ಬ್ರೇಕಿಂಗ್ ನ್ಯೂಸ್
29-09-22 02:08 pm Source: Vijayakarnataka ಕ್ರೀಡೆ
ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್ಗಳ ಜಯ ದಾಖಲಿದ ಟೀಮ್ ಇಂಡಿಯಾ, ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆಯೊಂದಿಗೆ ಶುಭಾರಂಭ ಮಾಡಿದೆ. ಬೌಲರ್ಗಳ ಪರಾಕ್ರಮದಿಂದ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಹರಿಣ ಪಡೆಯನ್ನು 20 ಓವರ್ಗಳಲ್ಲಿ 106/8 ರನ್ಗಳ ಅಲ್ಪ ಮೊತ್ತಕ್ಕೆ ನಿಯಂತ್ರಿಸಿದ ಭಾರತ ತಂಡ, ಬಳಿಕ ಇನ್ನು 20 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ಗಳ ಜಯ ದಕ್ಕಿಸಿಕೊಂಡಿತು.
ತಿರುವನಂತ ಪುರದ ಗ್ರೀನ್ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 107 ರನ್ಗಳ ಸುಲಭದ ಗುರಿ ಬೆನ್ನತ್ತಿದ್ದ ಭಾರತ ತಂಡ ಆರಂಭಿಕ ಆಘಾತಕ್ಕೊಳಗಾಗಿತ್ತು. ದಕ್ಷಿಣ ಆಫ್ರಿಕಾ ತಂಡದ ಇಬ್ಬರು ಪ್ರಚಂಡ ವೇಗಿಗಳಾದ ಕಗಿಸೊ ರಬಾಡ (16ಕ್ಕೆ 1) ಮತ್ತು ಎನ್ರಿಕ್ ನೊರ್ಕಿಯ (32ಕ್ಕೆ 1) ಪಿಚ್ನ ಸಂಪೂರ್ಣ ಲಾಭ ಪಡೆದು ಭಾರತದ ಸ್ಟಾರ್ ಬ್ಯಾಟರ್ಗಳಾದ ರೋಹಿತ್ ಶರ್ಮಾ (0) ಮತ್ತು ವಿರಾಟ್ ಕೊಹ್ಲಿ (3) ಅವರನ್ನು ಪೆವಿಲಿಯನ್ಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಸಂದರ್ಭದಲ್ಲಿ ಕ್ರೀಸ್ನಲ್ಲಿದ್ದ ಓಪನರ್ ಕೆ.ಎಲ್ ರಾಹುಲ್ (51*) ಮತ್ತು ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ (50*) ಮೂರನೇ ವಿಕೆಟ್ಗೆ 63 ಎಸೆತಗಳಲ್ಲಿ 93 ರನ್ ಸಿಡಿಸಿ ತಂಡವನ್ನು ಸುಲಭವಾಗಿ ಜಯದ ದಡ ಮುಟ್ಟಿಸಿದರು.
ಬ್ಯಾಟಿಂಗ್ ಮಾಡಲು ಬಹಳಾ ಕಷ್ಟವೆಂಬಂತ್ತಿದ್ದ ಪಿಚ್ನಲ್ಲಿ ತಮ್ಮ ಅನುಭವವನ್ನೆಲ್ಲಾ ಬಳಕೆಗೆ ತಂದು ಜವಾಬ್ದಾರಿಯುತ ಇನಿಂಗ್ಸ್ ಆಡಿದ ಕೆಲ್ ರಾಹುಲ್, ಸಿಕ್ಸರ್ ಸಿಡಿಸಿ ತಂಡಕ್ಕೆ ಜಯ ತಂದರಾದರೂ, 56 ಎಸೆತಗಳಲ್ಲಿ ಅಜೇಯ 51 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ಮಂದಗತಿಯ ಅರ್ಧಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅವರ ಇನಿಂಗ್ಸ್ನಲ್ಲಿ 4 ಸಿಕ್ಸರ್ಗಳು ಮತ್ತು 2 ಫೋರ್ಗಳು ಮೂಡಿಬಂದವು. ಬೌಂಡರಿಗಳನ್ನು ಗಳಿಸಿದ 6 ಎಸೆತಗಳನ್ನು ಕಳೆದರೆ ರಾಹುಲ್, ಉಳಿದ ಉಳಿದ 50 ಎಸೆತಗಳಲ್ಲಿ ಗಳಿಸಿದ್ದು ಕೇವಲ 19 ರನ್ಗಳನ್ನು ಮಾತ್ರ. ಇದು ಕೆಲ ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿದೆ.
ಅಂದಹಾಗೆ ಇದಕ್ಕೂ ಮುನ್ನ ಅತ್ಯಂತ ಮಂದಗತಿಯ ಟಿ20-ಐ ಅರ್ಧಶತಕ ಬಾರಿಸಿದ ವಿಶ್ವ ದಾಖಲೆ ಟೀಮ್ ಇಂಡಿಯಾದ ಮಾಜಿ ಓಪನರ್ ಗೌತಮ್ ಗಂಭೀರ್ ಹೆಸರಲ್ಲಿತ್ತು. ಲಖನೌ ಸೂಪರ್ ಜಯಂಟ್ಸ್ ತಂಡದ ಮೆಂಟರ್ ಕೂಡ ಆಗಿರುವ ಗಂಭೀರ್, ಟಿ20-ಐನಲ್ಲಿ 54 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ದಾಖಲೆ ಹೊಂದಿದ್ದರು. ಈಗ ರಾಹುಲ್ ಈ ಅನಗತ್ಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತ್ಯಂತ ಮಂದಗತಿಯ ಅರ್ಧಶತಕ
ಭಾರತ-ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ20 ಪಂದ್ಯದ ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: 20 ಓವರ್ಗಳಲ್ಲಿ 8 ವಿಕೆಟ್ಗಳ 106 ರನ್ (ಏಡೆನ್ ಮಾಕ್ರಮ್ 25, ವೇಯ್ನ್ ಪಾರ್ನೆಲ್ 24, ಕೇಶವ್ ಮಹಾರಾಜ್ 41; ಅರ್ಷದೀಪ್ ಸಿಂಗ್ 32ಕ್ಕೆ 3, ದೀಪಕ್ ಚಹರ್ 24ಕ್ಕೆ 2, ಹರ್ಷಲ್ ಪಟೇಲ್ 26ಕ್ಕೆ 2).
ಭಾರತ: 16.4 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ 110 ರನ್ (ಕೆ.ಎಲ್ ರಾಹುಲ್ ಅಜೇಯ 51, ಸೂರ್ಯಕುಮಾರ್ ಯಾದವ್ ಅಜೇಯ 50; ಕಗಿಸೊ ರಬಾಡ 16ಕ್ಕೆ 1, ಎನ್ರಿಕ್ ನೊರ್ಕಿಯ 32ಕ್ಕೆ 1).
Ind Vs Sa Kl Rahul Registers Slowest Fifty For India In T20is During 1st T20i Agaisnt South Africa.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm