ಬ್ರೇಕಿಂಗ್ ನ್ಯೂಸ್
24-06-23 03:37 pm Source: News18 Kannada ಕ್ರೀಡೆ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ (WTC Final 2023) ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವ ಇಂಗ್ಲೆಂಡ್ನ ಓವೆಲ್ನಲ್ಲಿ ಫೈನಲ್ ಹಣಾಹಣಿ ನಡೆದಿತ್ತು. ಆದರೆ ಅಂತಿಮವಾಗಿ ಟ್ರೋಫಿ ಆಸ್ಟ್ರೇಲಿಯಾದ ಕೈ ಸೇರುವ ಮೂಲಕ ಭಾರತ ತಂಡಕ್ಕೆ ಸತತ 2ನೇ ಬಾರಿ ನಿರಾಸೆ ಉಂಟಾಗಿದೆ. ಆದರೆ ಈ ಫೈನಲ್ನಲ್ಲಿ ಕೆಲವು ದಾಖಲೆಗಳೂ ಸೃಷ್ಟಿಯಾಗಿದೆ. ಈ ಅಂತಿಮ ಪಂದ್ಯವು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಟೆಸ್ಟ್ ಪಂದ್ಯ (Test Cricket) ಎಂದು ಸಾಬೀತಾಯಿತು ದಾಖಲೆ ನಿರ್ಮಿಸಿದೆ. ಇದನ್ನು BARC ದೃಢಪಡಿಸಿದೆ. ಇದುವರೆಗೆ ಟೆಸ್ಟ್ ಇತಿಹಾಸದಲ್ಲಿ ಇಂಥದ್ದೊಂದು ಸಂಖ್ಯೆ ಕಂಡಿರಲಿಲ್ಲ ಎಂದು ಹೇಳಲಾಗಿದೆ.
ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯ:
BARC ಪ್ರಕಾರ, 124 ಮಿಲಿಯನ್ ವೀಕ್ಷಕರು ಈ ಫೈನಲ್ ಅನ್ನು ಆನಂದಿಸಿದ್ದಾರೆ, ಇದು ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕೊನೆಯ ಫೈನಲ್ನ ಪ್ರೇಕ್ಷಕರಿಗಿಂತ 32 ಶೇಕಡಾಕ್ಕಿಂತ ಹೆಚ್ಚು. ಬ್ರಾಡ್ಕಾಸ್ಟರ್ ನೇರ ಪ್ರಸಾರದಲ್ಲಿ 14.4 ಶತಕೋಟಿ ನಿಮಿಷಗಳ ವೀಕ್ಷಣೆ ಸಮಯವನ್ನು ಸಹ ಹೊಂದಿದೆ. ಪ್ರಸಾರಕ ವರ್ಷಗಳಲ್ಲಿ ವೀಕ್ಷಕರಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿದೆ. ಏಷ್ಯಾಕಪ್ 2022 ಕೂಡ ಹಿಂದಿನ ಆವೃತ್ತಿಗೆ ಹೋಲಿಸಿದರೆ ಶೇಕಡಾ 16ರಷ್ಟು ಏರಿಕೆ ಕಂಡಿದೆ. ಈಗ ಮುಂಬರುವ ಏಷ್ಯಾಕಪ್ ಒನ್ ಡೇ ವರ್ಲ್ಡ್ ಪಂದ್ಯಾವಳಿಗಳಲ್ಲಿ ಜನರು ಹಾಟ್ಸ್ಟಾರ್ನಲ್ಲಿ ಈ ದಾಖಲೆ ಮುರಿಯುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ತಂಡದ ವಿಶೇಷ ಸಾಧನೆ:
ಟೀಂ ಇಂಡಿಯಾ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಬೇಕಾಯಿತು. ಇದಾದ ನಂತರ ಭಾರತ ತಂಡ ಭಾರೀ ಟೀಕೆಗಳನ್ನು ಎದುರಿಸಬೇಕಾಯಿತು. ಇದೀಗ ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಎರಡು ಟೆಸ್ಟ್ ಪಂದ್ಯಗಳೊಂದಿಗೆ ಹೊಸ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಋತುವನ್ನು ಪ್ರಾರಂಭಿಸಲಿದೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ತಂಡವು ಈಗ ಎಲ್ಲಾ ಮೂರು ಸ್ವರೂಪಗಳಲ್ಲಿ ಐಸಿಸಿ ಟ್ರೋಫಿಯನ್ನು ಗೆದ್ದ ತಂಡವಾಗಿದೆ. ಆ್ಯಶಸ್ನಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಸೆಣಸುತ್ತಿದೆ. ಅಲ್ಲದೇ ಈ ಮಹತ್ವದ ಸರಣಿಯಲ್ಲಿ ಈಗಾಗಲೇ ಆಸೀಸ್ 1-0 ಮುನ್ನಡೆ ಸಾಧಿಸಿದೆ.
ಟೀಂ ಇಂಡಿಯಾ ಮುಂದಿನ WTC ವೇಳಾಪಟ್ಟಿ:
ಭಾರತೀಯ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ICC ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ರ (WTC 2023-25) ಮೂರನೇ ಆವೃತ್ತಿಯನ್ನು ಪ್ರಾರಂಭಿಸಲಿದೆ. ಜುಲೈ 12 ರಿಂದ ಟೀಂ ಇಂಡಿಯಾ ವಿಂಡೀಸ್ ಪ್ರವಾಸ ಆರಂಭವಾಗಲಿದೆ. ಭಾರತ ತಂಡವು ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಟೆಸ್ಟ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಅದರ ಭಾಗವಾಗಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಬಾಂಗ್ಲಾ ವಿರುದ್ಧ 2 ಟೆಸ್ಟ್ ಹಾಗೂ ಕಿವೀಸ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯು ಡಿಸೆಂಬರ್ನಿಂದ ಜನವರಿ 2024ರ ವರೆಗೆ ನಡೆಯಲಿದೆ. ಟೀಂ ಇಂಡಿಯಾ ಹೊಸ ವರ್ಷ ಅಂದರೆ 2024ರಲ್ಲಿ ಇಂಗ್ಲೆಂಡ್ಗೆ ಆತಿಥ್ಯ ವಹಿಸಲಿದ್ದು, 2024ರ ಜನವರಿಯಿಂದ ಫೆಬ್ರವರಿ ವರೆಗೆ 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅದೇ ರೀತಿ ಬಾಂಗ್ಲಾದೇಶ ತಂಡವು 2024 ರಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಇದರ ನಂತರ, ಟೀಂ ಇಂಡಿಯಾವು ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ 3 ಟೆಸ್ಟ್ ಪಂದ್ಯಗಳು ನಡೆಯಲಿವೆ. ಭಾರತ ತಂಡವು 2024 ರ ಕೊನೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆತಿಥೇಯ ತಂಡದೊಂದಿಗೆ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಅಡಿಯಲ್ಲಿ ನಡೆಯಲಿರುವ ಸರಣಿಯು ನವೆಂಬರ್ 2024 ರಿಂದ ಜನವರಿ 2025 ರವರೆಗೆ ನಡೆಯಲಿದೆ.
World test Championship final 2023 most watched test cricket in history.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm