ಬ್ರೇಕಿಂಗ್ ನ್ಯೂಸ್
25-04-23 12:26 pm Source: news18 ಕ್ರೀಡೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಸ್ಲೋ ಓವರ್ ರೇಟ್ ಕಾರಣ ಬರೋಬ್ಬರಿ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಹೌದು, ಐಪಿಎಲ್ 2023ನೇ ಆವೃತ್ತಿಯಲ್ಲಿ ಆರ್ಸಿಬಿ ತಂಡ ಎರಡನೇ ಬಾರಿಗೆ ಸ್ಲೋ ಓವರ್ ರೇಟ್ ಹೊಂದಿದ್ದ ಕಾರಣಕ್ಕೆ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಉಳಿದಂತೆ ತಂಡದ ಆಟಗಾರರು ಮತ್ತು ಇಂಪ್ಯಾಕ್ಟ್ ಪ್ಲೇಯರ್ಗೆ 6 ಲಕ್ಷ ರೂಪಾಯಿ ಅಥವಾ ಪಂದ್ಯದ ಶೇಕಡಾ 25 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಎರಡರಲ್ಲಿ ಯಾವುದು ಕಡಿಮೆ ಮೊತ್ತ ಇರುತ್ತೆ ಅದು ಅಟಗಾರರಿಗೆ ಅನ್ವಯ ಆಗಲಿದೆ.
ಏಪ್ರಿಲ್ 23 ರಂದು ನಡೆದ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಪಂದ್ಯದಲ್ಲಿ ಆರ್ಸಿಬಿ ಸ್ಲೋ ಓವರ್ ರೇಟ್ ಹೊಂದಿತ್ತು. ಈ ಆವೃತ್ತಿಯಲ್ಲಿ ಇದಕ್ಕೂ ಮುನ್ನ ಫಾಫ್ ಡು ಪ್ಲೆಸಿಸ್ ತಂಡದ ಕ್ಯಾಪ್ಟನ್ ಆಗಿ ಲಕ್ನೋ ವಿರುದ್ಧ ಪಂದಯದಲ್ಲೂ ಸ್ಲೋ ಓವರ್ ರೇಟ್ ಹೊಂದಿತ್ತು. ಪರಿಣಾಮ ಡು ಪ್ಲೆಸಿಸ್ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಈ ಪಂದ್ಯದಲ್ಲಿ ಕೊನೆಯ ಎಸೆದದಲ್ಲಿ ಆರ್ಸಿಬಿ ತಂಡ ರೋಚಕ ಸೋಲುಂಡಿತ್ತು. ಲಕ್ನೋ ವಿರುದ್ಧ ಪಂದ್ಯದಲ್ಲಿ ಮೊದಲ ಬಾರಿಗೆ ಸ್ಲೋ ಓವರ್ ರೇಟ್ ಹೊಂದಿದ್ದ ಕಾರಣ ಕ್ಯಾಪ್ಟನ್ ಆಗಿದ್ದ ಡು ಪ್ಲೆಸಿಸ್ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು. ಎರಡನೇ ಬಾರಿಗೆ ಐಪಿಎಲ್ ನಿಯಮ ಉಲ್ಲಂಘಿಸಿದ ಕಾರಣ ಮೊದಲ ದಂಡಕ್ಕಿಂತ ಡಬಲ್ ಅಂದರೆ 24 ಲಕ್ಷ ರೂಪಾಯಿ ದಂಡವನ್ನು ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿಗೆ ವಿಧಿಸಲಾಗಿದೆ.
ಆರ್ಸಿಬಿ ತಂಡವನ್ನು ಡು ಪ್ಲೆಸಿಸ್ ಆರಂಭದ ಪಂದ್ಯಗಳಲ್ಲಿ ಮುನ್ನಡೆಸಿದ್ದರು ಸಹ ಅವರು ಈಗ ಗ್ರೇಡ್-ಒನ್ ಇಂಟರ್ಕೊಸ್ಟಲ್ ಸ್ಟ್ರೈನ್ ಸಮಸ್ಯೆಯಿಂದ ಬಳುತ್ತಿದ್ದಾರೆ. ಪರಿಣಾಮ ಆರ್ಸಿಬಿ ಫ್ರಾಂಚೈಸಿ ಡು ಪ್ಲೆಸಿಸ್ಗೆ ಕೇವಲ ಆರ್ಸಿಬಿ ಬ್ಯಾಟಿಂಗ್ ವೇಳೆ ಮಾತ್ರ ಆಡಲು ನೀಡಿ, ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ವಿಶ್ರಾಂತಿ ನೀಡುತ್ತಿದೆ.
ಇನ್ನು, ಸ್ಲೋ ಓವರ್ ರೇಟ್ ಕಾರಣ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆನ್-ಫಿಲ್ಡ್ ಪೆನಾಲ್ಟಿಯನ್ನು ಎದುರಿಸುತ್ತು. ಇದರ ಅನ್ವಯ ಇನ್ನಿಂಗ್ಸ್ನ 20ನೇ ಓವರ್ನಲ್ಲಿ 30 ಯಾರ್ಡ್ ಸರ್ಕಲ್ ಹೊರಗೆ ಫೀಲ್ಡಿಂಗ್ ಮಾಡಲು ಕೇವಲ ನಾಲ್ವರು ಫೀಲ್ಡರ್ಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಈಗಾಗಲೇ ಎರಡೆರು ಬಾರಿ ಸ್ಲೋ ಓವರ್ ರೇಟ್ನಿಂದ ದಂಡ ತೆತ್ತಿರುವ ಕಾರಣ ಆರ್ಸಿಬಿ ತಂಡ ಮುಂದಿನ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಇನ್ನು, ರಾಯಲ್ ಚಾಲೆಂಜರ್ಸ್ ಮತ್ತು ರಾಜಸ್ಥಾನ ನಡುವಿನ ಪಂದ್ಯವು ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿತು. ಆರ್ಸಿಬಿ ನೀಡಿದ 190 ರನ್ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್ ತಂಡವು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸುವ ಮೂಲಕ 7 ರನ್ಗಳ ಸೋಲನ್ನಪ್ಪಿತು.
RCB virat kohli has become the first captain to be fined rs 24 lakh for slow over rate in ipl 2023.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm