ಬ್ರೇಕಿಂಗ್ ನ್ಯೂಸ್
28-08-23 02:01 pm Source: News18 Kannada ಕ್ರೀಡೆ
ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಗೋಲ್ಡನ್ ಪದಕಕ್ಕೆ ಮುತ್ತಿಡುತ್ತಿದ್ದಂತೆ ಇಡೀ ದೇಶ ಮಾತ್ರವಲ್ಲದೆ ವಿಶ್ವವೇ ಅವರನ್ನು ಕೊಂಡಾಡುತ್ತಿದೆ. ನೀರಜ್ ಚೋಪ್ರಾಗೆ ತೀವ್ರ ಪ್ರತಿಸ್ಪರ್ಧೆ ಒಡ್ಡಿದ ಪಾಕಿಸ್ತಾನದ ಅರ್ಷದ್ ನದೀಮ್ ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಅರ್ಷದ್ ನದೀಮ್ ಅವರ ಸಾಧನೆಗೂ ಕ್ರೀಡಾಪ್ರೇಮಿಗಳೂ ಭೇಷ್ ಅಂದಿದ್ದಾರೆ. ಈ ಮಧ್ಯೆ ಪದಕ ಸ್ವೀಕಾರ ವೇಳೆ ಕ್ರೀಡಾಂಗಣದಲ್ಲಿ ನಡೆದ ಸನ್ನಿವೇಶವೊಂದು ಎಲ್ಲರ ಗಮನ ಸೆಳೆದಿದ್ದು, ಬಹುತೇಕರ ಮೆಚ್ಚುಗೆಗೆ ಪಾತ್ರವಾಗಿದೆ.
ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರು ಗೆಲುವಿನ ಬಳಿಕ ತ್ರಿವರ್ಣ ಧ್ವಜ ಹಿಡಿದು ಸಂಭ್ರಮ ಆಚರಿಸಿದ್ದಾರೆ. ಇತ್ತ ನೀರಜ್ ಸಂಭ್ರಮದ ಜೊತೆಗೆ ಕಂಚಿನ ಪದಕ ಗೆದ್ದ ಜೆಕ್ ಗಣರಾಜ್ಯದ ಜಾಕೂಬ್ ಕೂಡ ತಮ್ಮ ದೇಶದ ಧ್ವಜ ಹಿಡಿದು ಸಾಥ್ ನೀಡಿದ್ದಾರೆ. ಆದರೆ ಬೆಳ್ಳಿ ಪದಕ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಅವರಲ್ಲಿ ತನ್ನ ದೇಶದ ಧ್ವಜ ಇರಲಿಲ್ಲ. ಹೀಗಾಗಿ ಅವರಿಗೆ ಸಂಭ್ರಮ ಆಚರಿಸಲು ಸಾಧ್ಯವಾಗಿರಲಿಲ್ಲ. ಆಗ ನೀರಜ್ ನೀರಜ್ ಚೋಪ್ರಾ ಅವರು ಪಾಕಿಸ್ತಾನದ ಅರ್ಶದ್ ನದೀಮ್ನನ್ನು ಪಕ್ಕಕ್ಕೆ ಕರೆದಿದ್ದಾರೆ. ಅಷ್ಟು ಮಾತ್ರವಲ್ಲ, ತನ್ನ ಪಕ್ಕ ನಿಲ್ಲಿಸಿಕೊಂಡು ತಿರಂಗದ ಒಂದು ಬದಿಯನ್ನು ಅವರ ಬೆನ್ನಿಗೆ ಹಾಕಿ ಇಬ್ಬರೂ ಜತೆಯಾಗಿ ಫೋಟೋಗೆ ಫೋಸ್ ನೀಡಿದ್ದಾರೆ.
ನೀರಜ್ ಚೋಪ್ರಾ ಬಳಿ ಅರ್ಶದ್ ನದೀಮ್ ಬಂದಾಗ ನಿಮ್ಮ ಧ್ವಜ ಎಲ್ಲಿ ಎಂದು ನೀರಜ್ ಚೋಪ್ರಾ ಕೇಳಿದ್ದಾರೆ. ಆಗ ಅರ್ಶದ್ ನದೀಮ್ ಧ್ವಜ ಕೊಡುವಂತೆ ತಮ್ಮ ಸಹಾಯಕ ಕೋಚ್ಗೆ ಮನವಿ ಮಾಡಿದ್ದಾರೆ. ಆದರೆ ತಕ್ಷಣಕ್ಕೆ ಪಾಕಿಸ್ತಾನ ಧ್ವಜ ಸಿಕ್ಕಿಲ್ಲ. ಹೀಗಾಗಿ ನೀರಜ್ ಚೋಪ್ರಾ, ತ್ರಿವರ್ಣ ಧ್ವಜದಡಿಯಲ್ಲಿ ಪಾಕಿಸ್ತಾನದ ಸ್ಪರ್ಧಿ ಅರ್ಶದ್ ನದೀಮ್ ನಿಲ್ಲಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೀರಜ್ ಚೋಪ್ರಾ ಅವರ ನಡೆಗೆ ಕ್ರೀಡಾಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಖಂಡ ಭಾರತದ ಸಂಕೇತ!
ಇತ್ತ ನೆಟ್ಟಿಗರು ಈ ನಡೆಗೆ ಒಂದಕ್ಕೊಂದು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ನೀರಜ್ ಚೋಪ್ರಾ ಅವರ ನಡೆಗೆ ಬಹುತೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪಾಕಿಸ್ತಾನ ಮತ್ತು ಭಾರತ ಒಂದೇ ತಾಯಿಯ ಮಕ್ಕಳಿದ್ದಂತೆ. ಯಾವುದೇ ಕಾರಣಕ್ಕೆ ದೇಶ ವಿಭಜನೆ ಆಗಿದೆ. ಆದರೆ ಈ ಎರಡೂ ದೇಶಗಳನ್ನು ಒಗ್ಗೂಡಿಸಿ ಅಖಂಡ ಭಾರತವನ್ನಾಗಿ ಮಾಡಬೇಕು ಎಂಬುದು ಕಳೆದ ಅನೇಕ ವರ್ಷದಿಂದ ಮಾತು ಕೇಳಿಬರುತ್ತಿದೆ. ಇಬ್ಬರು ಕ್ರೀಡಾ ಪಟುಗಳು ಭಾರತ ದೇಶದ ಧ್ವಜದ ಅಡಿಯಲ್ಲಿ ಒಗ್ಗೂಡಿದ್ದಾರೆ ಎಂದರೆ ಪಾಕಿಸ್ತಾನ ಭಾರತ ಅಖಂಡವಾಗಿ ಒಗ್ಗೂಡುತ್ತದೆ. ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಮ್ ಅವರ ನಡೆ ಅಖಂಡ ಭಾರತದ ಮೊದಲ ಹೆಜ್ಜೆ ಎಂಬ ರೀತಿಯಲ್ಲಿ ಜನರು ಟ್ವಿಟ್ಟರ್ನಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಪ್ರಶಸ್ತಿ ಪ್ರದಾನವಾದ ನಂತರ ಪಾಕಿಸ್ತಾನದ ಅಥ್ಲೆಟಿಕ್, ಬೆಳ್ಳಿ ಪಾಕಿಸ್ತಾನ ಪರ ಮೊಟ್ಟ ಮೊದಲ ಬೆಳ್ಳಿ ಪದಕ ಗೆದ್ದ ಅರ್ಷದ್ ನದೀಮ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಅವರು ನೀಡಿರುವ ಹೇಳಿಕೆ ಭಾರತೀಯರ ಹೃದಯ ಗೆದ್ದಿದೆ. ತನ್ನ ಹೇಳಿಕಯಲ್ಲಿ ಅರ್ಷದ್ ನದೀಮ್ ಅವರು, ‘ನೀರಜ್ ಚಿನ್ನದ ಪದಕ ಗೆದ್ದಿರುವುದು ತುಂಬಾ ಸಂತೋಷ ತಂದಿದೆ. ಭಾರತ ಮತ್ತು ಪಾಕಿಸ್ತಾನ ವಿಶ್ವದಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಇದೀಗ ಒಲಿಂಪಿಕ್ಸ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಮತ್ತು ಎರಡನೇ ಸ್ಥಾನ ಪಡೆಯಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದ್ದಾರೆ.
ನೆರೆಯ ರಾಷ್ಟ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ಅರ್ಷದ್ ನದೀಮ್ ಅವರ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ಕ್ರೀಡೆಗೆ ಗಡಿಗಳ ಮಿತಿ ಇಲ್ಲ ಅನ್ನೋದನ್ನು ನದೀಮ್ ತೋರಿಸಿದರೆ, ಅವರ ಗಡಿಗಳ ಮೀರಿದ ಚಿಂತನೆ ಕೂಡ ಮೆಚ್ಚುಗೆ ಪಡೆದುಕೊಂಡಿದೆ.
Neeraj Chopras Million Dollar Act After Arshad Nadeem was Left without Pakistan Flag Breaks the Internet.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm