ಬ್ರೇಕಿಂಗ್ ನ್ಯೂಸ್
08-03-21 03:51 pm source: MYKHEL ಕ್ರೀಡೆ
ನವದೆಹಲಿ: 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಸಿದ್ಧತೆಗಳು ನಡೆಯುತ್ತಿವೆ. ಈ ವಾರದಲ್ಲಿ ಒಂದಿಷ್ಟು ತಂಡಗಳು ಅಭ್ಯಾಸ ಆರಂಭಿಸಲಿವೆ. ಏಪ್ರಿಲ್ 9ರಂದು ಆರಂಭಗೊಳ್ಳುವ 2021ರ ಐಪಿಎಲ್ ಮೇ 30ರಂದು ಫೈನಲ್ನೊಂದಿಗೆ ಕೊನೆಗೊಳ್ಳಲಿದೆ. ಈ ಬಾರಿ ಭಾರತದಲ್ಲೇ ಐಪಿಎಲ್ ನಡೆಯುತ್ತಿದೆ. ಕೊರೊನಾವೈರಸ್ ಕಾರಣ 2020ರ ಸೀಸನ್ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆದಿತ್ತು.
ಒಂದು ಬಾರಿಯೂ ಐಪಿಎಲ್ ಟ್ರೋಫಿ ಗೆಲ್ಲದ ತಂಡಗಳ ಸಾಲಿನಲ್ಲಿರುವ ಪಂಜಾಬ್ ಕಿಂಗ್ಸ್ (ಹಿಂದಿನ ಕಿಂಗ್ಸ್ XI ಪಂಜಾಬ್) ಈ ಬಾರಿ ಉತ್ತಮ ಪ್ರದರ್ಶನ ನೀಡುವ ಗುರಿಯನ್ನಿಟ್ಟುಕೊಂಡಿದೆ. ಈ ಬಾರಿ ಪಂಜಾಬ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸ್ಪರ್ಧೆ ಆರಂಭಿಸಲಿದೆ.

ಒಟ್ಟು 52 ದಿನಗಳ ಟೂರ್ನಿ
ಐಪಿಎಲ್ಗಾಗಿ ಮುಂಬೈ, ಬೆಂಗಳೂರು, ಅಹ್ಮದಾಬಾದ್, ಚೆನ್ನೈ, ಕೋಲ್ಕತ್ತಾ ಮತ್ತು ದೆಹಲಿ ತಾಣಗಳನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಂತಿಮಗೊಳಿಸಿದೆ. ಒಟ್ಟು 52 ದಿನಗಳ ಕಾಲ ಟೂರ್ನಿ ನಡೆಯಲಿದ್ದು, ಟೂರ್ನಿಯು 60 ಪಂದ್ಯಗಳನ್ನು ಒಳಗೊಂಡಿರಲಿದೆ.

ಪಂಜಾಬ್ ತಂಡ
(ಕೆಎಲ್ ರಾಹುಲ್ ಮುಂದಾಳತ್ವದ ಪಂಜಾಬ್ ಕಿಂಗ್ಸ್ ಸಂಪೂರ್ಣ ತಂಡ ಹೀಗಿದೆ) ಮಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ಕೆ.ಎಲ್. ರಾಹುಲ್, ದೀಪಕ್ ಹೂಡಾ, ಕ್ರಿಸ್ ಗೇಲ್, ಅರ್ಷ್ ದೀಪ್ ಸಿಂಗ್, ನಿಕೋಲಸ್ ಪೂರನ್, ಶಾರುಖ್ ಖಾನ್, ಮಂದೀಪ್ ಸಿಂಗ್, ದರ್ಶನ್ ನಾಲ್ಕಂಡೆ, ಪ್ರಭ್ಸಿಮ್ರಾನ್ ಸಿಂಗ್, ಮೊಯಿಸಸ್ ಹೆನ್ರಿಕ್ಸ್, ಸರ್ಫರಾಜ್ ಖಾನ್, ಹರ್ದೀಪ್ ಬ್ರಾನ್, ಆಶ್ ಫ್ಯಾಬಿಯಾನ್ , ಜಲಜ್ ಸಕ್ಸೇನಾ, ಇಶಾನ್ ಪೊರೆಲ್, ಸೌರಭ್ ಕುಮಾರ್, ರವಿ ಬಿಷ್ಣೋಯ್, ಉತ್ಕರ್ಶ್ ಸಿಂಗ್, ಕ್ರಿಸ್ ಜೋರ್ಡಾನ್, ಜಾಯೆ ರಿಚರ್ಡ್ಸನ್, ರಿಲೆ ಮೆರೆಡಿತ್.

ಪಂಜಾಬ್ ಕಿಂಗ್ಸ್ ವೇಳಾಪಟ್ಟಿ
* ಎಪ್ರಿಲ್ 12, ಮುಂಬೈ, ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್, 7:30 PM
* ಎಪ್ರಿಲ್ 16, ಮುಂಬೈ, ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್, 7:30 PM
* ಏಪ್ರಿಲ್ 18, 2021, ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್, 7.30 PM
* ಏಪ್ರಿಲ್ 21, 2021, ಚೆನ್ನೈ, ಪಂಜಾಬ್ ಕಿಂಗ್ಸ್ vs ಸನ್ರೈಸರ್ಸ್ ಹೈದರಾಬಾದ್, 3.30 PM
* ಏಪ್ರಿಲ್ 23, 2021, ಚೆನ್ನೈ, ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್, 7.30 PM
* ಏಪ್ರಿಲ್ 26, 2021, ಅಹಮದಾಬಾದ್, ಪಂಜಾಬ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, 7.30 PM
* ಏಪ್ರಿಲ್ 30, 2021, ಅಹಮದಾಬಾದ್, ಪಂಜಾಬ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 7.30 PM
* ಮೇ 2, 2021, ಅಹಮದಾಬಾದ್, ಪಂಜಾಬ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್, 7.30 PM
* ಮೇ 6, 2021, ಅಹಮದಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್, 7.30 PM
* ಮೇ 9, 2021, ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ vs ಪಂಜಾಬ್ ಕಿಂಗ್ಸ್, 3.30 PM
* ಮೇ 13, 2021, ಬೆಂಗಳೂರು, ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್, 3.30 PM
* ಮೇ 15, 2021, ಬೆಂಗಳೂರು, ಕೋಲ್ಕತಾ ನೈಟ್ ರೈಡರ್ಸ್ vs ಪಂಜಾಬ್ ಕಿಂಗ್ಸ್, 7.30 PM
* ಮೇ 19, 2021, ಬೆಂಗಳೂರು, ಸನ್ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್, 7.30 PM
* ಮೇ 22, 2021, ಬೆಂಗಳೂರು, ಪಂಜಾಬ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್, 7.30 PM
This News Article Is A Copy Of MYKHEL
14-01-26 03:34 pm
Bangalore Correspondent
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
14-01-26 03:15 pm
Mangalore Correspondent
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
14-01-26 05:22 pm
HK News Desk
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm