ಬ್ರೇಕಿಂಗ್ ನ್ಯೂಸ್
28-06-23 03:09 pm Source: Vijayakarnataka ಕ್ರೀಡೆ
ಡೆಹ್ರಾಡೂನ್: ವಯಸ್ಸು 30 ದಾಟಿದ ಬಳಿಕ ಫಿಟ್ನೆಸ್ ಸಮಸ್ಯೆ ಬಹುತೇಕರಿಗೆ ಕಾಡಲಿದೆ. ಇದರಿಂದಾಗಿ ಆಟದ ಬಗ್ಗೆ ಆಸಕ್ತಿ ಕಳೆದುಕೊಳ್ಳುವುದು ಸಹಜ. ಅದರಲ್ಲೂ ಓಟದಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದಂತೂ ಕಷ್ಟದ ಮಾತು. ಆದರೆ, 100ರ ವಯಸ್ಸು ದಾಟಿದ ಅಜ್ಜಿಯೊಬ್ಬರು ಓಟದ ಸ್ಪರ್ಧೆಯಲ್ಲಿ ಪದಕಗಳ ಮೇಲೆ ಪದಕಗಳನ್ನು ಗೆದ್ದು ಕ್ರೀಡಾ ಜಗತ್ತಿಗೆ ಅಚ್ಚರಿ ಮೂಡಿಸಿದ್ದಾರೆ ಎಂದರೆ ನಂಬುತ್ತೀರಾ..?
ಹೌದು, ನಂಬಲೇ ಬೇಕು! ಡೆಹ್ರಾಡೂನ್ನಲ್ಲಿ ಸೋಮವಾರ ನಡೆದಿದ್ದ 18ನೇ ನ್ಯಾಷನಲ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಸ್ ಸ್ಪರ್ಧೆಯಲ್ಲಿ 106ರ ಪ್ರಾಯದ ರಾಮ್ಬಾಯಿ ಹೆಸರಿನ ಅಜ್ಜಿ ಮೂರು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ವಯಸ್ಸು ಕೇವಲ ಅಂಕಿಗಳಷ್ಟೆ ಎಂಬುದನ್ನು ಸಾಬೀತುಪಡಿಸಿದ್ದಾರೆ. 100 ಮೀಟರ್ ಹಾಗೂ 200 ಮೀಟರ್ ಓಟ ಮತ್ತು ಶಾಟ್ ಪುಟ್ ಸ್ಪರ್ಧೆಗಳಿಂದ ಒಟ್ಟು ಮೂರು ಚಿನ್ನದ ಪದಕಗಳನ್ನು ರಾಮ್ಬಾಯಿ ಮುಡಿಗೇರಿಸಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಅಂದರೆ ತಮ್ಮ 104ನೇ ವಯಸ್ಸಿನಲ್ಲಿ ರಾಮ್ಬಾಯಿ ಅವರು ಅಥ್ಲೆಟಿಕ್ಸ್ ವೃತ್ತಿ ಜೀವನ ಆರಂಭಿಸಿದ್ದರು ಎಂಬುದು ಇಲ್ಲಿ ವಿಶೇಷ ಸಂಗತಿ. ಅಂದ ಹಾಗೆ ಸೋಮವಾರ ನಡೆದಿದ್ದ 85ಕ್ಕೂ ಹೆಚ್ಚಿನ ವಯೋಮಿತಿಯವರ ಮೂರೂ ವಿಭಾಗಗಳಲ್ಲಿ 3 ರಿಂದ 5 ಮಂದಿಯನ್ನು ರಾಮ್ಬಾಯಿ ಅವರು ಹಿಂದಿಕ್ಕಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಹರಿಯಾಣದ ಚಾರ್ಕಿ ದಾದ್ರಿಯ ಕದ್ಮಾ ಎಂಬ ಸಣ್ಣ ಗ್ರಾಮದಲ್ಲಿ ರಾಮ್ಬಾಯಿ ಅವರು ಜನಿಸಿದ್ದರು. ಇವರು ತಮ್ಮ ಜೀವನದ ಬಹುತೇಕ ಅವಧಿಯನ್ನು ಕೃಷಿ ಹಾಗೂ ಗೃಹಿಣಿಯಾಗಿ ಸವೆಸಿದ್ದರು. ಅಂದಹಾಗೆ ರಾಮ್ಬಾಯಿ ಅವರ ಅಥ್ಲೆಟಿಕ್ಸ್ ಪ್ರಯತ್ನ 2016ರಲ್ಲಿಯೇ ಆರಂಭವಾಗಿತ್ತು. ಆದರೆ, ಅವರು 104ನೇ ವಯಸ್ಸಿನಲ್ಲಿ ವಿಶ್ವ ದಾಖಲೆ ಬರೆಯುವ ಮೂಲಕ ಪ್ರಖ್ಯಾತಿ ಗಳಿಸಿದ್ದರು.
2016ರಲ್ಲಿ ಪಂಜಾಬ್ನ 100ರ ಪ್ರಾಯದ ಕೌರ್ ಎಂಬ ವ್ಯಕ್ತಿ, ಅಮೇರಿಕನ್ ಮಾಸ್ಟರ್ಸ್ನಲ್ಲಿ ಚಿನ್ನ ಗೆದ್ದ ಅತ್ಯಂತ ವೇಗದ ಶತಾಯುಷಿ ಎಂಬ ಸಾಧನೆ ಮಾಡಿದ್ದರು. ಇವರು 100 ಮೀಟರ್ ಸ್ಪ್ರಿಂಟ್ ಅನ್ನು ಒಂದು ನಿಮಿಷ 21 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿದ್ದರು. ಇದಾದ ಬಳಿಕ ಆಕ್ಲೆಂಡ್ನಲ್ಲಿ ನಡೆದಿದ್ದ ವಿಶ್ವ ಮಾಸ್ಟರ್ಸ್ನಲ್ಲಿ 100 ಮೀಟರ್ ಓಟವನ್ನು ಒಂದು ನಿಮಿಷ 14 ಸೆಕೆಂಡ್ಗಳನ್ನು ಮುಗಿಸಿ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದರು.
ರಾಮ್ಬಾಯಿ ಅವರ ಮೊಮ್ಮಗಳು 41ರ ಪ್ರಾಯದ ಶರ್ಮಿಳಾ ಸಂಗ್ವಾನ್ ಅವರು, 100ರ ಪ್ರಾಯದ ಕೌರ್ ಅವರ ಅಥ್ಲೆಟಿಕ್ಸ್ ಸಾಧನೆಯನ್ನು ತಮ್ಮ ಅಜ್ಜಿಗೆ ಹೇಳಿದ್ದರು. ವಯಸ್ಸು 100 ದಾಟಿದರೂ ಕ್ರೀಡೆಯಲ್ಲಿ ಸಾಧನೆ ಮಾಡಬಹುದೆಂದು ತಮ್ಮ ಅಜ್ಜಿಗೆ ಮೊಮ್ಮಗಳು ಸಲಹೆ ನೀಡಿದ್ದರು. ಇದರಿಂದ ಪ್ರೇರಣೆ ಪಡೆದ ರಾಮ್ಬಾಯಿ ಅವರು 104ನೇ ವಯಸ್ಸಿನಲ್ಲಿ ಅಥ್ಲೆಟಿಕ್ಸ್ಗೆ ಇಳಿದು ಈ ಸಾಧನೆ ಮಾಡಿದ್ದಾರೆ.
"ಅತ್ಯಂತ ಹಿರಿಯರ ವಿಭಾಗದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ನನ್ನ ಮೊಮ್ಮಗಳು ಶರ್ಮಿಳಾ ಹೇಳಿದಾಗ ನನಗೆ ಒಂದು ರೀತಿಯ ಹಿಂಜರಿಕೆ ಯಾಗಿತ್ತು. ಹಳ್ಳಿಯಿಂದ ಹೊರ ಬಂದು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಯುವ ಜನತೆಗೆ ಸ್ಪೂರ್ತಿಯಾಗುತ್ತಿರುವುದಕ್ಕೆ ನನಗೆ ತಂಬಾ ಖುಷಿಯಾಗುತ್ತಿದೆ. ನಾನೇ ಕ್ರೀಡೆಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವಾಗ ಯುವಕರು ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು," ಎಂದು ರಾಮ್ಬಾಯಿ ಹೇಳಿದ್ದಾರೆ.
ತರಕಾರಿ, ಹಾಲು ಸೇರಿದಂತೆ ನಿಯಮಿತ ಆಹಾರದ ಜೊತೆಗೆ ಸ್ವಲ್ಪ ಅಭ್ಯಾಸ ಹಾಗೂ ಮೈದಾನದಲ್ಲಿನ ಫಿಟ್ನೆಸ್ನಿಂದಾಗಿ ಸದಾ ಫಿಟ್ ಆಗಿ ಇರಲು ಸಾಧ್ಯವಾಗಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಕೌರ್(ಒಂದು ನಿಮಿಷ, 15 ಸೆಕೆಂಡ್) ಅವರ 100 ಮೀಟರ್ ಓಟದ ದಾಖಲೆಯನ್ನು ರಾಮ್ಬಾಯಿ ಮುರಿದಿದ್ದರು. ಇವರು ವಡೋದರದಲ್ಲಿ ನಡೆದಿದ್ದ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ 100 ಮೀಟರ್ ಓಟವನ್ನು ಕೇವಲ 45.50 ಸೆಕೆಂಡ್ಗಳಲ್ಲಿ ಪೂರ್ಣಗೊಳಿಸಿದ್ದರು. ಅಂದ ಹಾಗೆ ಕಳೆದ ವರ್ಷ ದೇಶಿ ಹಾಗೂ ವಿದೇಶಗಳಲ್ಲಿ ಇವರು ಭಾಗವಹಿಸಿದ್ದ 14 ಸ್ಪರ್ಧೆಗಳಿಂದ 200ಕ್ಕೂ ಹೆಚ್ಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
After crossing the age of 30, most people will face fitness issues. It is natural to lose interest in the game. It's especially difficult to participate in competitions like running. But do you believe that a grandmother who has crossed the age of 100 has surprised the world of sports by winning medals over medals in a race.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm