ಬ್ರೇಕಿಂಗ್ ನ್ಯೂಸ್
21-06-24 11:26 am HK News Desk ಕ್ರೀಡೆ
ಬ್ರಿಜ್ ಟೌನ್, ಜೂನ್.21: ಸೂರ್ಯ ಕುಮಾರ್ ಯಾದವ್ (53 ರನ್, 28 ಎಸೆತ, 5x4, 3x6) ಬಿರುಸಿನ ಆಟ, ಜಸ್ ಪ್ರೀತ್ ಬುಮ್ರಾ (7/3) ಮಾರಕ ದಾಳಿ ಜೊತೆಗೆ ಸಂಘಟಿತ ಆಟದ ನೆರವಿನಿಂದ ಭಾರತ ತಂಡ ಟಿ 20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೂಪರ್-8 ವಿಭಾಗದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 47 ರನ್ ಗಳಿಂದ ಸೋಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ನಾಯಕ ರೋಹಿತ್ ಶರ್ಮ (8) ವೈಫಲ್ಯ ಮುಂದುವರಿದರೆ ವಿರಾಟ್ ಕೊಹ್ಲಿ(24) ಎಸೆತಕ್ಕೊಂದರಂತೆ ರನ್ ಗಳಿಸಿ ರಶೀದ್ ಖಾನ್ (26/3) ಸ್ಪಿನ್ ಮೋಡಿಗೆ ಸಿಲುಕಿದರು. ಹಿಂದಿನ ಪಂದ್ಯಗಳಲ್ಲಿ ಭಾರತವನ್ನು ಆಧರಿಸಿದ್ದ ರಿಷಬ್ ಪಂತ್ (20) ತಮ್ಮ ಎಂದಿನ ಚಮತ್ಕಾರ ತೋರಿಸುವ ಹಂತದಲ್ಲಿ ರಶೀದ್ ಖಾನ್ ಗೆ ಬಲಿಯಾದರು. ಶಿವಮ್ ದುಬೆ (10) ಆಟವೂ ಸಾಗಲಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಿದ ಸೂರ್ಯ ಹಾಗೂ ಹಾರ್ದಿಕ್ ಪಾಂಡ್ಯ(32 ರನ್, 24 ಎಸೆತ, 3x4, 2x6) 5ನೇ ವಿಕೆಟ್ ಗೆ 60 ರನ್ ಸೇರಿಸಿ ಭಾರತವನ್ನು ಸವಾಲಿನ ಮೊತ್ತದೆಡೆಗೆ ತಂದರು. ಕೊನೆಯಲ್ಲಿ ಅಕ್ಸರ್ ಪಟೇಲ್ ಶ್ರಮದಿಂದ ರೋಹಿತ್ ಪಡೆ 180ರ ಗಡಿ ದಾಟಿತು.
ಭಾರತ ನೀಡಿದ ಸವಾಲು ಬೆನ್ನಟ್ಟಿದ ಅಫ್ಘಾನಿಸ್ತಾನಕ್ಕೆ ರಹಮಾನುಲ್ಲಾ ಗುರ್ಬಾಜ್(11) ಮೊದಲ ಓವರ್ನಲ್ಲೇ ಬಿರುಸಿನ ಆರಂಭವೊದಗಿಸಿದರು. ಆದರೆ ಜಸ್ ಪ್ರೀತ್ ಬುಮ್ರಾ ಮುಂದೆ ಅವರ ಆಟ ನಡೆಯಲಿಲ್ಲ. ಮತ್ತೋರ್ವ ಆರಂಭಿಕ ಜಜಾಯಿ ಕೂಡ ಬುಮ್ರಾ ಬಲೆಗೆ ಬಿದ್ದರು. ಪವರ್ ಪ್ಲೇಯಲ್ಲೇ ದಾಳಿಗಿಳಿದ ಅಕ್ಸರ್ ಪಟೇಲ್ ಕೂಡ ನಿಯಂತ್ರಿತ ಬೌಲಿಂಗ್ ದಾಳಿ ಪ್ರದರ್ಶನ ನೀಡಿ ಗಮನ ಸೆಳೆದರು. ಆರಂಭಿಕ ಏಟಿನ ಬಳಿಕ ಚೇತರಿಸಿಕೊಳ್ಳಲು ಪರದಾಡಿದ ಅಫ್ಘಾನಿಸ್ತಾನ ಅಂತಿಮವಾಗಿ 134 ರನ್ ಗೆ ಆಲೌಟಾಗಿ ಸೋಲು ಒಪ್ಪಿಕೊಂಡಿತು.
ಸಂಕ್ಷಿಪ್ತ ಸ್ಕೋರ್: ಭಾರತ 181/8 (20) (ಸೂರ್ಯಕುಮಾರ್ 53, ಹಾರ್ದಿಕ್ 32, ಕೊಹ್ಲಿ 24, ರಿಷಬ್ 20, ರಶೀದ್ 26/3, ಫರೂಕಿ 33/3)
ಅಫ್ಘಾನಿಸ್ತಾನ 20 ಓವರ್ಗಳಲ್ಲಿ 134 ಆಲೌಟ್ (ಒಮರ್ಜಾಯಿ 26, ನಜಿಬುಲ್ಲಾ 19, ಗುಲ್ಬಾದಿನ್ 17, ಬುಮ್ರಾ 7/3, ಅಕ್ಸರ್ 15/1, ಅರ್ಷದೀಪ್ 36/3, ಕುಲದೀಪ್ 32/2).
There were geniuses at play in Bridgetown, wearing the India blue as they cruised to victory in their first Super Eight game against Afghanistan in the T20 World Cup 2024. The pitch, once again, was tough to bat on: slow and offering purchase to everyone willing to roll their fingers across the ball. Suryakumar Yadav, though, found a way to prosper as he often does in T20 cricket, helping his team post an above-par total of 181 for 7. That brought Jasprit Bumrah into the fray and he immediately set about dismantling Afghanistan, his two early strikes leaving them indisposed for the rest of the chase.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
19-08-25 12:54 pm
Mangalore Correspondent
Ullal Police Raid, Sports Winners, Mangalore:...
19-08-25 12:41 pm
ಮನೆ ಕಳ್ಳತನ ಪ್ರಕರಣ ; 30 ಗ್ರಾಮ್ ಬಂಗಾರ ಸಹಿತ ಆರೋಪ...
17-08-25 10:07 pm
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm