ಬ್ರೇಕಿಂಗ್ ನ್ಯೂಸ್
01-09-23 02:11 pm Source: News18 Kannada ಕ್ರೀಡೆ
ನಾಳೆ ಹೈವೋಲ್ಟೇಜ್ ಡೇ ಎಂದರೆ ತಪ್ಪಾಗಲ್ಲ. ಯಾಕೆಂದ್ರೆ ಏಷ್ಯಾ ಕಪ್ನಲ್ಲಿ ಟೀಂ ಇಂಡಿಯಾ ವರ್ಸಸ್ ಪಾಕ್ ಪಂದ್ಯ ಇದೆ. . ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ನಾಸಿಮ್ ಶಾ ಪಾಕಿಸ್ತಾನದ ಪಾಕಿಸ್ತಾನ ತಂಡದ ಮುಖ್ಯ ಅಸ್ತ್ರ ಅಂದ್ರೆ ತಪ್ಪಾಗಲ್ಲ. ಸದ್ಯ ಈ ಮೂವರು ಬೌಲರ್ಗಳು ಕೂಡ ಸೂಪರ್ ಫಾರ್ಮ್ನಲ್ಲಿದ್ದಾರೆ. ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ.
ಏಷ್ಯಾ ಕಪ್ 2023 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸೆಪ್ಟೆಂಬರ್ 2 ರಂದು ನಡೆಯಲಿದೆ. ಭಾರತವನ್ನು ಅಲುಗಾಡಿಸಲು ಸಿದ್ಧ ಎಂದು ಪಾಕಿಸ್ತಾನದ ವೇಗಿ ಮೂವರು ಹೇಳದೆ ಹೇಳಿದ್ದಾರೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್ ಬೌಲ್ ಮಾಡಿದ ಶಾಹೀನ್ ಅಫ್ರಿದಿ ಎರಡು ವಿಕೆಟ್ ಕಬಳಿಸಿದರು. ಆರಂಭದಲ್ಲೇ ಅಫ್ರಿದಿ ಹಾಗೂ ನಸೀಮ್ ಶಾ ವಿಕೆಟ್ ಕಬಳಿಸುವಲ್ಲಿ ಬಲಿಷ್ಠರಾಗಿದ್ದರು.



ನಾಳೆ ಭಾರತವು ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್ ಅವರನ್ನು ಓಪನರ್ ಆಗಿ ಕಳುಹಿಸಬೇಕಾಗುತ್ತದೆ. ಶುಭಮನ್ ಗಿಲ್ಗೆ ಹೋಲಿಸಿದರೆ, ಇಶಾನ್ ಕಿಶನ್ ಆರಂಭದಿಂದಲೇ ಬ್ಯಾಟಿಂಗ್ ಮಾಡಬಲ್ಲರು. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಹ್ಯಾಟ್ರಿಕ್ ಅರ್ಧಶತಕಗಳ ಮೂಲಕ ಮಿಂಚಿದ್ದು ಗೊತ್ತೇ ಇದೆ. ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವಾಡುವ ಇಶಾನ್ ಕಿಶನ್ ಅವರನ್ನು ಓಪನರ್ ಆಗಿ ಕಳುಹಿಸಿದರೆ ಪಾಕ್ ಬೌಲರ್ ಗಳಿಗೆ ಬೆವರಿಳಿಸೋದು ಪಕ್ಕಾ.



ಪಾಕಿಸ್ತಾನದ ಬೌಲರ್ಗಳ ಆತ್ಮವಿಶ್ವಾಸಕ್ಕೆ ಧಕ್ಕೆ ತರಬೇಕಾದರೆ ಆರಂಭದಿಂದಲೇ ಪ್ರತಿದಾಳಿ ನಡೆಸಬೇಕು. ಅದು ಆಗದಿದ್ದರೆ ಪಾಕಿಸ್ತಾನದ ವೇಗಿಗಳು ಭಾರತದ ಮೇಲೆ ಒತ್ತಡ ಹೇರುವ ಅಪಾಯವಿದೆ. ಎಡಗೈ ವೇಗಿಗಳ ಎದುರು ರೋಹಿತ್ ಶರ್ಮಾ ಹಲವು ಬಾರಿ ಎಡವಿದ್ದಾರೆ. ಇಂತಹ ಸಮಯದಲ್ಲಿ ರೋಹಿತ್ ಜೊತೆಗೆ ಇಶಾನ್ ಕಿಶನ್ ಓಪನರ್ ಆಗಿ ಕಣಕ್ಕೆ ಇಳಿದರೆ ಉತ್ತಮ. ಆಗ ರೋಹಿತ್ ಕ್ರೀಸ್ ನಲ್ಲಿ ಉಳಿಯಲು ನಿಧಾನವಾಗಿ ಆಡಿದರೂ, ಈ ಕಡೆ ಇಶಾನ್ ಕಿಶನ್ ಜೋರಾಗಿ ಆಡುವುದರಿಂದ ಸ್ಕೋರ್ ಬೋರ್ಡ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಶುಭಮನ್ ಗಿಲ್ ಅವರನ್ನು ಮೂರನೇ ಸ್ಥಾನದಲ್ಲಿ ಆಡಸಿಬೇಕು, ವಿರಾಟ್ ಕೊಹ್ಲಿಯನ್ನು ನಾಲ್ಕನೇ ಸ್ಥಾನಕ್ಕೆ ಕಳುಹಿಸಬೇಕು. ಆ ನಂತರ ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ ಮತ್ತು ಜಡೇಜಾ ಬ್ಯಾಟಿಂಗ್ ಮಾಡಿದರೆ ಉತ್ತಮ.
India vs Pakistan Asia Cup 2023 Live Cricket Ishan Kishan Should Play as Opener.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm