ಬ್ರೇಕಿಂಗ್ ನ್ಯೂಸ್
22-12-20 02:57 pm Source: MYKHEL Sadashiva ಕ್ರೀಡೆ
ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಡೊನಾಲ್ಡ್ ಬ್ರಾಡ್ಮನ್ ಅವರ ಜನಪ್ರಿಯ, ಚೊಚ್ಚಲ ಬ್ಯಾಗಿ ಗ್ರೀನ್ ಕ್ಯಾಪ್ ಅನ್ನು ಆಸ್ಟ್ರೇಲಿಯಾದ ಬ್ಯುಸಿನೆಸ್ ಮ್ಯಾನ್ ಒಬ್ಬರು $340,000ಗೆ (2,51,26,952 ರೂ.) ಖರೀದಿಸಿದ್ದಾರೆ. ಇದು ಹರಾಜೊಂದರಲ್ಲಿ ಕ್ರಿಕೆಟ್ ಸ್ಮರಣಿಕೆಗಾಗಿ ಪಾವತಿಸಿದ ಎರಡನೇ ಅತಿ ಹೆಚ್ಚು ಬೆಲೆಯಾಗಿ ಗುರುತಿಸಿಕೊಂಡಿದೆ.
ಈ ವರ್ಷದ ಆರಂಭದಲ್ಲಿ, ಅಮೆರಿಕಾದ ಗೀತೆ ರಚನೆಕಾರ, ಸಂಗೀತಕಾರ ಕರ್ಟ್ ಕೊಬೈನ್ ಅವರು ಬಳಸಿದ್ದ ಗಿಟಾರ್ ಅನ್ನು (50,25,74,400 ರೂ.) $6.8 ಮಿಲಿಯನ್ ಡಾಲರ್ ಗೆ ಖರೀದಿಸಿದ್ದ, ರೋಡ್ ಮೈಕ್ರೋಫೋನ್ನ ಸ್ಥಾಪಕ ಪೀಟರ್ ಫ್ರೀಡ್ಮನ್ ಅವರು ಬ್ರಾಡ್ಮನ್ ಅವರ ಕ್ಯಾಪ್ ಅನ್ನು ಖರೀದಿಸಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ ದಂತಕತೆ ಶೇನ್ ವಾರ್ನ್ ಅವರ ಟೆಸ್ಟ್ ಕ್ಯಾಪ್ ಈ ವರ್ಷದ ಆರಂಭದಲ್ಲಿ $760,000ಗೆ (5,61,55,412 ರೂ.) ಖರೀದಿಸಲ್ಪಟ್ಟಿತ್ತು. ಇದು ಕ್ರಿಕೆಟ್ ಸ್ಮರಣಾರ್ಥ ವಸ್ತುವೊಂದು ಅತೀ ಹೆಚ್ಚಿಗೆ ಹರಾಜಾದ ವಿಶ್ವ ದಾಖಲೆಗೆ ಕಾರಣವಾಗಿತ್ತು. ಇದಕ್ಕಿಂತ ಕೊಂಚ ಕಡಿಮೆ ಬೆಲೆಗೆ ಡೊನಾಲ್ಡ್ ಕ್ಯಾಪ್ ಹರಾಜಾಗಿದೆ.
ಅಂದ್ಹಾಗೆ, ಸರ್ ಡೊನಾಲ್ಡ್ ಬ್ರಾಡ್ಮನ್ ಅವರು ಈ ಬ್ಯಾಗೀ ಗ್ರೀನ್ ಕ್ಯಾಪ್ ಅನ್ನು 1928ರಲ್ಲಿ ಧರಿಸಿದ್ದರು. ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು 20 ವರ್ಷಗಳ ಕಾಲ ಪ್ರತಿನಿಧಿಸಿದ್ದ ಬ್ರಾಡ್ಮನ್, 1928ರಿಂದ 1948ರವರೆಗೆ 52 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಟೆಸ್ಟ್ನಲ್ಲಿ ವಿಶ್ವದಾಖಲೆಯ 99.94ರ ಸರಾಸರಿಯಲ್ಲಿ ಬ್ರಾಡ್ಮನ್ 6996 ರನ್ ಬಾರಿಸಿದ್ದಾರೆ.
This News Article is a Copy of MYKHEL
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm