ಬ್ರೇಕಿಂಗ್ ನ್ಯೂಸ್
26-11-22 01:50 pm Source: Vijayakarnataka ಕ್ರೀಡೆ
ಟಾಮ್ ಲೇಥಮ್ (145* ರನ್) ಹಾಗೂ ಕೇನ್ ವಿಲಿಯಮ್ಸನ್ (94* ರನ್) ಅವರ 224 ರನ್ಗಳ ದಾಖಲೆಯ ಜೊತೆಯಾಟದ ಬಲದಿಂದ ನ್ಯೂಜಿಲೆಂಡ್ ತಂಡ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ ವಿರುದ್ಧ 7 ವಿಕೆಟ್ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಒಡಿಐ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಗಳಿಸಿತು.
ಇಲ್ಲಿನ ಈಡನ್ ಪಾರ್ಕ್ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಶುಭಮನ್ ಗಿಲ್ (50 ರನ್), ಶಿಖರ್ ಧವನ್ (72 ರನ್) ಹಾಗೂ ಶ್ರೇಯಸ್ ಅಯ್ಯರ್ (80 ರನ್) ಅವರ ಅರ್ಧಶತಕಗಳ ನೆರವಿನಿಂದ ತನ್ನ ಪಾಲಿನ 50 ಓವರ್ಗಳಿಗೆ 306 ರನ್ ಗಳಿಸಿತು.ಆ ಮೂಲಕ ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ 307 ರನ್ ಗುರಿ ನೀಡಿತ್ತು.
ಬಳಿಕ ಗುರಿ ಹಿಂಬಾಲಿಸಿದ್ದ ನ್ಯೂಜಿಲೆಂಡ್ ತಂಡ, ಟಾಮ್ ಲೇಥಮ್ (145* ರನ್) ಅವರ ಶತಕದ ಬಲದಿಂದ ಇನ್ನೂ 17 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಸಂಭ್ರಮಿಸಿತು. ಸ್ಪೋಟಕ ಶತಕ ಸಿಡಿಸಿದ ಟಾಮ್ ಲೇಥಮ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಂದಹಾಗೆ ಈ ಪಂದ್ಯದಲ್ಲಿ ಮೂಡಿ ಬಂದ ದಾಖಲೆಗಳನ್ನು ಇಲ್ಲಿ ವಿವರಿಸಲಾಗಿದೆ.
ನೇಥನ್ ಆಶ್ಲೆ ದಾಖಲೆ ಮುರಿದ ಟಾಮ್ ಲೇಥಮ್: ಭಾರತ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಟಾಮ್ ಲೇಥಮ್ ಅಜೇಯ 145 ರನ್ ಸಿಡಿಸಿದರು. ಆ ಮೂಲಕ ಭಾರತ ವಿರುದ್ದ ವೈಯಕ್ತಿಕ ಅತಿ ಹೆಚ್ಚು ರನ್ ಗಳಿಸಿದ ನ್ಯೂಜಿಲೆಂಡ್ ಬ್ಯಾಟ್ಸ್ಮನ್ ಎನಿಸಿಕೊಂಡರು. ಆ ಮೂಲಕ 1999ರಲ್ಲಿ 120 ರನ್ ಗಳಿಸಿದ್ದ ನೇಥನ್ ಆಶ್ಲೆ ಅವರ ದಾಖಲೆಯನ್ನು ಟಾಮ್ ಲೇಥಮ್ ಮುರಿದರು.
ದಾಖಲೆಯ ಜೊತೆಯಾಟ: ಟಾಮ್ ಲೇಥಮ್ (145* ರನ್) ಹಾಗೂ ನಾಯಕ ಕೇನ್ ವಿಲಿಯಮ್ಸನ್ (94* ರನ್) ಮುರಿಯದ ನಾಲ್ಕನೇ ವಿಕೆಟ್ಗೆ 221 ರನ್ ಜೊತೆಯಾಟ ಆಡಿದರು. ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ನ ಅತ್ಯಧಿಕ ಜೊತೆಯಾಟ ಇದಾಯಿತು. ಇದಕ್ಕೂ ಮುನ್ನ 2007ರಲ್ಲಿ ಟಾಮ್ ಲೇಥಮ್ ಹಾಗೂ ರಾಸ್ ಟೇಲರ್ ಜೋಡಿ 200 ರನ್ ಜೊತೆಯಾಟವಾಡಿದ್ದರು.
ಸಂಗಕ್ಕಾರ ದಾಖಲೆ ಸರಿಗಟ್ಟಿದ ಲೇಥಮ್: ಭಾರತ ವಿರುದ್ಧ ಮೊದಲನೇ ಪಂದ್ಯದಲ್ಲಿ 76 ಎಸೆತಗಳಲ್ಲಿ ಶತಕ ಪೂರೈಸಿದ ಟಾಮ್ ಲೇಥಮ್ ಅವರು ಶ್ರೀಲಂಕಾ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರ ವೇಗದ ಶತಕದ ದಾಖಲೆ ಸರಿಗಟ್ಟಿದರು. 2001ರಲ್ಲಿ ಲಂಕಾ ದಿಗ್ಗಜ 76 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು.
ಟಾಮ್ ಲೇಥನ್ ಅವರ ಗರಿಷ್ಠ ವೈಯಕ್ತಿಕ ಮೊತ್ತ: ನೆದರ್ಲೆಂಡ್ ವಿರುದ್ಧ ಕಳೆದ ಏಪ್ರಿಲ್ ತಿಂಗಳಲ್ಲಿ ಟಾಮ್ ಲೇಥಮ್ ಅಜೇಯ 140 ರನ್ ಗಳಿಸಿದ್ದರು. ಇದೀಗ ಭಾರತ ವಿರುದ್ಧ ಅಜೇಯ 145 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
200 ವಿಕೆಟ್ ಸಾಧನೆ ಮಾಡಿದ ಟಿಮ್ ಸೌಥಿ: ಭಾರತ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ 3 ವಿಕೆಟ್ ಕಬಳಿಸಿದರು. ಆ ಮೂಲಕ ಏಕದಿನ ಕ್ರಿಕೆಟ್ನಲ್ಲಿ 200 ವಿಕೆಟ್ಗಳನ್ನು ಪೂರ್ಣಗೊಳಿಸಿದರು. ಟೆಸ್ಟ್ ಕ್ರಿಕೆಟ್ನಲ್ಲಿ 347 ಹಾಗೂ ಟಿ20 ಸ್ವರೂಪದಲ್ಲಿ 134 ವಿಕೆಟ್ ಗಳಿಸಿದ್ದಾರೆ.
ಶ್ರೇಯಸ್ ಅಯ್ಯರ್ ಅರ್ಧಶತಕದ ಸಾಧನೆ: ನ್ಯೂಜಿಲೆಂಡ್ ವಿರುದ್ದ ಸತತ 4 ಅರ್ಧಶತಕ ಸಿಡಿಸಿದ ಎರಡನೇ ಆಟಗಾರರಾಗಿ ಭಾರತದ ಶ್ರೇಯಸ್ ಅಯ್ಯರ್ ಗುರುತಿಸಿಕೊಂಡರು. ಅಯ್ಯರ್ ಆಕ್ಲೆಂಡ್ ಪಂದ್ಯದಲ್ಲಿ 80 ರನ್ ಗಳಿಸಿದರೆ, ಈ ಹಿಂದೆ 103, 52, 62 ರನ್ ಗಳಿಸಿದ್ದರು.
Ind Vs Nz Full List Of Records That Tumbled As Tom Latham Smashes Big, Match-Winning Century Against India In 1st Odi.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 08:32 pm
Mangalore Correspondent
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm