ಬ್ರೇಕಿಂಗ್ ನ್ಯೂಸ್
07-07-21 02:42 pm MYKHEL: Madhukara Shetty ಕ್ರೀಡೆ
ಭಾರತೀಯ ಹಾಕಿ ತಂಡದ ಸದಸ್ಯರಾಗಿದ್ದು ಎರಡು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ತಂಡದ ಸದಸ್ಯರಾಗಿದ್ದ ಕೇಶವ್ ದತ್ ನಿಧನರಾಗಿದ್ದಾರೆ. 95ರ ಹರೆಯದ ಕೇಶವ್ ದತ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೊಲ್ಕತ್ತಾದ ಸಂತೋಷ್ಪುರ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಭಾರತೀಯ ಹಾಕಿಯ ಸುವರ್ಣ ಕಾಲದಲ್ಲಿ ಕೇಶವ್ ದತ್ ಭಾರತದ ತಂಡದ ಭಾಗವಾಗಿದ್ದರು. 1948ರ ಒಲಿಂಪಿಕ್ಸ್ನಲ್ಲಿ ಆತಿಥೇಯ ಬ್ರಿಟನ್ ತಂಡವನ್ನು ಲಂಡನ್ನ ವಿಂಬ್ಲೇ ಸ್ಟೇಡಿಯಂನಲ್ಲಿ 4-0 ಅಂತರದಿಂದ ಭಾರತ ಗೆದ್ದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತ್ತು. ಇದು ಸ್ವತಂತ್ರ ಭಾರತದ ಪ್ರಥಮ ಒಲಿಂಪಿಕ್ಸ್ ಚಿನ್ನದ ಪದಕವಾಗಿತ್ತು, ಈ ತಂಡದ ಸದಸ್ಯರಾಗಿದ್ದರು ಕೇಶವ್ ದತ್. ಇದಕ್ಕೂ ಮುನ್ನ ಕೇಶವ್ ದತ್ 1947ರಲ್ಲಿ ಭಾರತೀಯ ಹಾಕಿಯ ದಂತಕತೆ ಮೇಜರ್ ಧ್ಯಾನ್ಚಂದ್ ಅವರ ನೇತೃತ್ವದಲ್ಲಿ ಪೂರ್ವ ಆಫ್ರಿಕಾಗೆ ಪ್ರವಾಸಕೈಗೊಂಡಿದ್ದರು.
1925ರ ಡಿಸೆಂಬರ್ 29ರಂದು ಈಗ ಪಾಕಿಸ್ತಾನದಲ್ಲಿರುವ ಲಾಹೋರ್ನಲ್ಲಿ ದತ್ ಜನಿಸಿದರು. ಇವರು 1952ರ ಹೆಲ್ಸಿಂಕಿ ಒಲಿಂಪಿಕ್ಸ್ನಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇಲ್ಲಿ ನೆದರ್ಲ್ಯಾಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ 6-1 ಅಂತರದಿಂದ ಗೆದ್ದು ಸತತ ಐದನೇ ಬಾರಿಗೆ ಭಾರತ ಒಲಿಂಪಿಕ್ಸ್ ಹಾಕಿ ಚಾಂಪಿಯನ್ ಎನಿಸಿತ್ತು. ಇದು ದತ್ ಅವರ ಎರಡನೇ ಚಿನ್ನದ ಪದಕವಾಗಿತ್ತು. ಕೇಶವ್ ದತ್ ನಿಧನಕ್ಕೆ ಹಾಕಿ ಇಂಡಿಯಾದ ಅಧ್ಯಕ್ಷ ಗ್ಯಾನೇಂದ್ರೋ ನಿಂಗೋಂಬಮ್ ಪ್ರತಿಕ್ರಿಯೆ ನೀಡಿದ್ದಾರೆ. "ಇಂದು ಮುಂಜಾನೆ ದಿಗ್ಗಜ ಹಾಕಿ ಪಟು ಕೇಶವ್ ದತ್ ಅವರ ನಿಧನದ ಸುದ್ದಿ ಕೇಳಿ ಬೇಸರವುಂಟಾಗಿದೆ.
1948 ಹಾಗೂ 1952ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಭಾರತದ ಹಾಕಿ ತಂಡದಲ್ಲಿದ್ದು ಈಗ ಜೀವಂತವಿದ್ದ ಒಬ್ಬರೇ ವ್ಯಕ್ತಿ ಅವರಾಗಿದ್ದರು. ಇಂದು ನಿಜವಾಗಿಯೂ ಒಂದು ಯುಗದ ಅಂತ್ಯವಾದಂತೆ ಭಾಸವಾಗುತ್ತಿದೆ" ಎಂದು ಸ್ಮರಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ದಿಗ್ಗಜ ಹಾಕಿ ಆಟಗಾರನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
(Kannada Copy of Mykhel Kannada)
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm