ಬ್ರೇಕಿಂಗ್ ನ್ಯೂಸ್
26-04-21 03:36 pm Source: MYKHEL ಕ್ರೀಡೆ
ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಗ್ಗರಿಸಿತ್ತು. ಬೌಲಿಂಗ್ ಸಂದರ್ಭದಲ್ಲಿಯೂ ಉತ್ತಮ ಆಟ ಪ್ರದರ್ಶಿಸಿದ್ದ ಆರ್ಸಿಬಿ ಅಂತಿಮ ಓವರ್ನಲ್ಲಿ ಎಡವಿತ್ತು. ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್ನಲ್ಲಿ ಜಡೇಜಾ ಐದು ಸಿಕ್ಸರ್ ಸಹಿತ 37 ರನ್ ಸಿಡಿಸಿದರು. ಇದು ಚೆನ್ನೈ ಬೃಹತ್ ಮೊತ್ತ ಪೇರಿಸಲು ಕಾರಣವಾಗಿತ್ತು.
ಈ ಪಂದ್ಯದ ಮುಕ್ತಾಯದ ಬಳಿಕ ಆಲ್ರೌಂಡರ್ ರವೀಂದ್ರ ಜಡೇಜಾ ಪ್ರತಿಕ್ರಿಯಿಸಿದ್ದಾರೆ. ಆರ್ಸಿಬಿ ತಂಡದ ಪ್ರಮುಖ ವೇಗಿ ಹರ್ಷಲ್ ಪಟೇಲ್ ಎಸೆತವನ್ನು ಸತತವಾಗಿ ಸಿಕ್ಸರ್ಗೆ ಅಟ್ಟುವಲ್ಲಿ ನಾನ್ ಸ್ಟ್ರೈಕ್ನಲ್ಲಿದ್ದ ನಾಯಕ ಎಂಎಸ್ ಧೋನಿ ನೀಡಿದ ಒಂದು ಸಲಹೆ ಉಪಯುಕ್ತವಾಯಿತು ಎಂದಿದ್ದಾರೆ.
ಇದಕ್ಕಿಂತ ಅದ್ಭುತ ದಿನ ಇರಲಾರದು
ವಾಂಖೆಡೆ ಅಂಗಳದಲ್ಲಿ ನಡೆದ ಪಂದ್ಯದ ಮುಕ್ತಾಯದ ನಂತರ ಜಡೇಜಾ ಅವರಲ್ಲಿ ಇದಕ್ಕಿಂತ ಉತ್ತಮವಾದ ದಿನ ಇದೆ ಎನಿಸುತ್ತದೆಯಾ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಜಡೇಜಾ "ಇಲ್ಲ, ನನಗೆ ಅನಿಸುತ್ತಿಲ್ಲ. ನಾನು ಸಾಕಷ್ಟು ಆನಂದಿಸಿದ್ದೇನೆ. ನಿಮ್ಮ ತಂಡ ಗೆಲ್ಲುವಲ್ಲಿ ನಿಮ್ಮ ಪಾತ್ರ ದೊಡ್ಡದಿದ್ದರೆ ಆಗ ಅದು ತುಂಬಾ ತೃಪ್ತಿಕರವಾಗಿರುತ್ತದೆ. ನನ್ನ ಫಿಟ್ನೆಸ್, ಕೌಶಲ್ಯ ಎಲ್ಲದರ ಮೇಲೆಯೂ ನಾನು ಸಾಕಷ್ಟು ಶ್ರಮಪಟ್ಟಿದ್ದೇನೆ. ಅದಕ್ಕೆ ಇಮದು ಫ್ರತಿಫಲ ದೊರೆತಿದೆ" ಎಂದು ಜಡೇಜಾ ಪ್ರತಿಕ್ರಿಯಿಸಿದರು
ಮಾಹಿ ಭಾಯ್ ನೀಡಿದ ಸಲಹೆ
"ಅಂತಿಮ ಓವರ್ನಲ್ಲಿ ನಾನು ದೊಡ್ಡ ಹೊಡೆತವನ್ನು ಬಾರಿಸಲು ಎದುರು ನೋಡುತ್ತಿದ್ದೆ. ಆಗ ಮಾಹಿ ಭಾಯ್ ನನಗೆ ಸಲಹೆಯೊಂದನ್ನು ನೀಡಿದರು. ಹರ್ಷಲ್ ಪಟೇಲ್ ಆಫ್ಸ್ಟಂಪ್ನ ಆಚೆಗೆ ಚೆಂಡೆಸುತ್ತಾನೆ ಎಂದಿದ್ದರು. ನಾನು ಅದಕ್ಕಾಗಿ ಸಿದ್ಧನಾಗಿ ನಿಂತಿದ್ದೆ. ಅದೃಷ್ಟವಶಾತ್ ನನಗೆ ಉತ್ತಮವಾಗಿ ಚೆಂಡು ಬಂದಿತ್ತು. ಹಾಗಾಗಿ 191 ರನ್ಗಳಿಸಲು ಸಾಧ್ಯವಾಗಿದೆ" ಎಂದು ಜಡೇಜಾ ಪ್ರತಿಕ್ರಿಯಿಸಿದರು.
ಶೂನ್ಯಕ್ಕೆ ಜೀವದಾನ ಪಡೆದಿದ್ದ ಜಡ್ಡು
ಆರ್ಸಿಬಿ ಚೆನ್ನೈ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತ್ತು. ಅದರಲ್ಲೂ ರವೀಂದ್ರ ಜಡೇಜಾ ಒಂದು ರನ್ ಗಳಿಸುವ ಮುನ್ನವೇ ಜೀವದಾನವೊಂದನ್ನು ಪಡೆದುಕೊಂಡಿದ್ದರು. ವಾಶಿಂಗ್ಟನ್ ಸುಂದರ್ ಎಸೆದ ಎಸೆತವನ್ನು ಬಾರಿಸಿದ ಜಡ್ಡು ನೇರವಾಗಿ ಡೇನಿಯಲ್ ಕ್ರಿಶ್ಚಿಯನ್ ಕೈಗೆ ನೀಡಿದ್ದರು. ಆದರೆ ಅದನ್ನು ಅವರು ಕೈಚೆಲ್ಲಿ ತಂಡಕ್ಕೆ ದೊಡ್ಡ ಹಾನಿಯುಂಟಾಗಲು ಕಾರಣರಾದರು. ಇದರ ಲಾಭವನ್ನು ಜಡೇಜಾ ಅದ್ಭುತವಾಗಿ ಬಳಸಿಕೊಂಡರು.
ಅಂಕಪಟ್ಟಿಯಲ್ಲಿ ಚೆನ್ನೈ ಟಾಪ್
ಆರ್ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವು ಅಂಕಪಟ್ಟಿಯಲ್ಲಿ ಧೋನಿ ಬಳಗ ಮತ್ತೆ ನಂಬರ್ 1 ಸ್ಥಾನ ಅಲಂಕರಿಸಲು ಕಾರಣವಾಗಿದೆ. ಗೆಲುವಿನ ಅಜೇಯ ಓಟವನ್ನು ಮುಂದುವರಿಸಿದ್ದ ಆರ್ಸಿಬಿಗೆ ಸಿಎಸ್ಗೆ ತಡೆಯೊಡ್ಡಿದೆ. ಹೀಗಾಗಿ ಆರ್ಸಿಬಿ ಎರಡನೇ ಸ್ಥಾನಕ್ಕೆ ಇಳಿದಿದೆ.
This News Article Is A Copy OF MYKHEL
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
16-03-25 10:43 am
Mangalore Correspondent
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm