ಬ್ರೇಕಿಂಗ್ ನ್ಯೂಸ್
10-01-21 02:46 pm Source: MYKHEL Sadashiva ಕ್ರೀಡೆ
ಬುಡಾಪೆಸ್ಟ್: ಒಲಿಂಪಿಕ್ನಲ್ಲಿ ಬಂಗಾರದ ಪದಕ ಗೆದ್ದಿರುವ ಹಂಗೆರಿಯ ಆ್ಯಗ್ನೆಸ್ ಕೆಲೆಟಿ 2021 ಜನವರಿ 9ಕ್ಕೆ ಭರ್ತಿ 100ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಜಿಮ್ನ್ಯಾಸ್ಟಿಕ್ನಲ್ಲಿ ಕೆಲೆಟಿ ಒಟ್ಟು 10 ಪದಕಗಳನ್ನು ಗೆದ್ದ ಗಟ್ಟಿಗಿತ್ತಿ. ಇದರಲ್ಲಿ 5 ಚಿನ್ನದ ಪದಕಗಳೂ ಸೇರಿವೆ.
ತನ್ನ 100ನೇ ವರ್ಷದ ಹುಟ್ಟುಹಬ್ಬವನ್ನು ಆ್ಯಗ್ನೆಸ್ ಕೆಲೆಟಿ ಅವರು ತನ್ನ ತವರೂರಾದ ಬುಡಾಪೆಸ್ಟ್ನಲ್ಲಿ ಶನಿವಾರ ಆಚರಿಸಿಕೊಂಡಿದ್ದಾರೆ. ಈ ದಿನ ಕೆಲೆಟಿ ಅವರು ತನ್ನ ಬದುಕಿನ ಸಾಧನೆಗಳು, ಸಾಹಸ, ದುಃಖಕರ ಸಂಗತಿಗಳು, ಪರಿಶ್ರಮ ಇವನ್ನೆಲ್ಲ ಕಣ್ಣೆದುರು ತಂದುಕೊಂಡು ಸಣ್ಣದಾಗಿ ವಿವರಿಸಿದರು.
ಶನಿವಾರ ಬುಡಾಪೆಸ್ಟ್ನಲ್ಲಿ ತನ್ನ 100ನೇ ಹುಟ್ಟುಹಬ್ಬವನ್ನು ಆಚರಿಸುತ್ತ ಕೆಲೆಟಿ, 'ನನಗೀಗ 60 ವರ್ಷ ವಯಸ್ಸಾದಂತೆಯೇ ಭಾಸವಾಗುತ್ತಿದೆ,' ಎಂದಿದ್ದಾರೆ. 'ದ ಕ್ವೀನ್ ಆಫ್ ಜಿಮ್ನ್ಯಾಸ್ಟಿಕ್' ಎಂಬ ಹೆಸರು ಇರುವ ಕೆಲೆಟಿಯ ಜೀವನಾಧರಿತ ಪುಸ್ತಕವೂ ಇದೆ.
9 ಜನವರಿ 1921ರಂದು ಜನಿಸಿರುವ ಆಗ್ನೆಸ್ ಕೆಲೆಟಿ, ದ್ವಿತೀಯ ಮಹಾಯುದ್ಧವನ್ನು ಕಂಡವರು. ಮಹಾಯುದ್ಧದಿಂದಾಗಿ 1940 ಮತ್ತು 1944ರ ಒಲಿಂಪಿಕ್ಸ್ ರದ್ದಾದಾಗ ಕೆಲೆಟಿ ವೃತ್ತಿ ಬದುಕಿಗೆ ತೊಂದರೆಯಾಗಿತ್ತು. ಯಹೂದಿ ಮನೆತನದವರಾಗಿದ್ದರಿಂದ ಕೆಲೆಟಿಯನ್ನು ಅವರ ತಂಡದಿಂದ ಹೊರ ಹಾಕಲಾಯ್ತು. ಬಳಿಕ ಕೆಲೆಟಿ ಹಂಗೇರಿಯನ್ ರಾಷ್ಟ್ರದಲ್ಲಿ ತಲೆ ಮರೆಸಿ ಬದುಕಬೇಕಾದ ಸಂದರ್ಭವೂ ಎದುರಾಗಿತ್ತು.
This News Article is a Copy of MYKHEL
Mazal Tov! Agnes Keleti, Hungarian-born, Holocaust survivor, Israeli gymnast, is the oldest living Olympic champion, turning 100 this week (9/1). She is the most decorated female Jewish Olympian of all time and the recipient of the prestigious Israel prize 🥇🤸♀️ pic.twitter.com/hogG54Dxue
— Daniel Meron (@AmbMeron) January 6, 2021
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm