Asia Cup 2022 Ind Vs Afg Match Preview, Head To Head, Playing Xi And Live Streaming Details.
">ಬ್ರೇಕಿಂಗ್ ನ್ಯೂಸ್
08-09-22 01:00 pm Source: Vijayakarnataka ಕ್ರೀಡೆ
ದುಬೈ: ಟೀಮ್ ಇಂಡಿಯಾ ತನ್ನದೇ ತಪ್ಪುಗಳಿಂದಾಗಿ ಏಷ್ಯಾ ಕಪ್ 2022 ಟೂರ್ನಿಯ ಪ್ರಶಸ್ತಿ ರೇಸ್ನಿಂದ ಹೊರ ಬೀಳುವ ಸ್ಥಿತಿಗೆ ತಲುಪಿದೆ. ಗ್ರೂಪ್ ಹಂತದಲ್ಲಿ ಅಧಿಕಾರಯುತ ಆಟವಾಡಿದ ಭಾರತ ತಂಡ, ಸೂಪರ್ ಫೋರ್ ಹಂತಕ್ಕೂ ಮುನ್ನ ಗಾಯದ ಸಮಸ್ಯೆಗಳಿಂದಾಗಿ ರವೀಂದ್ರ ಜಡೇಜಾ ಮತ್ತು ಅವೇಶ್ ಖಾನ್ ಅವರ ಸೇವೆ ಕಳೆದುಕೊಂಡಿತು. ಇದರಿಂದ ತಂಡದ ಸಮತೋಲನ ಕಾಯ್ದುಕೊಳ್ಳು ಪ್ರಯೋಗಕ್ಕೆ ಕೈಹಾಕಿದ ಭಾರತ ತಂಡ ಕೈಸುಟ್ಟಿಕೊಂಡಿದೆ. ಸೂಪರ್-4 ಹಂತದಲ್ಲಿ ಮೊದಲು ಪಾಕಿಸ್ತಾನ ಎದುರು 5 ವಿಕೆಟ್ಗಳಿಂದ ಸೋತರೆ, ಬಳಿಕ ಶ್ರೀಲಂಕಾ ಎದುರು 6 ವಿಕೆಟ್ಗಳ ಸೋಲಿನ ಆಘಾತಕ್ಕೊಳಗಾಯಿತು.
ಇದೀಗ ತನ್ನ ಕೊನೆಯ ಸೂಪರ್ ಪೋರ್ ಪಂದ್ಯದಲ್ಲಿ ಕ್ರಿಕೆಟ್ ಕೂಸು ಅಫಘಾನಿಸ್ತಾನ ಎದುರು ಭಾರತ ಪೈಪೋಟಿ ನಡೆಸುತ್ತಿದೆ. ಈ ಪಂದ್ಯದಲ್ಲಿ ಭರ್ಜರಿಯಾಗಿ ಗೆದ್ದರೂ ಭಾರತ ತಂಡಕ್ಕೆ ಫೈನಲ್ ಟಿಕೆಟ್ ಖಾತ್ರಿಯಿಲ್ಲ. ಏಕೆಂದರೆ ಅಫಘಾನಿಸ್ತಾನ ತಂಡ ಪಾಕಿಸ್ತಾನ ವಿರುದ್ಧ ಗೆದ್ದು, ಪಾಕ್ ತಂಡ ಶ್ರೀಲಂಕಾ ಎದುರು ಸೋತಾಗ ಮಾತ್ರವೇ ಟೀಮ್ ಇಂಡಿಯಾಗೆ ಫೈನಲ್ ತಲುಪುವ ಅವಕಾಶ ಸಿಗಲಿದೆ. ಇದು ಬಹುತೇಕ ಅಸಾಧ್ಯ ಎಂಬ ಸ್ಥಿತಿ ಸದ್ಯಕ್ಕಿದೆ. ಹೀಗಾಗಿ ಶ್ರೀಲಂಲಾ ವಿರುದ್ಧದ ಸೋಲಿನಲ್ಲೇ 7 ಬಾರಿಯ ಚಾಂಪಿಯನ್ಸ್ ಭಾರತ ತಂಡದ ಅಭಿಯಾನ ಅಂತ್ಯಗೊಂಡಿದ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.
ದುಬೈನ ಪಿಚ್ ವರದಿ
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ನಲ್ಲಿ ಬ್ಯಾಟ್ಸ್ಮನ್ ಮತ್ತು ಬೌಲರ್ಗಳಿಗೆ ಸಮನಾದ ಬೆಂಬಲ ಸಿಗುತ್ತಿದೆ. ಬಳಕೆಯಾದ ಪಿಚ್ಗಳಲ್ಲಿ ಹುಲ್ಲುಹಾಸು ಕಡಿಮೆ ಮಾಡಲಾಗಿದ್ದು, ಬ್ಯಾಟಿಂಗ್ ಸ್ವರ್ಗತಾಣವಾಗಿದೆ. ಹೀಗಾಗಿ ಗುರಿ ಮುಂದಿದ್ದರೆ ಅದನ್ನು ಬೆನ್ನತ್ತುವುದು ಸುಲಭ. ಇಲ್ಲಿ ರನ್ ಚೇಸ್ ಮಾಡಿದ ತಂಡಗಳೇ ಗೆದ್ದಿರುವುದು ಹೆಚ್ಚು. ಹೀಗಾಗಿ ಟಾಸ್ ಅತ್ಯಂತ ಮಹತ್ವದ ಪಾತ್ರ ನಿಭಾಯಿಸಲಿದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ XI
1. ರೋಹಿತ್ ಶರ್ಮಾ (ನಾಯಕ/ ಓಪನರ್)
2. ಕೆ.ಎಲ್ ರಾಹುಲ್ (ಓಪನರ್)
3. ವಿರಾಟ್ ಕೊಹ್ಲಿ (ಬ್ಯಾಟ್ಸ್ಮನ್)
4. ಸೂರ್ಯಕುಮಾರ್ ಯಾದವ್ (ಬ್ಯಾಟ್ಸ್ಮನ್)
5. ಹಾರ್ದಿಕ್ ಪಾಂಡ್ಯ (ಆಲ್ರೌಂಡರ್)
6. ರಿಷಭ್ ಪಂತ್ (ವಿಕೆಟ್ಕೀಪರ್/ ಬ್ಯಾಟ್ಸ್ಮನ್)
7. ದಿನೇಶ್ ಕಾರ್ತಿಕ್ (ಬ್ಯಾಟ್ಸ್ಮನ್)
8. ಭುವನೇಶ್ವರ್ ಕುಮಾರ್ (ಬಲಗೈ ವೇಗಿ)
9. ದೀಪಕ್ ಚಹರ್ (ಬಲಗೈ ವೇಗಿ)
10. ರವಿ ಬಿಷ್ಣೋಯ್ (ಲೆಗ್ ಸ್ಪಿನ್ನರ್)
11. ಅರ್ಷದೀಪ್ ಸಿಂಗ್ (ಎಡಗೈ ವೇಗಿ)
ಉತ್ತಮ ಲಯದಲ್ಲಿ ಅಫಘಾನಿಸ್ತಾನ
ಟೀಮ್ ಇಂಡಿಯಾ ಮಾದರಿ ಅಫಘಾನಿಸ್ತಾನ ಕೂಡ ಗ್ರೂಪ್ ಹಂತದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿತು. ಆಡಿದ ಎರಡೂ ಪಂದ್ಯಗಳನ್ನು ಗೆದ್ದು 'ಬಿ' ಗುಂಪಿನ ಅಗ್ರಸ್ಥಾನಿಯಾಗಿ ಸೂಪರ್ ಫೋರ್ ಹಂತಕ್ಕೆ ಕಾಲಿಟ್ಟಿತ್ತು. ಆದರೆ, ಸೂಪರ್-4 ಹಂತದಲ್ಲಿ ಶ್ರೀಲಂಕಾ ಎದುರು ಮುಗ್ಗರಿಸಿ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದಾಗಿ, ಭಾರತ ಮತ್ತು ಪಾಕಿಸ್ತಾನ ವಿರುದ್ಧ ಗೆದ್ದರೆ ಮಾತ್ರ ಫೈನಲ್ ತಲುಪುವ ಸ್ಥಿತಿಗೆ ತಲುಪಿದೆ. ಆದರೂ, ಗ್ರೂಪ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ತನ್ನ ಶ್ರೇಷ್ಠ ಲಯದಲ್ಲಿದೆ.
ಅಫಘಾನಿಸ್ತಾನದ ಸಂಭಾವ್ಯ ಪ್ಲೇಯಿಂಗ್ XI
ಹಝರತ್ಉಲ್ಲಾ ಝಜಾಯ್, ರೆಹಮಾನುಲ್ಲಾ ಗುರ್ಬಝ್ (ವಿಕೆಟ್ಕೀಪರ್), ಇಬ್ರಾಹಿಮ್ ಝದ್ರಾನ್, ನಜೀಬುಲ್ಲ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಕರೀಮ್ ಜನತ್, ರಶೀದ್ ಖಾನ್, ಅಝ್ಮತ್ಉಲ್ಲಾ ಒಮರ್ಝಾಯ್, ಮುಜೀಬ್ ಉರ್ ರೆಹಮಾನ್, ಪರೀದ್ ಅಹ್ಮದ್ ಮಲಿಕ್, ಫಝಲ್ಹಕ್ ಫಾರೂಕಿ.
ಮುಖಾಮುಖಿ ದಾಖಲೆ
ಒಟ್ಟು ಪಂದ್ಯ: 03
ಭಾರತಕ್ಕೆ ಜಯ: 03
ಆಫ್ಘನ್ಗೆ ಗೆಲುವು: 00
ಪಂದ್ಯದ ವಿವರ
Asia Cup 2022 Ind Vs Afg Match Preview, Head To Head, Playing Xi And Live Streaming Details.
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm