ಬ್ರೇಕಿಂಗ್ ನ್ಯೂಸ್
11-08-23 01:59 pm Source: News18 Kannada ಕ್ರೀಡೆ
ನಾವು ಈಗಾಗಲೇ ಜನಪ್ರಿಯ ಕ್ರಿಕೆಟ್ ಆಟಗಾರರು ಬಳಸಿದ ಬ್ಯಾಟ್ ಮತ್ತು ಜೆರ್ಸಿ ತುಂಬಾನೇ ಜನಪ್ರಿಯತೆಯನ್ನು ಪಡೆದಿದ್ದು, ಹರಾಜಿನಲ್ಲಿ ಅವು ತುಂಬಾನೇ ದೊಡ್ಡ ಮೊತ್ತದ ಬೆಲೆಗೆ ಹರಾಜು ಆಗಿರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ.
ಧೋನಿ ಅವರು 2011 ರ ವಿಶ್ವಕಪ್ ಫೈನಲ್ ನಲ್ಲಿ ಬಳಸಿದ್ರಂತೆ ಈ ಬ್ಯಾಟ್
ಮಹೇಂದ್ರ ಸಿಂಗ್ ಧೋನಿ ಅವರು ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದ ಅವಧಿಯಲ್ಲಿ ಟೀಮ್ ಇಂಡಿಯಾವನ್ನು ಎರಡು ವಿಶ್ವಕಪ್ ನಲ್ಲಿ ಜಯವನ್ನು ತಂದುಕೊಟ್ಟಿದ್ದರು. ಶ್ರೀಲಂಕಾ ವಿರುದ್ಧದ 2011 ರ ವಿಶ್ವಕಪ್ನಲ್ಲಿ ಅವರ ಮೊದಲ ಗೆಲುವಾಗಿತ್ತು ಮತ್ತು ಅವರು ಆಗ ವಿಶ್ವದ ಅತ್ಯಂತ ದುಬಾರಿ ಕ್ರಿಕೆಟ್ ಬ್ಯಾಟ್ ನಿಂದ ಆಡಿದ್ದರು.
ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕ್ರಿಕೆಟಿಗರು ಬಳಸುವ ಹೆಚ್ಚಿನ ಕ್ರಿಕೆಟ್ ಬ್ಯಾಟ್ಗಳು 4000 ದಿಂದ 10,000 ರೂಪಾಯಿಯವರೆಗೆ ಇರುತ್ತವೆ. ಆದರೆ 2011 ರ ವಿಶ್ವಕಪ್ನಲ್ಲಿ ಎಂ.ಎಸ್ ಧೋನಿ ಅವರು ಬಳಸಿದ ಬ್ಯಾಟ್ ಅನ್ನು ವಿಶೇಷವೆಂದು ಪರಿಗಣಿಸಲಾಗಿದೆ ಮತ್ತು ಇದು ಹರಾಜಿನಲ್ಲಿ ಭಾರಿ ಬೆಲೆಗೆ ಮಾರಾಟವಾಯಿತು. ವಿಶ್ವದ ಅತ್ಯಂತ ದುಬಾರಿ ಬ್ಯಾಟ್ ಅಂತೆ ಇದು.
ಇದಕ್ಕೂ ಮೊದಲು ಗ್ರೇ ನಿಕೋಲ್ಸ್ ಬಳಸಿದ್ದು ಅತ್ಯಂತ ದುಬಾರಿ ಬ್ಯಾಟ್ ಆಗಿತ್ತಂತೆ..
ಇದಕ್ಕೂ ಮೊದಲು, ಗ್ರೇ ನಿಕೋಲ್ಸ್ ಲೆಜೆಂಡ್ ಅತ್ಯಂತ ದುಬಾರಿ ಕ್ರಿಕೆಟ್ ಬ್ಯಾಟ್ ಆಗಿತ್ತು, ಇದನ್ನು ವಿಶೇಷ ಇಂಗ್ಲಿಷ್ ವಿಲೋದಿಂದ ತಯಾರಿಸಲಾಗಿತ್ತಂತೆ ಮತ್ತು ಸುಮಾರು 1 ಲಕ್ಷ ರೂಪಾಯಿಗೆ ಇದನ್ನು ಮಾರಾಟ ಮಾಡಲಾಗಿತ್ತು. 2011 ರ ವಿಶ್ವಕಪ್ನ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಆಡುವಾಗ ಎಂ ಎಸ್ ಧೋನಿ ವಿಶ್ವದ ಅತ್ಯಂತ ದುಬಾರಿ ಕ್ರಿಕೆಟ್ ಬ್ಯಾಟ್ನೊಂದಿಗೆ ಆಡಿದ್ದರು.
ಎಂ ಎಸ್ ಧೋನಿ ಅವರ ವಿಶ್ವಕಪ್ ವಿಜೇತ ಬ್ಯಾಟ್ ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಕ್ರಿಕೆಟ್ ಬ್ಯಾಟ್ ಎಂಬ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರಿದೆ. ಈ ಹಿಂದೆ ಧೋನಿ ಬಳಸಿದ ಬ್ಯಾಟ್ನಂತೆಯೇ ಇದ್ದರೂ, ಹರಾಜಿನಲ್ಲಿ ಇದು 83 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ಈ ಬ್ಯಾಟ್ ಅನ್ನು 'ಈಸ್ಟ್ ಮೀಟ್ಸ್ ವೆಸ್ಟ್' ಚಾರಿಟಿಯ ಹರಾಜಿನಲ್ಲಿ ಸೇರಿಸಲಾಗಿತ್ತಂತೆ..
2011 ರ ವಿಶ್ವಕಪ್ನಲ್ಲಿ ಎಂ ಎಸ್ ಧೋನಿ ಅವರ ಕ್ರಿಕೆಟ್ ಬ್ಯಾಟ್ ಅನ್ನು 'ಈಸ್ಟ್ ಮೀಟ್ಸ್ ವೆಸ್ಟ್' ಚಾರಿಟಿ ಡಿನ್ನರ್ ಎಂಬ ಚಾರಿಟಿ ಹರಾಜಿನಲ್ಲಿ ಸೇರಿಸಲಾಗಿದೆಯಂತೆ ಮತ್ತು ಆರ್ ಕೆ ಗ್ಲೋಬಲ್ ಶೇರ್ ಮತ್ತು ಸೆಕ್ಯುರಿಟೀಸ್ ಲಿಮಿಟೆಡ್ ಗೆ 100,000 ಪೌಂಡ್ಗಳಿಗೆ ಎಂದರೆ 83 ಲಕ್ಷ ರೂಪಾಯಿಗೆ ಮಾರಾಟವಾಯಿತು ಎಂದು ಮೆನ್ಸ್ ಎಕ್ಸ್ ಪಿ ಯ ವರದಿ ತಿಳಿಸಿದೆ.
ಎಂ ಎಸ್ ಧೋನಿ ಅವರು ತಮ್ಮ ಅತ್ಯಂತ ಪ್ರಸಿದ್ಧ ಕ್ರಿಕೆಟ್ ವೃತ್ತಿಜೀವನದುದ್ದಕ್ಕೂ ಅನೇಕ ದಾಖಲೆಗಳನ್ನು ಹೊಂದಿದ್ದಾರೆ ಮತ್ತು ಅವರ ವೃತ್ತಿಜೀವನದ ಆರಂಭದಲ್ಲಿ, ಅವರು ಒಂದು ಬ್ಯಾಟ್ ಪ್ರಾಯೋಜಕತ್ವವನ್ನು ಪಡೆಯಲು ಹೆಣಗಾಡಿದ್ದರು ಎಂಬುದನ್ನು ಸಹ ಇಲ್ಲಿ ಗಮನಿಸಬೇಕು. ವಿಶ್ವದ ಅತ್ಯಂತ ದುಬಾರಿ ಬ್ಯಾಟ್ ರೀಬಾಕ್ನೊಂದಿಗೆ ಪ್ರಾಯೋಜಕತ್ವವನ್ನು ಪಡೆದಿತ್ತು.
The Bat Dhoni used in the 2011 World Cup Final is now the Worlds most Expensive Cricket Bat heres its Price.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm