ಬ್ರೇಕಿಂಗ್ ನ್ಯೂಸ್
14-08-21 02:41 pm Mykhel: Srinivas ಕ್ರೀಡೆ
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈಗಾಗಲೇ ಎರಡನೇ ಟೆಸ್ಟ್ ಪಂದ್ಯದ ಮೊದಲೆರಡು ದಿನಗಳ ಆಟ ಮುಗಿದಿದ್ದು ಮೂರನೇ ದಿನದಾಟ ಶನಿವಾರ (ಆಗಸ್ಟ್ 14) ನಡೆಯಲಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದುಕೊಂಡ ವಿರಾಟ್ ಕೊಹ್ಲಿ ಪಡೆ ಉತ್ತಮ ಆರಂಭವನ್ನು ಪಡೆದುಕೊಂಡಿತು. ಕೆಎಲ್ ರಾಹುಲ್ ಅಮೋಘ ಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 364 ರನ್ ಗಳಿಸಿ ಆಲ್ ಔಟ್ ಆಯಿತು.
ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ 129, ರೋಹಿತ್ ಶರ್ಮಾ 83, ವಿರಾಟ್ ಕೊಹ್ಲಿ 42 ಮತ್ತು ರವೀಂದ್ರ ಜಡೇಜಾ 40 ರನ್ ಬಾರಿಸಿ ಗಮನಾರ್ಹ ಆಟವನ್ನಾಡಿದರು. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮುಗಿಸಿದ ನಂತರ ಬೌಲಿಂಗ್ ಆರಂಭಿಸಿರುವ ಟೀಂ ಇಂಡಿಯಾ ಎರಡನೆ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡದ 3 ವಿಕೆಟ್ಗಳನ್ನು ಪಡೆದುಕೊಂಡಿದೆ. ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ರೊರಿ ಬರ್ನ್ಸ್ ಮತ್ತು ಜೋ ರೂಟ್ ಉತ್ತಮ ಆಟದ ನೆರವಿನಿಂದ 3 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿದೆ. ಭಾರತ ತಂಡದ ಪರ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದುಕೊಂಡು ಮಿಂಚಿದ್ದು ರಿವ್ಯೂ ವಿಚಾರವಾಗಿ ಈ ಬಾರಿ ಭಾರೀ ಸದ್ದು ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ತಂಡ ತನ್ನ ಎರಡು ರಿವ್ಯೂಗಳನ್ನು ವ್ಯರ್ಥ ಮಾಡಿದೆ. ಈ ಎರಡೂ ರಿವ್ಯೂ ಕೂಡ ಮೊಹಮ್ಮದ್ ಸಿರಾಜ್ ಓವರ್ಗಳಲ್ಲಿ ಖರ್ಚಾಗಿದ್ದು ಔಟ್ ಅಲ್ಲದ ಎಸೆತಕ್ಕೆ ರಿವ್ಯೂಗಳನ್ನು ವ್ಯರ್ಥ ಮಾಡಿದ್ದಕ್ಕೆ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಔಟ್ ಆಗಿರದಿದ್ದರೂ ಸಹ ರಿವ್ಯೂ ಮನವಿ ಮಾಡಿ ವ್ಯರ್ಥ ಮಾಡುವುದನ್ನು ವಿರಾಟ್ ಕೊಹ್ಲಿಯವರನ್ನು ನೋಡಿ ಕಲಿಯಬೇಕೆಂದು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಿವ್ಯೂ ಕುರಿತಾಗಿ ಇದೀಗ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮಾತನಾಡಿದ್ದು ಈ ಕೆಳಕಂಡಂತೆ ಪ್ರತಿಕ್ರಿಯೆ ನೀಡಿದ್ದಾರೆ..
ಸುಖಾಸುಮ್ಮನೆ ರಿವ್ಯೂ ಬಳಸುವುದು ಅನಗತ್ಯ
ಸರಿಯಾಗಿ ಔಟ್ ಅಥವಾ ನಾಟೌಟ್ ಎಂಬ ಖಚಿತತೆಯಿಲ್ಲದೆ ಸುಖಾಸುಮ್ಮನೆ ರಿವ್ಯೂಗಳನ್ನು ಬಳಸುವುದು ಅನಗತ್ಯ ಎಂದು ವಿವಿಎಸ್ ಲಕ್ಷ್ಮಣ್ ಟೀಮ್ ಇಂಡಿಯಾದ ರಿವ್ಯೂ ಬಳಕೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಔಟ್ ಆಗಿದೆ ಎಂಬುದು ಖಚಿತವಾಗಿ ಗೊತ್ತಿದ್ದರೆ ಮಾತ್ರ ರಿವ್ಯೂ ಬಳಸಲಿ, ಅದನ್ನು ಬಿಟ್ಟು ಸರಿಯಾದ ಮಾಹಿತಿಯಿಲ್ಲದೆ ಸುಖಾಸುಮ್ಮನೆ ರಿವ್ಯೂಗಳನ್ನು ಬಳಸಿ ವ್ಯರ್ಥ ಮಾಡಬಾರದು ಎಂದು ವಿವಿಎಸ್ ಲಕ್ಷ್ಮಣ್ ಕಿಡಿಕಾರಿದ್ದಾರೆ.
ಈ ರೀತಿ ರಿವ್ಯೂಗಳಿಲ್ಲದೆ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ ಆ್ಯಶಸ್ ಸೋತಿತ್ತು!
2019ರಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಕೊನೆಯ ಪಂದ್ಯದಲ್ಲಿಯೂ ಸಹ ಆಸ್ಟ್ರೇಲಿಯಾ ರಿವ್ಯೂಗಳಿಲ್ಲದೆ ಇಂಗ್ಲೆಂಡ್ ವಿರುದ್ಧ ಸೋತಿದ್ದನ್ನು ಹೇಗೆ ತಾನೆ ಮರೆಯಲು ಸಾಧ್ಯ ಹೇಳಿ ಎಂದು ವಿವಿಎಸ್ ಲಕ್ಷ್ಮಣ್ ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಕೂಡ ವ್ಯರ್ಥವಾಗಿ ರಿವ್ಯೂಗಳನ್ನು ಕಳೆದುಕೊಂಡಿತ್ತು. ಕೊನೆಯದಾಗಿ ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದ ಬೆನ್ ಸ್ಟೋಕ್ಸ್ ಔಟ್ ಆದಾಗ ಆಸ್ಟ್ರೇಲಿಯಾ ತನ್ನ ಬಳಿ ಯಾವುದೇ ರೀತಿಯ ಇಲ್ಲದ ಕಾರಣ ರಿವ್ಯೂ ಬಳಸಲಾಗದೆ ಕೊನೆಗೆ ಪಂದ್ಯವನ್ನು ಸೋಲಬೇಕಾಯಿತು, ಇದೇ ರೀತಿ ಟೀಮ್ ಇಂಡಿಯಾ ಕೂಡ ರಿವ್ಯೂಗಳನ್ನು ವ್ಯರ್ಥವಾಗಿ ಬಳಸುತ್ತಿದ್ದರೆ ಮುಂದೆ ಸಮಸ್ಯೆಗಳಾಗಬಹುದು ಎಂದು ವಿವಿಎಸ್ ಲಕ್ಷ್ಮಣ್ ಎಚ್ಚರಿಸಿದ್ದಾರೆ.
ರಿವ್ಯೂಗಳಲ್ಲಿ ಗೊಂದಲಗಳಿರಬಾರದು
ಇನ್ನೂ ಮುಂದುವರೆದು ಕೊಹ್ಲಿ ರಿವ್ಯೂ ತೆಗೆದುಕೊಂಡಿದ್ದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ವಿವಿಎಸ್ ಲಕ್ಷ್ಮಣ್ ವಿರಾಟ್ ಕೊಹ್ಲಿ ರಿವ್ಯೂ ತೆಗೆದುಕೊಳ್ಳುವಾಗ ಯಾವುದೇ ಗೊಂದಲಕ್ಕೆ ಒಳಗಾಗಬಾರದು, ಅದರಲ್ಲಿಯೂ ಬೌಲರ್ ಮೇಲಿನ ಕನಿಕರದಿಂದ ಯಾವುದೇ ಕಾರಣಕ್ಕೂ ರಿವ್ಯೂ ಬಳಸಬಾರದು ಎಂದು ಹೇಳಿಕೆ ನೀಡಿದ್ದಾರೆ. ಬೌಲರ್ ಪ್ರಕಾರ ಆತ ಮಾಡುವ ಎಸೆತ ಸರಿಯಾಗಿಯೇ ಇರುತ್ತದೆ ಹೀಗಾಗಿ ಆತ ರಿವ್ಯೂ ತೆಗೆದುಕೊಳ್ಳಲು ಪ್ರೇರೇಪಿಸುತ್ತಾನೆ, ಅದೇ ಸಮಯದಲ್ಲಿ ಮತ್ತಿತರ ಆಟಗಾರರು ಬಂದು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಶುರು ಮಾಡುತ್ತಾರೆ ಹೀಗಾಗಿಯೇ ರಿವ್ಯೂಗಳ ಬಗ್ಗೆ ಗೊಂದಲ ಉಂಟಾಗಿ ಸರಿಯಾದ ನಿರ್ಣಯ ತೆಗೆದುಕೊಳ್ಳಲಾಗುವುದಿಲ್ಲ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
(Kannada Copy of Mykhel Kannada)
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm