ಬ್ರೇಕಿಂಗ್ ನ್ಯೂಸ್
10-08-21 12:28 pm Mykhel: Srinivas ಕ್ರೀಡೆ
ಸದ್ಯ ಟೋಕಿಯೋ ಒಲಿಂಪಿಕ್ಸ್ 2020ಕ್ಕೆ ಭಾನುವಾರ ತೆರೆ ಬಿದ್ದಿದ್ದು ಪದಕ ಗೆದ್ದ ಭಾರತದ ವಿವಿಧ ಕ್ರೀಡಾ ಪಟುಗಳಿಗೆ ದೊಡ್ಡ ಮಟ್ಟದಲ್ಲಿ ಮನ್ನಣೆ ಮತ್ತು ಗೌರವ ಸಿಕ್ಕಿದೆ. ದೇಶದಾದ್ಯಂತ ಈ ಕ್ರೀಡಾಪಟುಗಳಿಗೆ ಗೌರವ ಸೂಚಿಸುವುದು ಮಾತ್ರವಲ್ಲದೆ ವಿವಿಧ ರಾಜ್ಯ ಸರಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಕೋಟ್ಯಂತರ ರೂಪಾಯಿಗಳನ್ನು ಗೌರವಧನವಾಗಿ ನೀಡಿವೆ ಮತ್ತು ವಿವಿಧ ಹುದ್ದೆಗಳ ಅವಕಾಶವನ್ನು ಸಹ ಮುಂದಿಟ್ಟಿವೆ.
ಹೀಗೆ ಒಲಿಂಪಿಕ್ಸ್ನಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸಿಗುತ್ತಿರುವ ದೊಡ್ಡ ಮಟ್ಟದ ಗೌರವ ಮತ್ತು ಮನ್ನಣೆ ಈ ಹಿಂದೆ ವಿಶ್ವಕಪ್ ಟೂರ್ನಿಯೊಂದರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತಕ್ಕೆ ಪ್ರಶಸ್ತಿ ಸಿಗುವಂತೆ ಮಾಡಿದ್ದ ಕ್ರಿಕೆಟಿಗನಿಗೆ ಸಿಕ್ಕಿಲ್ಲ. ಹೌದು 2018ರಲ್ಲಿ ನಡೆದಿದ್ದ ಅಂಧರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅಂಧರ ಕ್ರಿಕೆಟ್ ತಂಡ ಫೈನಲ್ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.
ವಿಶ್ವಕಪ್ ಗೆದ್ದ ಈ ಭಾರತದ ಅಂಧರ ತಂಡದ ಪ್ರಮುಖ ಆಟಗಾರನಾಗಿದ್ದ ಗುಜರಾತ್ ಮೂಲದ ನರೇಶ್ ತುಮ್ದಾ ಇದೀಗ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ವಿಶ್ವಕಪ್ ಗೆದ್ದ ಸಮಯದಲ್ಲಿ ಸಾಕಷ್ಟು ಪ್ರಶಂಸೆ ಮತ್ತು ಭರವಸೆಗಳನ್ನು ಪಡೆದುಕೊಂಡಿದ್ದ ನರೇಶ್ ತುಮ್ದಾ ಸದ್ಯ ಯಾವುದೇ ಕೆಲಸವಿಲ್ಲದೇ ಜೀವನೋಪಾಯಕ್ಕಾಗಿ ಇಟ್ಟಿಗೆ ಹೊರುತ್ತಾ ಕೂಲಿ ಕೆಲಸ ಮಾಡುತ್ತಿದ್ದಾರೆ. ದಿನಕ್ಕೆ 250 ರೂ. ಕೂಲಿ ಮೊತ್ತ ಸಿಗಲಿದ್ದು ಅದನ್ನೇ ಅವಲಂಬಿಸಿ ಜೀವನವನ್ನು ಕಷ್ಟದಿಂದ ಸಾಗಿಸುತ್ತಿದ್ದಾರೆ. ವಿಶ್ವಕಪ್ ಗೆದ್ದ ಸಮಯದಲ್ಲಿ ನಿಜವಾದ ಹೀರೋಗಳೆಂದು ಸುದ್ದಿಯಾಗಿದ್ದ ಅಂಧರ ಕ್ರಿಕೆಟಿಗರ ತಂಡದ ಆಟಗಾರ ಈ ಪರಿಸ್ಥಿತಿಯಲ್ಲಿರುವುದು ನಿಜಕ್ಕೂ ಬೇಸರದ ಸಂಗತಿ.
2018ರಲ್ಲಿ ಭಾರತದ ಬದ್ಧವೈರಿ ಪಾಕಿಸ್ತಾನದ ವಿರುದ್ಧ ಅಂಧರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 308 ರನ್ ಚೇಸ್ ಮಾಡುವುದರ ಮೂಲಕ ಭಾರತ ತಂಡ ವಿಶ್ವಕಪ್ ಗೆದ್ದಿತ್ತು. ಹೀಗೆ ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯದಲ್ಲಿ ಗೆಲ್ಲುವುದರ ಮೂಲಕ ಐತಿಹಾಸಿಕ ದಾಖಲೆ ಮಾಡಿದ ಅಂಧರ ತಂಡದ ಆಟಗಾರನೋರ್ವ ಈ ರೀತಿ ಕೂಲಿ ಕೆಲಸ ಮಾಡಿ ಬದುಕುತ್ತಿರುವುದು ಸದ್ಯ ಅಂಧ ಕ್ರಿಕೆಟಿಗರ ಕುರಿತು ಕ್ರೀಡಾ ಇಲಾಖೆ ಮತ್ತು ಸರಕಾರಗಳು ತೋರುತ್ತಿರುವ ಅಸಹಾಯಕತೆಯ ಸಂಕೇತವಾಗಿದೆ. ಸದ್ಯ ಭಾರತದ ಅಂಧರ ವಿಶ್ವಕಪ್ ವಿಜೇತ ತಂಡದ ಆಟಗಾರನಾಗಿದ್ದ ನರೇಶ್ ತುಮ್ದಾ ಕೂಲಿ ಕೆಲಸ ಮಾಡುತ್ತಿರುವುದರ ಕುರಿತು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಸಿಗುವ ಮನ್ನಣೆ, ಗೌರವ ಮತ್ತು ಉದ್ಯೋಗಾವಕಾಶಗಳು ಅಂಧರ ಕ್ರಿಕೆಟ್ ವಿಶ್ವಕಪ್ ತಂದುಕೊಟ್ಟ ಆಟಗಾರರಿಗೆ ಯಾಕಿಲ್ಲ? ಎಂದು ಕ್ರೀಡಾ ಇಲಾಖೆ ಮತ್ತು ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.
ಮೊದಲೇ ಅಂಧರಾಗಿರುವ ಈ ಆಟಗಾರರು ಸಾಮಾನ್ಯ ಆಟಗಾರರ ರೀತಿ ಇತರ ಕೆಲಸಗಳನ್ನು ಮಾಡಿ ಬದುಕು ಕಟ್ಟಿಕೊಳ್ಳಲು ಕೂಡ ಅಸಾಧ್ಯ. ಕಣ್ಣೇ ಇಲ್ಲದೆ ಐತಿಹಾಸಿಕ ಸಾಧನೆ ಮಾಡಿರುವ ಇಂಥವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ, ಸಮಾಜದಲ್ಲಿ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡದ ಕ್ರೀಡಾ ಇಲಾಖೆ ಮತ್ತು ಕೇಂದ್ರ ಸರ್ಕಾರ ಇರುವುದು ವ್ಯರ್ಥ ಎಂದು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಅಂಧರ ವಿಶ್ವಕಪ್ ಗೆದ್ದಾಗ ಇದೇ ಆಟಗಾರರಿಗೆ ಸಾಲು ಸಾಲು ಶುಭಾಶಯಗಳ ಸುರಿಮಳೆಗಳೇ ಸುರಿದಿದ್ದವು, ನಗದು ಪುರಸ್ಕಾರಗಳ ಆಶ್ವಾಸನೆ ಘೋಷಣೆಯಾಗಿದ್ದವು ಮತ್ತು ಇಂತಹ ಆಟಗಾರರ ಬೆಂಬಲಕ್ಕೆ ಸದಾ ನಿಲ್ಲುತ್ತೇವೆ ಎಂದು ಹಲವಾರು ಮಂದಿ ಹೇಳಿಕೆಗಳನ್ನು ನೀಡಿದ್ದರು. ಆದರೆ ಅಂದು ನೀಡಿದ್ದ ಹೇಳಿಕೆಗಳು ಮತ್ತು ಆಶ್ವಾಸನೆಗಳು ಈಗ ಯಾವುದೂ ಸಹ ನಿಜವಾಗಿಲ್ಲ, ಹೀಗಾಗಿಯೇ ಇಂದು ನರೇಶ್ ತುಮ್ದಾ ಇಟ್ಟಿಗೆ ಹೊರುವಂತಹ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.
Gujarat: Naresh Tumda, part of team that helped India win 2018 Blind Cricket World Cup, now works as a labourer in Navsari to earn livelihood
— ANI (@ANI) August 8, 2021
"I earn Rs 250 a day. Requested CM thrice but didn't get reply. I urge govt to give me job so that I can take care of my family," he said pic.twitter.com/NK4DFO6YYC
(Kannada Copy of Gizbot Kannada)
The COVID-19 pandemic and the lockdown that was announced has forced several people across the country to lose their livelihoods. Now, even as the country seems to be limping back to normalcy, there are people that are still struggling to restore any semblance of normalcy into their lives. One among them is visually-impaired cricketer Naresh Tumda from Gujarat. He was part of the Indian side that won the Blind cricket World Cup in 2018. Now, only three years after this victory, Tumda is working as a labourer in Gujarat’s Navsari to earn his livelihood.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
16-03-25 10:43 am
Mangalore Correspondent
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm