ಬ್ರೇಕಿಂಗ್ ನ್ಯೂಸ್
22-07-23 03:28 pm Source: Mykhel Kannada ಕ್ರೀಡೆ
ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಬೃಜತ್ ಮೊತ್ತ ಕಲೆಹಾಕಿದೆ. ಟೀಮ್ ಇಂಡಿಯಾ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಎರಡನೇ ದಿನ ಭರ್ಜರಿ ಶತಕವನ್ನು ಪೂರ್ಣಗೋಳಿಸಿದರೆ ರವೀಂದ್ರ ಜಡೇಜಾ ಹಾಗೂ ರವಿ ಚಂದ್ರನ್ ಅಶ್ವಿನ್ ಅದ್ಭುತ ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ 438 ರನ್ಗಳನ್ನು ಕಲೆಹಾಕಿದೆ.
ಮೊದಲ ದಿನದಾಟದ ಅಂತ್ಯದಲ್ಲಿ ಭಾರತ ತಂಡ 288 ರನ್ಗಳನ್ನು ಗಳಿಸಿದ್ದು 4 ವಿಕೆಟ್ ಕಳೆದುಕೊಂಡಿತ್ತು. ಎರಡನೇ ಕೊಹ್ಲಿ 87 ರನ್ಗಳಿಸಿದಲ್ಲಿಂದ ಎರಡನೇ ದಿನದಾಟ ಆರಂಭಿಸಿದರೆ, ರವೀಂದ್ರ ಜಡೇಜಾ 36 ರನ್ನಿಂದ ಆಟವನ್ನು ಮುಂದುವರಿಸಿದರು. ಎರಡನೇ ದಿನ ಅದ್ಭುತ ಶತಕವನ್ನು ಪೂರ್ತಿಗೊಳಿಸಿದ ವಿರಾಟ್ ಕೊಹ್ಲಿ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ 76ನೇ ಶತಕ ಹಾಗೂ 29ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸಿದರು.
ಇನ್ನು ವಿರಾಟ್ ಕೊಹ್ಲಿ 121 ರನ್ಗಳಿಸಿದ ಸಂದರ್ಭದಲ್ಲಿ ರನೌಟ್ ಆಗಯವ ಮೂಲಕ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿದ್ದಾರೆ. ಅದಾದ ಬಳಿಕ ರವೀಂದ್ರ ಜಡೇಜಾ ಕೂಡ 61 ರನ್ಗಳಿಸಿ ತಮ್ಮ ವಿಕೆಟ್ ಕಳೆದುಕೊಂಡರು. ನಂತರ ಇಶಾನ್ ಕಿಶನ್ 25 ರನ್ಗಳಿಸಿ ವಿಕೆಟ್ ಕಳೆದುಕೊಂಡರೆ ಆರ್ ಅಶ್ವಿನ್ ಕೆಳ ಕ್ರಮಾಂಕದಲ್ಲಿ 56 ರನ್ಗಳ ಕೊಡುಗೆ ನೀಡುವ ಮೂಲಕ ಅಮೂಲ್ಯ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 438 ರನ್ಗಳನ್ನು ಗಳಿಸಿ ಆಲೌಟ್ ಆಗಿದೆ.
ಇನ್ನು ವೆಸ್ಟ್ ಇಂಡಿಸ್ ಪರವಾಗಿ ಬೌಲಿಂಗ್ನಲ್ಲಿ ಕೇಮರ್ ರೋಚ್ ಹಾಗೂ ವಾರಿಕನ್ ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಜೇಸನ್ ಹೋಲ್ಡರ್ ಎರಡು ವಿಕೆಟ್ ಪಡೆದರೆ ಗೇಬ್ರಿಯಲ್ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಮತ್ತೊಂದೆಡೆ ವೆಸ್ಟ್ ಇಂಡೀಸ್ ತಂಡ ಕೂಡ ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ ಆರಂಭಿಸಿದ್ದು ಉತ್ತಮ ಆರಂಭ ಪಡೆದುಕೊಂಡಿದೆ. ಆರಂಭಿಕರಾದ ನಾಯಕ ಕ್ರೇಗ್ ಬ್ರಾಥ್ವೇಟ್ ಹಾಗೂ ಟಗೆನರೈನ್ ಚಂದರ್ಪಾಲ್ ಮೊದಲ ವಿಕೆಟ್ಗೆ 71 ರನ್ಗಳ ಜೊತೆಯಾಟ ನೀಡಿದರು. 33 ರನ್ಗಳಿಸಿದ್ದ ಟಗೆನರೈನ್ ಚಂದರ್ಪಾಲ್ ಅವರನ್ನು ರವೀಂದ್ರ ಜಡೇಜಾ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದು ಭಾರತಕ್ಕೆ ಮೊದಲ ಯಶಸ್ಸು ನೀಡಿದ್ದಾರೆ. ಬ್ರೇಥ್ವೆಟ್ ಹಾಗೂ ಕಿರಿಕ್ ಮೆಕೆಂಜಿ ಬ್ಯಾಟಿಂಗ್ ಮುಂದುವರಿಸಿದ್ದು ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ಕಿರ್ಕ್ ಮೆಕೆಂಜಿ, ಜೆರ್ಮೈನ್ ಬ್ಲಾಕ್ವುಡ್, ಅಲಿಕ್ ಅಥಾನಾಜೆ, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೋಮೆಲ್ ವಾರಿಕನ್, ಶಾನನ್ ಗೇಬ್ರಿಯಲ್ ಬೆಂಚ್: ಕೆವಿನ್ ಸಿಂಕ್ಲೇರ್, ರಹಕೀಮ್ ಕಾರ್ನ್ವಾಲ್ ಟೀಮ್ ಇಂಡಿಯಾ ಆಡುವ ಬಳಗ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಮುಖೇಶ್ ಕುಮಾರ್, ಮೊಹಮ್ಮದ್ ಸಿರಾಜ್ ಬೆಂಚ್: ಋತುರಾಜ್ ಗಾಯಕ್ವಾಡ್, ಶ್ರೀಕರ್ ಭರತ್, ಅಕ್ಸರ್ ಪಟೇಲ್, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.
Ind vs WI 2nd test Virat Kohli hit 76th century India in strong position Windies good start.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm