾ ಆಡೋದು ಅನುಮಾನವೆನಿಸಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ವಿಶಿಷ್ಠ ದಾಖಲೆ ನಿರ್ಮಿಸಿದ್ದ ರೋಹಿತ್ ಶರ್ಮಾ ನಾಲ್ಕನೇ ಟೆಸ್ಟ್ ಪಂದ್ಯದ ಭಾರತದ ಆರಂಭಿಕ ಇನ್ನಿಂಗ್ಸ್ನಲ್ಲಿ ಕೇವಲ 11 ರನ್ ಬಾರಿಸಿದ್ದ ರೋಹಿತ್ ಶರ್ಮಾ ದ್ವಿತೀಯ ಇನ್ನಿಂಗ್ಸ್ನಲ್ಲಿ 127 ರನ್ ಬಾರಿಸಿದ್ದರು. ಇದು ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ವಿದೇಶದಲ್ಲಿ ಬಾರಿಸಿದ ಮೊದಲ ಶತಕ. ಅಷ್ಟೇ ಅಲ್ಲ, ಈ ಶತಕದೊಂದಿಗೆ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ 3000 ರನ್ ಕೂಡ ಪೂರೈಸಿದ್ದರು. ದ್ವಿತೀಯ ಇನ್ನಿಂಗ್ಸ್ನಲ್ಲಿ ಶರ್ಮಾ 256 ಎಸೆತಗಳಲ್ಲಿ 127 ರನ್ ಬಾರಿಸಿದ್ದರು. ಇದರಲ್ಲಿ 14 ಫೋರ್ಸ್, 1 ಸಿಕ್ಸರ್ ಸೇರಿತ್ತು. ಆಬಳಿಕ ಶರ್ಮಾ ಆಲಿ ರಾಬಿನ್ಸನ್ ಓವರ್ನಲ್ಲಿ ಕ್ರಿಸ್ ವೋಕ್ಸ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಶರ್ಮಾ ಬಾರಿಸಿದ್ದ ಈ ಶತಕ ತಂಡದ ಆತ್ಮ ವಿಶ್ವಾಸ ಹೆಚ್ಚಿಸಿತ್ತು. ಜೊತೆಗೆ ದ್ವಿತೀಯ ಇನ್ನಿಂಗ್ಸ್ನಲ್ಲಿ ತಂಡದ ಬಹುತೇಕ ಬ್ಯಾಟ್ಸ್ಮನ್ಗಳೂ ಕೂಡ ರನ್ ಕೊಡುಗೆ ನೀಡಿದ್ದರಿಂದ ಭಾರತ 466 ರನ್ ಕಲೆ ಹಾಕಿತ್ತು. ಹೀಗಾಗಿ ಮಾನಸಿಕವಾಗಿ ಕುಸಿದ ಇಂಗ್ಲೆಂಡ್ ಪಂದ್ಯ ಸೋತಿತು.
ರೋಹಿತ್ ಶರ್ಮಾಗೆ ಗಂಭೀರ ಗಾಯ, 5ನೇ ಪಂದ್ಯಕ್ಕೆ ಅನುಮಾನ? ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅದರಲ್ಲೂ ಭಾರತದ ದ್ವಿತೀಯ ಇನ್ನಿಂಗ್ಸ್ ರೋಹಿತ್ ಶರ್ಮಾ ಶತಕ ಬಾರಿಸಿ ಗಮನ ಸೆಳೆದಿದ್ದರಾದರೂ ಶರ್ಮಾಗೆ ಗಾಯಗಳೂ ಆಗಿದ್ದವು. ಆಂಗ್ಲ ವೇಗಿಗಳ ಮಾರಕ ದಾಳಿಯಿಂದಾಗಿ ಶರ್ಮಾ ತೊಡೆ ಭಾಗದಲ್ಲಿ ಚೆಂಡು ಬಡಿದ ಗುರುತುಗಳು ಮೂಡಿದ್ದವು. ಹೀಗಾಗಿ ಸೆಪ್ಟೆಂಬರ್ 10ರಂದು ಮ್ಯಾನ್ಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಶರ್ಮಾ ಆಡುತ್ತಾರೋ ಇಲ್ಲವೋ ಎನ್ನುವುದು ಅನುಮಾನ ಮೂಡಿಸಿದೆ. ಈ ಬಗ್ಗೆ ಶರ್ಮಾ ಸಣ್ಣ ಸುಳಿವು ನೀಡಿದ್ದಾರೆ. "ಈ ಕೂಡಲೇ ಗಾಯವನ್ನು ಪರಿಶೀಲಿಸುತ್ತೇವೆ. ಅದರ ಸ್ಥಿತಿ ಹೇಗಿದೆ ಎಂದು ಕ್ಷಣ ಕ್ಷಣಕ್ಕೂ ಗಮನ ಹರಿಸುತ್ತಿರುತ್ತೇವೆ ಎಂದು ಫಿಸಿಯೋ ಸಂದೇಶ ನೀಡಿದ್ದಾರೆ. ಆದರೆ ಗಾಯ ಅಂಥ ಗಂಭೀರ ಏನೂ ಇಲ್ಲ. ಬೇಗ ಗುಣವಾಗುತ್ತದೆ ಎಂದು ನನಗನ್ನಿಸುತ್ತದೆ," ಎಂದು ರೋಹಿತ್ ಹೇಳಿದ್ದಾರೆ. ಇದರರ್ಥ ಐದು ಪಂದ್ಯಗಳ ಟೆಸ್ಟ್ ಸರಣಿ ವಿಜೇತರನ್ನು ನಿರ್ಧರಿಸಲು ನಿರ್ಣಾಯಕವೆನಿಸಿರುವ ಐದನೇ ಟೆಸ್ಟ್ ಪಂದ್ಯದ ವೇಳೆ ಶರ್ಮಾ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಶರ್ಮಾ ಆ ಪಂದ್ಯದಲ್ಲಿ ಆಡೋದು ಬಹುತೇಕ ಖಚಿತ.
ಭಾರತ vs ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯದ ಸ್ಕೋರ್ ಮಾಹಿತಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ಮೊದಲ ಇನ್ನಿಂಗ್ಸ್ಗೆ ಇಳಿದ ಇಂಗ್ಲೆಂಡ್, ರೋರಿ ಬರ್ನ್ಸ್ 5, ಹಸೀಬ್ ಹಮೀದ್ 0, ಡೇವಿಡ್ ಮಲನ್ 31, ಜೋ ರೂಟ್ 21, ಆಲಿ ಪೋಪ್ 81, ಜಾನಿ ಬೈರ್ಸ್ಟೋ 37, ಮೊಯೀನ್ ಅಲಿ 35, ಕ್ರಿಸ್ ವೋಕ್ಸ್ 50, ಕ್ರೇಗ್ ಓವರ್ಟನ್ 1, ಆಲಿ ರಾಬಿನ್ಸನ್ 5, ಜೇಮ್ಸ್ ಆಂಡರ್ಸನ್ 1 ರನ್ನೊಂದಿಗೆ 84 ಓವರ್ಗೆ ಎಲ್ಲಾ ವಿಕೆಟ್ ಕಳೆದು 290 ರನ್ ಗಳಿಸಿ 99 ರನ್ ಮುನ್ನಡೆ ಸಾಧಿಸಿತ್ತು. ಭಾರತದ ದ್ವಿತೀಯ ಇನ್ನಿಂಗ್ಸ್: ಭಾರತ ದ್ವಿತೀಯ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ನೀಡಿತು.
ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ 127, ಕೆಎಲ್ ರಾಹುಲ್ 46, ಚೇತೇಶ್ವರ್ ಪೂಜಾರ 61, ವಿರಾಟ್ ಕೊಹ್ಲಿ 44, ರವೀಂದ್ರ ಜಡೇಜಾ 17, ರಿಷಭ್ ಪಂತ್ 50, ಶಾರ್ದೂಲ್ ಠಾಕೂರ್ 60, ಉಮೇಶ್ ಯಾದವ್ 25 ರನ್ನೊಂದಿಗೆ 148.2 ಓವರ್ಗೆ ಎಲ್ಲಾ ವಿಕೆಟ್ ಕಳೆದು 466 ರನ್ ಬಾರಿಸಿ ಇಂಗ್ಲೆಂಡ್ ಗೆಲುವಿಗೆ 368 ರನ್ ಗುರಿ ನೀಡಲಾಗಿತ್ತು. ಭಾರತದ ದ್ವಿತೀಯ ಇನ್ನಿಂಗ್ಸ್: ಭಾರತ ದ್ವಿತೀಯ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ನೀಡಿತು. ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ 127, ಕೆಎಲ್ ರಾಹುಲ್ 46, ಚೇತೇಶ್ವರ್ ಪೂಜಾರ 61, ವಿರಾಟ್ ಕೊಹ್ಲಿ 44, ರವೀಂದ್ರ ಜಡೇಜಾ 17, ರಿಷಭ್ ಪಂತ್ 50, ಶಾರ್ದೂಲ್ ಠಾಕೂರ್ 60, ಉಮೇಶ್ ಯಾದವ್ 25 ರನ್ನೊಂದಿಗೆ 148.2 ಓವರ್ಗೆ ಎಲ್ಲಾ ವಿಕೆಟ್ ಕಳೆದು 466 ರನ್ ಬಾರಿಸಿ ಇಂಗ್ಲೆಂಡ್ ಗೆಲುವಿಗೆ 368 ರನ್ ಗುರಿ ನೀಡಲಾಗಿತ್ತು. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್: ದ್ವಿತೀಯ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್, ರೋರಿ ಬರ್ನ್ಸ್ 50, ಹಸೀಬ್ ಹಮೀದ್ 63, ಡೇವಿಡ್ ಮಲನ್ 5, ಜೋ ರೂಟ್ 36, ಒಲ್ಲಿ ಪೋಪ್ 2, ಜಾನಿ ಬೈರ್ಸ್ಟೋ 0, ಕ್ರಿಸ್ ವೋಕ್ಸ್ 18, ಕ್ರೇಗ್ ಓವರ್ಟನ್ 10, ಒಲ್ಲಿ ರಾಬಿನ್ಸನ್ 10, ಜೇಮ್ಸ್ ಆ್ಯಂಡರ್ಸನ್ 2 ರನ್ನೊಂದಿಗೆ 92.2ನೇ ಓವರ್ಗೆ ಎಲ್ಲಾ ವಿಕೆಟ್ ಕಳೆದು 210 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
England vs India, Rohit Sharma gives a hint on his availability for 5th test.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm