ಬ್ರೇಕಿಂಗ್ ನ್ಯೂಸ್
20-06-23 01:16 pm Source: News18 Kannada ಕ್ರೀಡೆ
ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಇದೇ ವರ್ಷ ನಡೆಯಲಿದೆ. ಭಾರತ ಆತಿಥ್ಯ ವಹಿಸಿರುವ ಈ ವಿಶ್ವಕಪ್ನ ವೇಳಾಪಟ್ಟಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂತಿಮ ಪಂದ್ಯದ ನಂತರ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿತ್ತು. ಆದರೆ ಈವರೆಗೂ ವೇಳಾಪಟ್ಟಿ ಬಿಡುಗಡೆ ಆಗಿಲ್ಲ.
ಆದರೆ WTC ಫೈನಲ್ ಮುಗಿದ ಒಂದು ವಾರದ ನಂತರ, ಯಾವುದೇ ಘೋಷಣೆ ಮಾಡಲಾಗಿಲ್ಲ. ಆದರೆ, ಈ ವಿಳಂಬಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಕಾರಣ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಪಾಕಿಸ್ತಾನ ಅಭದ್ರವಾಗಿದೆ ಎಂದು ಟೀಕಿಸಿದ್ದಾರೆ.
ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್ ಸ್ಪೋರ್ಟ್.ಇನ್ಗೆ ಮಾತನಾಡಿದ್ದು, ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಾರಂಭಿಸುವಲ್ಲಿ ವಿಳಂಬದ ಹಿಂದಿನ ಕಾರಣ ಪಾಕಿಸ್ತಾನ. ವಿಳಂಬಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಹೊಣೆಯಾಗಬೇಕು ಎಂದಿದ್ದಾರೆ. ಭಾರತದಲ್ಲಿ ವಿಶ್ವಕಪ್ ಆಡುವ ವಿಚಾರದಲ್ಲಿ ಪಿಸಿಬಿ ಇಚ್ಛಾನುಸಾರ ವರ್ತಿಸುತ್ತಿದೆ. ಪಾಕಿಸ್ತಾನ ಆಡುವ ಪಂದ್ಯಗಳ ಸ್ಥಳಗಳನ್ನು ಬದಲಾಯಿಸಲು ಪಿಸಿಬಿ ಒತ್ತಾಯಿಸುತ್ತಿರುವುದು ಅಭದ್ರತೆಯ ಸಂಕೇತ ಎಂದು ಟೀಕಿಸಲಾಗಿದೆ.
ಭಾರತ-ಪಾಕಿಸ್ತಾನ ಪಂದ್ಯ ಎಂದರೆ ಹಲವು ನಿರೀಕ್ಷೆಗಳಿರುತ್ತದೆ. ಈ ತಂಡಗಳ ನಡುವಿನ ಹೋರಾಟಕ್ಕೆ ಉಭಯ ದೇಶಗಳ ಜನರಷ್ಟೇ ಅಲ್ಲ ಇಡೀ ವಿಶ್ವವೇ ಕಾಯುತ್ತಿದೆ. ಕರಡು ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 15 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಇದಕ್ಕೆ ಆತಿಥ್ಯ ವಹಿಸಲಿದೆ. ಆದರೆ, ಈ ಪಂದ್ಯದ ಸ್ಥಳಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.
ಭದ್ರತಾ ಕಾರಣಗಳಿಂದಾಗಿ ಅಹಮದಾಬಾದ್ನಿಂದ ಚೆನ್ನೈನ ಚಿದಂಬರಂ ಕ್ರೀಡಾಂಗಣಕ್ಕೆ ಸ್ಥಳವನ್ನು ಬದಲಾಯಿಸುವಂತೆ ಪಾಕಿಸ್ತಾನವು ಬಿಸಿಸಿಐಗೆ ಮನವಿ ಮಾಡಿದೆ. ಅದೇ ರೀತಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದ ಸ್ಥಳವನ್ನು ಚೆನ್ನೈನಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಲಾಗಿದೆ. ಆದರೆ, ಪಿಸಿಬಿ ಸ್ಪಿನ್ ಆಡಲು ಸಾಧ್ಯವಾಗದ ಕಾರಣ ಸ್ಥಳಗಳನ್ನು ಬದಲಾಯಿಸಲು ಕೇಳುತ್ತಿದೆ ಎಂಬ ಟೀಕೆಗಳಿವೆ.
ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಪಾಕಿಸ್ತಾನ ಭಾಗವಹಿಸುವ ಅಂತಿಮ ನಿರ್ಧಾರ ಆ ದೇಶದ ಸರ್ಕಾರದ್ದು. ಈ ಬಗ್ಗೆ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಸ್ಪಷ್ಟಪಡಿಸಿದ್ದಾರೆ. ಇದು ಪಾಕಿಸ್ತಾನ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ.
ಈ ಕುರಿತು ಐಸಿಸಿಗೆ ಪತ್ರ ಬರೆದಿರುವುದಾಗಿ ನಜಮ್ ಸೇಥಿ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ಇದೇ ಕಾರಣಕ್ಕಾಗಿ ವಿಶ್ವಕಪ್ ವೇಳಾಪಟ್ಟಿ ಈವರೆಗೂ ಬಿಡುಗಡೆ ಆಗಿಲ್ಲ.
ಇನ್ನು, ಏಷ್ಯಾಕಪ್ ಹಗ್ಗಜಗ್ಗಾಟ ಈಗಾಗಲೇ ಮುಗಿದಿದ್ದು, ವಿಶ್ವಕಪ್ ಕುರಿತ ಮಾಹಿತಿ ಮ,ಆತ್ರ ಹೊರಬೀಳಬೇಕಿದೆ. ಆದರೆ ಪಾಕಿಸ್ತಾನದ ಹುಚ್ಚಾಟಕ್ಕೆ ಇದೀಗ ವಿಶ್ವ ಕ್ರಿಕೆಟ್ ಸಂಪೂರ್ಣ ಸಿಟ್ಟಾಗಿದ್ದು, ಎಲ್ಲ ದೇಶದ ಕ್ರಿಕೆಟ್ ಮಂಡಳಿಗಳೂ ಸಹ ಪಾಕ್ ನಿಲುವಿಗೆ ಗರಂ ಆಗಿದೆ.
ICC world cup 2023 schedule delayed due to Pakistan cricket board.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm