ಬ್ರೇಕಿಂಗ್ ನ್ಯೂಸ್
21-11-22 01:04 pm Source: Vijayakarnataka ಕ್ರೀಡೆ
ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ಶ್ರೇಷ್ಠ ಲಯದಲ್ಲಿ ಮುಂದುವರಿದಿದ್ದಾರೆ. 2022ರ ಸಾಲಿನಲ್ಲಿ ರನ್ ಹೊಳೆಯನ್ನೇ ಹರಿಸಿರುವ ಸೂರ್ಯಕುಮಾರ್ ಯಾದವ್, ಇಲ್ಲಿನ ಬೇ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಮಿಂಚಿನ ಶತಕ ಬಾರಿಸಿದ್ದಾರೆ.
2022ರ ಸಾಲಿನಲ್ಲಿ ಅತಿ ಹೆಚ್ಚು ಟಿ20-ಐ ರನ್ ಗಳಿಸಿದ ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್, ಕೇವಲ 51 ಎಸೆತಗಳಲ್ಲಿ ಅಜೇಯ 111 ರನ್ ಸಿಡಿಸುವ ಮೂಲಕ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡಕ್ಕೆ 20 ಓವರ್ಗಳಲ್ಲಿ 191 ರನ್ಗಳ ಬೃಹತ್ ಮೊತ್ತ ತಂದುಕೊಟ್ಟರು. ಅವರ ಸ್ಪೋಟಕ ಇನಿಂಗ್ಸ್ನಲ್ಲಿ 11 ಫೋರ್ ಮತ್ತು 7 ಸಿಕ್ಸರ್ಗಳು ಮೂಡಿಬಂದವು.
ಇದೇ ವರ್ಷ ಜುಲೈನಲ್ಲಿ ಇಂಗ್ಲೆಂಡ್ ಎದುರು 119 ರನ್ ಸಿಡಿಸಿ ತಮ್ಮ ಚೊಚ್ಚಲ ಟಿ20-ಐ ಶತಕ ಬಾರಿಸಿದ್ದ ಸೂರ್ಯಕುಮಾರ್ ಯಾದವ್, ಇದೀಗ ಎರಡನೇ ಶತಕ ತಮ್ಮ ಖಾತೆಗೆ ಸೇರಿಸಿಕೊಳ್ಳುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ. ಒಂದೇ ವರ್ಷದಲ್ಲಿ ಭಾರತದ ಪರ ಎರಡು ಟಿ20-ಐ ಶತಕ ಬಾರಿಸಿದ ಎರಡನೇ ಬ್ಯಾಟ್ಸ್ಮನ್ ಎನಿಸಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ ಈ ಸಾಧನೆ ಮೆರೆದಿದ್ದರು.
ಈ ಶತಕದೊಂದಿಗೆ 2022ರಲ್ಲಿ ತಮ್ಮ ಒಟ್ಟು ಟಿ20-ಐ ರನ್ಗಳ ಗಳಿಕೆಯನ್ನು 1151ಕ್ಕೆ ವಿಸ್ತರಿಸಿಕೊಂಡಿದ್ದಾರೆ. 30 ಪಂದ್ಯಗಳಲ್ಲಿ ಈ ಸಾಧನೆ ಮೆರೆದಿರುವ ಸೂರ್ಯ, ವರ್ಷವೊಂದರಲ್ಲಿ ಅತಿ ಹೆಚ್ಚು ಟಿ20-ಐ ರನ್ಗಳಿಸಿದ ಬ್ಯಾಟರ್ ಆಗಿ ಪಾಕಿಸ್ತಾನದ ಮೊಹಮ್ಮದ್ ರಿಝ್ವಾನ್ ಅವರ ದಾಖಲೆಯನ್ನು ಮುರಿಯಲು ಇನ್ನು 177 ರನ್ಗಳನ್ನು ಗಳಿಸುವ ಅಗತ್ಯವಿದೆ. ಇನ್ನು 2022ರಲ್ಲಿ ಬರೋಬ್ಬರಿ 67 ಟಿ20-ಐ ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆಯೂ ಸೂರ್ಯ ಹೆಸರಲ್ಲಿದೆ.
this SKY has no limit! 🫡
— prime video IN (@PrimeVideoIN) November 20, 2022
Surya brings up his 💯 & guides #TeamIndia to a big total in the 2nd #NZvIND T20I.#NZvINDonPrime : https://t.co/uoQDFzDYe5#CricketOnPrime pic.twitter.com/ibIJVo2uXp
ಟಿ20-ಐ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಭಾರತೀಯರು
04 - ರೋಹಿತ್ ಶರ್ಮಾ
02* - ಸೂರ್ಯಕುಮಾರ್ ಯಾದವ್
02 - ಕೆ.ಎಲ್ ರಾಹುಲ್
01 - ವಿರಾಟ್ ಕೊಹ್ಲಿ
01 - ಸುರೇಶ್ ರೈನಾ
01 - ದೀಪಕ್ ಹೂಡ
ವರ್ಷ ಒಂದರಲ್ಲಿ ಒಂದಕ್ಕೂ ಹೆಚ್ಚು ಟಿ20-ಐ ಶತಕ ಬಾರಿಸಿದವರು
ರೋಹಿತ್ ಶರ್ಮಾ - 02
ಸೂರ್ಯಕುಮಾರ್ ಯಾದವ್ - 02
ಭಾರತದ ಪರ ಟಿ20-ಐ ಕ್ರಿಕೆಟ್ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್
122*(61) - ವಿರಾಟ್ ಕೊಹ್ಲಿ (ಭಾರತ vs ಅಫಘಾನಿಸ್ತಾನ), ದುಬೈ 2022
118(43) - ರೋಹಿತ್ ಶರ್ಮಾ (ಭಾರತ vs ಶ್ರೀಲಂಕಾ), ಇಂದೋರ್ 2017
117(55) - ಸೂರ್ಯಕುಮಾರ್ ಯಾದವ್ (ಭಾರತ vs ಇಂಗ್ಲೆಂಡ್), ನಾಟಿಂಗ್ಹ್ಯಾಮ್ 2022
111*(51) - ಸೂರ್ಯಕುಮಾರ್ ಯಾದವ್ (ಭಾರತ vs ನ್ಯೂಜಿಲೆಂಡ್),ಮೌಂಟ್ ಮೌಂಗಾನುಯ್ 2022
111*(61) - ರೋಹಿತ್ ಶರ್ಮಾ (ಭಾರತ vs ವೆಸ್ಟ್ ಇಂಡೀಸ್), ಲಖನೌ 2018
TAKE A BOW! 🙌
— ICC (@ICC) November 20, 2022
Suryakumar Yadav brings up his second T20I hundred 💥
Watch the #NZvIND series live on https://t.co/MHHfZPyHf9 (in select regions) 📺 pic.twitter.com/nfullD65Ww
Ind Vs Nz Suryakumar Yadav Smashes Record-Breaking Second T20 International Hundred.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm