ಬ್ರೇಕಿಂಗ್ ನ್ಯೂಸ್
30-05-23 02:20 pm Source: Vijayakarnataka ಕ್ರೀಡೆ
ಅಹಮದಾಬಾದ್: ಐಪಿಎಲ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲು ಇದು ಅತ್ಯುತ್ತಮ ಸಮಯವಾಗಿದೆ. ಆದರೆ, ಅಭಿಮಾನಿಗಳು ನನ್ನ ಮೇಲೆ ತೋರಿದ ಪ್ರೀತಿ ಹಾಗೂ ವಾತ್ಸಲ್ಯದಿಂದ ಮತ್ತೊಂದು ಆವೃತ್ತಿಯಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ಇದಕ್ಕಾಗಿ 9 ತಿಂಗಳುಗಳ ಕಾಲ ಕಠಿಣ ಪರಿಶ್ರಮ ಪಡುತ್ತನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ 2023ರ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿತು. ಆ ಮೂಲಕ ಐದನೇ ಬಾರಿ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು ಹಾಗೂ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿತು.
ಗೆಲುವಿನ ಬಳಿಕ ಮಾತನಾಡಿದ ಎಂಎಸ್ ಧೋನಿ, "ನಿವೃತ್ತಿ ಬಗೆಗಿನ ಉತ್ತರಕ್ಕಾಗಿ ಕಾಯುತ್ತಿದ್ದೀರಾ? ಸಾಂದರ್ಭಿಕವಾಗಿ ನೋಡಿದರೆ, ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯ. ಆದರೆ, ಈ ವರ್ಷ ನಾನು ಎಲ್ಲೇ ಹೋದರೂ ನನ್ನ ಮೇಲೆ ತೋರಿದ ಪ್ರೀತಿ ಮತ್ತು ವಾತ್ಸಲ್ಯ ಅದ್ಭುತವಾಗಿತ್ತು. "ತುಂಬಾ ಧನ್ಯವಾದಗಳು" ಎಂದು ಹೇಳುವುದು ಸುಲಭ, ಆದರೆ ನನಗೆ ಕಠಿಣ ವಿಷಯವೆಂದರೆ ಇನ್ನೂ 9 ತಿಂಗಳು ಕಠಿಣ ಪರಿಶ್ರಮ ಪಟ್ಟು ಮರಳುವುದು ಹಾಗೂ ಕನಿಷ್ಠ ಒಂದು ಆವೃತ್ತಿಯನ್ನು ಆಡುವುದು. ಇದೆಲ್ಲಾ ಸಂಗತಿಗಳು ನನ್ನ ದೇಹವನ್ನು ಅವಲಂಬಿಸಿರುತ್ತದೆ. ಮುಂದಿನ 6 ರಿಂದ 7 ತಿಂಗಳುಗಳ ಅವಧಿಯಲ್ಲಿ ಈ ವಿಷಯವನ್ನು ಅಂತಿಮಗೊಳಿಸುತ್ತೇನೆ. ಇನ್ನೊಂದು ಆವೃತ್ತಿ ಆಡಲು ಬಯಸುತ್ತಿರುವುದು ನನ್ನ ಕಡೆಯಿಂದ ನೀಡುತ್ತಿರುವ ಉಡುಗೊರೆ, ಆದರೆ ಇದು ಸುಲಭವಲ್ಲ. ನನ್ನ ಮೇಲೆ ತೋರಿದ ಪ್ರೀತಿ ಹಾಗೂ ವಾತ್ಸಲ್ಯಕ್ಕಾಗಿ ಎಲ್ಲರಿಗಾಗಿ ಈ ಕೆಲಸವನ್ನು ನಾನು ಮಾಡಬೇಕಾಗಿದೆ," ಎಂದು ಭಾವುಕರಾದರು.
ಡಿಎಲ್ಎಸ್ ನಿಯಮಯದ ಪ್ರಕಾರ 171 ರನ್ ಗುರಿ ಹಿಂಬಾಲಿಸಿದ ಸಿಎಸ್ಕೆ ಪರ ನಾಯಕ ಎಂ.ಎಸ್.ಧೋನಿ ನಿರಾಶೆ ಮೂಡಿಸಿದರು. ತಮ್ಮ 250ನೇ ಐಪಿಎಲ್ ಪಂದ್ಯದಲ್ಲಿ ಗೋಲ್ಡನ್ ಡಕ್ಔಟ್ ಆಗಿ ಅಪಾರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. 20ನೇ ಓವರ್ನಲ್ಲಿ ರವೀಂದ್ರ ಜಡೇಜಾ, ಜಿಟಿ ವೇಗಿ ಮೋಹಿತ್ ಶರ್ಮಾ (36 ಕ್ಕೆ 3) ಎಸೆದ ಪಂದ್ಯದ ಕೊನೆಯ ಎಸೆತದಲ್ಲಿ ಚೆಂಡನ್ನು ಬೌಂಡರಿಗಟ್ಟುವ ಮೂಲಕ ಸಿಎಸ್ಕೆಗೆ ಗೆಲುವು ತಂದುಕೊಟ್ಟರು. ಆ ಮೂಲಕ 5ನೇ ಬಾರಿ ಟ್ರೋಫಿ ಗೆದ್ದು, ಮುಂಬೈ ಇಂಡಿಯನ್ಸ್ ದಾಖಲೆಯನ್ನು ಎಂಎಸ್ ಧೋನಿ ಬಳಗ ಸರಿಗಟ್ಟಿತು.
"ಇದು ನನ್ನ ವೃತ್ತಿ ಜೀವನದ ಅಂತಿಮ ಘಟ್ಟವಾಗಿದ್ದರಿಂದ ನೀವು ಭಾವುಕರಾಗಿದ್ದೀರಿ. ಇಲ್ಲಿ ಮೊದಲ ಪಂದ್ಯವಾಡಿದ ದಿನ ನಾನು ಅಂಗಣಕ್ಕೆ ಆಗಮಿಸುತ್ತಿದ್ದಾಗ ಎಲ್ಲರೂ ಧೋನಿ... ಧೋನಿ ಎಂದು ನನ್ನ ಹೆಸರು ಕೂಗುತ್ತಿದ್ದರು. ಈ ವೇಳೆ ನನ್ನ ಕಣ್ಣಲ್ಲಿ ನೀರು ತುಂಬಿತ್ತು ಹಾಗೂ ಡಗೌಟ್ನಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದೆ. ಇದನ್ನು ಆನಂದಿಸಬೇಕೆಂದು ನನಗೆ ಮನವರಿಕೆಯಾಯಿತು. ಚೆನ್ನೈನಲ್ಲಿಯೂ ಇದೇ ರೀತಿ ಆಯಿತು. ಮತ್ತೆ ಕಮ್ಬ್ಯಾಕ್ ಮಾಡಿ ಆಡಲು ಬಯಸುತ್ತೇನೆ. ನಾನು ಹೇಗಿದ್ದರೂ ಅವರು ನನ್ನನ್ನು ಪ್ರೀತಿಸುತ್ತಾರೆ," ಎಂದು ಎಂಎಸ್ ಧೋನಿ ಹೇಳಿದ್ದಾರೆ.
ipl 2023 this is the best time to announce my retirement but ms dhoni on his retirement after win against gt.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 01:43 pm
HK News Desk
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm