ಬ್ರೇಕಿಂಗ್ ನ್ಯೂಸ್
25-07-23 12:12 pm Source: Vijayakarnataka ಕ್ರೀಡೆ
ಟೀಮ್ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕೆಎಸ್ ಭರತ್ ರೊಂದಿಗೆ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ 2ನೇ ವಿಕೆಟ್ ಕೀಪರ್ ರೂಪದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಪ್ಲೇಯಿಂಗ್ XI ನಿಂದ ಹೊರಬಿದ್ದಿದ್ದ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್, ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ನ 2ನೇ ಇನಿಂಗ್ಸ್ ನಲ್ಲಿ ಉತ್ತಮ ಕ್ಷೇತ್ರ ರಕ್ಷಣೆ ಅಲ್ಲದೆ ಬ್ಯಾಟಿಂಗ್ನಲ್ಲಿ 34 ಎಸೆತಗಳಲ್ಲೇ 52* ರನ್ ಸಿಡಿಸಿ ಗಮನ ಸೆಳೆದಿದ್ದಾರೆ. ಇಶಾನ್ ಕಿಶನ್ ಕುರಿತು ಬಿಸಿಸಿಐ ಮಾಜಿ ಸೆಲೆಕ್ಟರ್ ಸಬಾ ಕರೀಮ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ವಿಕೆಟ್ ಹಿಂದೆ ಚುರುಕಿನ ಕ್ಷೇತ್ರ ರಕ್ಷಣೆ ಮಾಡಿ 3 ಕ್ಯಾಚ್ ಪಡೆದಿದ್ದಲ್ಲದೆ 34 ಎಸೆತಗಳಲ್ಲಿ 52* ರನ್ ಸಿಡಿಸಿ ಮಿಂಚು ಹರಿಸಿರುವ ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ರ ಮೇಲೆ ನಾಯಕ ರೋಹಿತ್ ಶರ್ಮಾ ಹಾಗೂ ಭಾರತ ತಂಡಕ್ಕೆ ಭರವಸೆ ಮೂಡಿದೆ ಎಂದು ಬಿಸಿಸಿಐ ಮಾಜಿ ಸೆಲೆಕ್ಟರ್ ಸಬಾ ಕರೀಮ್ ಗುಣಗಾಣ ಮಾಡಿದ್ದಾರೆ.
2022ರ ಡಿಸೆಂಬರ್ ನಲ್ಲಿ ಟೀಮ್ ಇಂಡಿಯಾದ ಭರವಸೆಯ ವಿಕೆಟ್ ಕೀಪರ್ ರಿಷಭ್ ಪಂತ್ ಕಾರು ಅಪಘಾತದಿಂದಾಗಿ ಟೀಮ್ ಇಂಡಿಯಾ ಸೇವೆ ಕಳೆದುಕೊಂಡ ನಂತರ ಪಂತ್ ರಷ್ಟೇ ಪರಿಣಾಮಕಾರಿ ವಿಕೆಟ್ ಕೀಪರ್ ಹುಡುಕಾಟದಲ್ಲಿದೆ. ಕೆ.ಎಸ್.ಭರತ್ ಗೆ ಬಾರ್ಡರ್- ಗವಾಸ್ಕರ್ ಹಾಗೂ ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಅವಕಾಶ ಕಲ್ಪಿಸಿದರೂ, ಕ್ಷೇತ್ರರಕ್ಷಣೆಯಲ್ಲಿ ಗಮನ ಸೆಳೆದರೂ ರನ್ ಗಳಿಸಲು ವೈಫಲ್ಯ ಅನುಭವಿಸಿದ್ದರು. ವೆಸ್ಟ್ ಇಂಡೀಸ್ ಸರಣಿಗೆ ಭರತ್ ಬದಲಿಗೆ ಇಶಾನ್ ಕಿಶನ್ ಗೆ ಅವಕಾಶ ಕಲ್ಪಿಸಿದ್ದು, ಯುವ ವಿಕೆಟ್ ಕೀಪರ್ ಮೊದಲ ಟೆಸ್ಟ್ ನಲ್ಲಿ ರನ್ ಗಳಿಸಲು ಪರದಾಡಿದರೂ, ದ್ವಿತೀಯ ಟೆಸ್ಟ್ ನಲ್ಲಿ ಕ್ಷೇತ್ರ ರಕ್ಷಣೆ ಹಾಗೂ ಬ್ಯಾಟಿಂಗ್ ಪ್ರದರ್ಶನದಿಂದ ಗಮನ ಸೆಳೆದಿದ್ದು, 34 ಎಸೆತಗಳಲ್ಲೇ 52* ಚೊಚ್ಚಲ ಟೆಸ್ಟ್ ಫಿಫ್ಟಿ ಗಳಿಸಿದ್ದಾರೆ.
ಇಶಾನ್ ಕಿಶನ್ ಪ್ರತಿಭಾನ್ವಿತ
ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ದ್ವಿತೀಯ ಟೆಸ್ಟ್ ನಲ್ಲಿ ತೋರಿದ ಸ್ಫೋಟಕ ಆಟದ ಬಗ್ಗೆ ಜಿಯೋ ಸಿನಿಮಾದಲ್ಲಿ ಮಾತನಾಡಿರುವ ಬಿಸಿಸಿಐ ಮಾಜಿ ಸೆಲೆಕ್ಟರ್ ಸಬಾ ಕರೀಂ," ರಿಷಭ್ ಪಂತ್ ರಂತಹ ವಿಕೆಟ್ ಕೀಪರ್ ಸ್ಥಾನದಲ್ಲಿ ಆಡುವುದು ನಿಜಕ್ಕೂ ಸವಾಲಾತ್ಮಕ ಆಗಿರುತ್ತದೆ. ಕೆ.ಎಸ್.ಭರತ್ ಗೆ ಆಸ್ಟ್ರೇಲಿಯಾದಂತಹ ತಂಡದ ವಿರುದ್ಧ ಹೆಚ್ಚು ಪಂದ್ಯಗಳನ್ನು ಆಡಲು ಅವಕಾಶ ಸಿಕ್ಕಿದ್ದರಿಂದ ಆತನ ವಿಕೆಟ್ ಕೀಪಿಂಗ್ ಕೌಶಲ್ಯ ಸುಧಾರಿಸಲು ಕಾರಣವಾಗಿದೆ" ಎಂದು ಸಬಾ ಕರೀಮ್ ಹೇಳಿದ್ದಾರೆ.
"ವೆಸ್ಟ್ ಇಂಡೀಸ್ ಸರಣಿಯಲ್ಲಿ ಇಶಾನ್ ಕಿಶನ್ ಗೆ ಅವಕಾಶ ಕಲ್ಪಿಸಿದಾಗ ಅವರಿಗೆ ಸ್ಟಂಪ್ ಹಿಂದೆ ತಮ್ಮ ಜವಾಬ್ದಾರಿ ಏನು ಎಂಬುದನ್ನು ತುಂಬಾ ಚೆನ್ನಾಗಿ ಅರಿತುಕೊಂಡು ವಿಕೆಟ್ ಹಿಂದೆ ಅಲ್ಲದೆ ಬ್ಯಾಟಿಂಗ್ ನಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇಶಾನ್ ಕಿಶನ್ ತುಂಬಾ ಕೌಶಲ್ಯತೆ ಹೊಂದಿದ್ದು ಅವರಿಗೆ ಇನ್ನೂ ಹೆಚ್ಚಿನ ಪಂದ್ಯದಲ್ಲಿ ಆಡಲು ಅವಕಾಶ ದೊರೆತರೆ ಅವರು ಮತ್ತಷ್ಟು ಸುಧಾರಣೆ ಕಂಡು ಮುಂದುವರಿಯುವ ವಿಶ್ವಾಸ ಇದೆ" ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
ಕಠಿಣ ಶ್ರಮವಹಿಸಿರುವ ಇಶಾನ್ ಕಿಶನ್
ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ರನ್ ಗಳಿಸಲು ಸಾಕಷ್ಟು ಪರದಾಟ ನಡೆಸಿದ್ದರು, ಆದರೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 34 ಎಸೆತದಲ್ಲಿ 52* ರನ್ ಗಳಿಸುವಲ್ಲಿ ಸಾಕಷ್ಟು ಶ್ರಮ ಪಟ್ಟಿದ್ದಾರೆ ಎಂದು ಸಬಾ ಕರೀಮ್ ಹೇಳಿದ್ದಾರೆ.
"ಯುವ ವಿಕೆಟ್ ಕೀಪರ್ ಇಶಾನ್ ಕಿಶನ್ ಮೊದಲ ಟೆಸ್ಟ್ ಪಂದ್ಯದಲ್ಲಿ ರನ್ ಗಳಿಸಲು ಸಾಕಷ್ಟು ಪರದಾಟ ನಡೆಸಿದ್ದನ್ನು ನಾವು ನೋಡಿದ್ದೇವೆ. ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರು ಸುಲಭವಾಗಿ ರನ್ ಗಳಿಸಿದರೂ, ಇಶಾನ್ ಕಿಶನ್ ರನ್ ಗಳಿಸುವಲ್ಲಿ ಎಡವಿದರು. ಆದರೆ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಠಿಣ ಅಭ್ಯಾಸ ನಡೆಸಿ ಕಮ್ ಬ್ಯಾಕ್ ಮಾಡಿದ್ದಾರೆ," ಎಂದು ಮಾಜಿ ಸೆಲೆಕ್ಟರ್ ಶ್ಲಾಘಿಸಿದ್ದಾರೆ.
"ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ಅವರಿಗೆ ಮೇಲ್ಪಂಕ್ತಿಯಲ್ಲಿ ಬ್ಯಾಟ್ ಮಾಡಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವಕಾಶ ಕಲ್ಪಿಸಿಕೊಟ್ಟಿದ್ದರು. ಭಯಮುಕ್ತವಾಗಿ ಬ್ಯಾಟ್ ಮಾಡಿ ಲೀಲಾಜಾಲವಾಗಿ ರನ್ ಗಳಿಸಿರುವ ಇಶಾನ್ ಕಿಶನ್ ಅವರಿಗೆ ಡಬ್ಲ್ಯುಟಿಸಿ ಪಯಣದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಬೇಕು, ಏಕೆಂದರೆ ಯುವ ವಿಕೆಟ್ ಕೀಪರ್ ಅಂತಹ ಸ್ಫೋಟಕ ಪ್ರದರ್ಶನ ನೀಡಿದ್ದಾರೆ" ಎಂದು ಮಾಜಿ ವಿಕೆಟ್ ಕೀಪರ್ ಹೇಳಿದ್ದಾರೆ.
ಸರಣಿ ಗೆದ್ದ ಭಾರತ
ಫೋರ್ಟ್ ಆಫ್ ಸ್ಪೇನ್ ನ ಕ್ವೀನ್ಸ್ ಪಾರ್ಕ್ ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಅಂತಿಮ ದಿನ ಮಳೆಯ ಕಾಟದಿಂದ ಒಂದು ಎಸೆತವೂ ಎಸೆಯಲು ಸಾಧ್ಯವಾಗದೆ ಡ್ರಾನಲ್ಲಿ ಕೊನೆಗೊಂಡರೂ, ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 141 ರನ್ ಗೆಲುವು ಸಾಧಿಸಿದ್ದ ರೋಹಿತ್ ಶರ್ಮಾ ಪಡೆ 1-0ಯಿಂದ ಸರಣಿ ಗೆದ್ದು ಸಂಭ್ರಮಿಸಿದೆ.
WI vs Ind, Rohit Sharma and team India have started to trust Ishan Kishan says Saba Karim.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm