ಬ್ರೇಕಿಂಗ್ ನ್ಯೂಸ್
22-09-22 02:56 pm Source: Vijayakarnataka ಕ್ರೀಡೆ
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ಎರಡನೇ ಮಹಿಳೆಯರ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ದಾಖಲೆಯ ಶತಕ ಸಿಡಿಸಿದರು. ಆ ಮೂಲಕ ಭಾರತ ತಂಡ 50 ಓವರ್ಗಳಿಗೆ 5 ವಿಕೆಟ್ ನಷ್ಟಕ್ಕೆ 333 ರನ್ ಗಳಿಸಲು ನೆರವಾದರು.
ಕ್ಯಾಂಟಬರಿಯ ಸೇಂಟ್ ಲಾರೆನ್ಸ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟ್ ಮಾಡಿದ ನಾಯಕಿ ಹರ್ಮನ್ಪ್ರೀತ್ ಕೌರ್ ಇಂಗ್ಲೆಂಡ್ ಬೌಲರ್ಗಳಿಗೆ ಬೆವರಿಳಿಸಿದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಹರ್ಮನ್ಪ್ರೀತ್ ಕೌರ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಎದುರಿಸಿದ 111 ಎಸೆತಗಳಲ್ಲಿ 4 ಭರ್ಜರಿ ಸಿಕ್ಸರ್ ಹಾಗೂ 18 ಬೌಂಡರಿಗಳೊಂದಿಗೆ ಅಜೇಯ 143 ರನ್ ಚಚ್ಚಿದರು. ಆ ಮೂಲಕ ವೃತ್ತಿ ಜೀವನದ ಐದನೇ ಶತಕ ಹಾಗೂ ಇಂಗ್ಲೆಂಡ್ ವಿರುದ್ಧ ಮಹಿಳೆಯರ ಒಡಿಐ ಕ್ರಿಕೆಟ್ನಲ್ಲಿ ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಳ್ಳುವ ಮೂಲಕ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು.
2013ರಲ್ಲಿ ಬ್ರೆಬೋರ್ನ್ನಲ್ಲಿ ನಡೆದಿದ್ದ ಐಸಿಸಿ ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 109 ಎಸೆತಗಳಲ್ಲಿ 107 ರನ್ ಗಳಿಸಿದ್ದರು. ಇದೀಗ 143 ರನ್ ಗಳಿಸುವ ಮೂಲಕ ತಮ್ಮದೇ ಆದ 9 ವರ್ಷಗಳ ಹಳೆಯ ದಾಖಲೆಯನ್ನು ಹಿಂದಿಕ್ಕಿದ್ದಾರೆ.
1⃣0⃣0⃣ for Captain Harmanpreet Kaur 👏👏
— BCCI Women (@BCCIWomen) September 21, 2022
What a sensational knock this has been from the #TeamIndia captain. 💪#ENGvIND pic.twitter.com/M9FSEXnCcv
ಮಧ್ಯಮ ಕ್ರಮಾಂಕದಲ್ಲಿ ಸ್ಮೃತಿ ಮಂಧಾನ ಅವರ ಜೊತೆ 33 ರನ್ ಜೊತೆಯಾಟವಾಡಿದ್ದ ಹರ್ಮನ್ಪ್ರೀತ್ ಕೌರ್ ಅವರು, ಹರ್ಲೀನ್ ಡಿಯೋಲ್(58) ಅವರ ಜೊತೆ ನಾಲ್ಕನೇ ವಿಕೆಟ್ಗೆ 113 ರನ್ ಗಳಿಸಿದ್ದರು. ಆ ಮೂಲಕ ಭಾರತ ತಂಡ 200 ರನ್ ಗಡಿ ದಾಟಲು ನೆರವಾಗಿದ್ದರು. ಅಂತಿಮ ಹಂತದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ತೋರಿದ ನಾಯಕಿ, ಭಾರತ ತಂಡದ ಮೊತ್ತವನ್ನು 300ರ ಗಡಿ ದಾಟಲು ಸಹಾಯವಾಗಿದ್ದರು.
ಡೆತ್ ಓವರ್ಗಳಲ್ಲಿ ಹರ್ಮನ್ಪ್ರೀತ್ ಭರ್ಜರಿ ಬ್ಯಾಟ್ ಬೀಸಿದ್ದರು. ಅದರಂತೆ ಕೊನೆಯ ಮೂರು ಓವರ್ಗಳಲ್ಲಿ ಭಾರತ ತಂಡ 62 ರನ್ ಗಳಿಸಿತ್ತು. ಇಂಗ್ಲೆಂಡ್ನ ಎಡಗೈ ವೇಗಿ ಫ್ರೆಯಾ ಕೆಂಪ್ ಅವರು ತನ್ನ ಆರಂಭಿಕ 8 ಓವರ್ಗಳಿಗೆ 44 ರನ್ ನೀಡಿದ್ದರು. ಆದರೆ, ತಮ್ಮ ಕೊನೆಯ ಎರಡು ಓವರ್ಗಳಿಗೆ 45 ರನ್ ಬಿಟ್ಟು ಕೊಟ್ಟಿದ್ದರು.
ಅಂತಿಮವಾಗಿ ಭಾರತ ತಂಡ ತನ್ನ ಪಾಲಿನ 50 ಓವರ್ಗಳಿಗೆ 5 ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿತು ಹಾಗೂ ಇಂಗ್ಲೆಂಡ್ ತಂಡಕ್ಕೆ 334 ರನ್ ಬೃಹತ್ ಮೊತ್ತದ ಗುರಿ ನೀಡಿತು.
A superb batting performance by #TeamIndia to set a mammoth target of 3️⃣3️⃣4️⃣
— BCCI Women (@BCCIWomen) September 21, 2022
1⃣4⃣3⃣* for Harmanpreet Kaur
5⃣8⃣ for Harleen Deol
Over to our bowlers now.
Follow the match ▶️ https://t.co/dmQVpiNH4h #ENGvIND pic.twitter.com/9miUtZGMnH
ಸಂಕ್ಷಿಪ್ತ ಸ್ಕೋರ್(ಇನಿಂಗ್ಸ್ ಬ್ರೇಕ್)
ಭಾರತ(ಮ): 50 ಓವರ್ಗಳಿಗೆ 333-5 (ಹರ್ಮನ್ಪ್ರೀತ್ ಕವರ್ 143*, ಸ್ಮೃತಿ ಮಂಧಾನಾ 40, ಹರ್ಲಿನ್ ಡಿಯೋಲ್ 58; ಚಾರ್ಲೋಟ್ ಡೀನ್ 39ಕ್ಕೆ 1)
Ind Vs Eng Harmanpreet Kaur Hits Classy Hundred, Registers India’s Highest Individual Score Against England In Womens Odis.
20-08-25 10:54 pm
Bangalore Correspondent
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
20-08-25 10:56 pm
HK News Desk
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
20-08-25 10:19 pm
Mangalore Correspondent
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm