ಬ್ರೇಕಿಂಗ್ ನ್ಯೂಸ್
05-09-22 01:28 pm Source: Vijayakarnataka ಕ್ರೀಡೆ
ದುಬೈ: ಹಾಟ್ ಸ್ಟಾರ್ನ ಲೈವ್ ವೀಕ್ಷಣೆಯಲ್ಲಿ ಬರೋಬ್ಬರಿ 1.4 ದಶಲಕ್ಷ ಮಂದಿಯಿಂದ ವೀಕ್ಷಣೆಗೆ ಒಳಪಟ್ಟಿದ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವಣ ಏಷ್ಯಾ ಕಪ್ 2022 ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳ ಅಚ್ಚರಿಯ ಸೋಲುಂಡಿತು. ಅಂದಹಾಗೆ ಟೂರ್ನಿಯ 'ಎ' ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ಗಳಿಂದ ಪಾಕ್ ಎದುರು ಜಯ ದಾಖಲಿಸಿತ್ತು. ಈ ಸೋಲಿಗೆ ಪಾಕ್ ಪಡೆ ಇದೀಗ ಸೇಡು ತೀರಿಸಿಕೊಂಡಿದೆ.
ಸೂಪರ್-4 ಹಂತದಲ್ಲಿ ಟೀಮ್ ಇಂಡಿಯಾದ ಸೋಲು ಫೈನಲ್ ಹಾದಿಯನ್ನು ಕಠಿಣವನ್ನಾಗಿಸಿದೆ. ಏಕೆಂದರೆ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಉತ್ತಮ ಲಯದಲ್ಲಿರುವ ಶ್ರೀಲಂಕಾ ಮತ್ತು ಅಫಘಾನಿಸ್ತಾನ ಎದುರು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಅತ್ತ ಪಾಕಿಸ್ತಾನ ತಂಡ ಇನ್ನೊಂದು ಪಂದ್ಯ ಗೆದ್ದರೂ ಫೈನಲ್ನಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳಲಿದೆ.
ಸೆಪ್ಟೆಂಬರ್ 6ರಂದು ಭಾರತ ತಂಡ ಐದು ಬಾರಿಯ ಚಾಂಪಿಯನ್ಸ್ ಶ್ರೀಲಂಕಾ ಎದುರು ಪೈಪೋಟಿ ನಡೆಸಲಿದೆ. ಲೀಗ್ ಹಂತದ ಕೊನೇ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 2 ವಿಕೆಟ್ಗಳ ರೋಚಕ ಜಯ ದಾಖಲಿಸಿ ಸೂಪರ್-4 ಹಂತಕ್ಕೆ ಕಾಲಿಟ್ಟಿರುವ ಶ್ರೀಲಂಕಾ ತಂಡ ಆತ್ಮವಿಶ್ವಾಸದ ಅಲೆಯಲ್ಲಿದೆ. ಹೀಗಾಗಿ ದ್ವೀಪರಾಷ್ಟ್ರದ ಎದುರು ಭಾರತ ತಂಡ ಜಯ ದಕ್ಕಿಸಕೊಳ್ಳಲು ತನ್ನ ಶ್ರೇಷ್ಠ ಆಟ ಹೊರತರಬೇಕಾದ ಅನಿವಾರ್ಯತೆ ಇದೆ. ಅಂದಹಾಗೆ ಸೂಪರ್-4 ಹಂತದ ಮೊದಲ ಹಣಾಹಣಿಯಲ್ಲಿ ಶ್ರೀಲಂಕಾ ತಂಡ ಅಫಘಾನಿಸ್ತಾನ ಎದುರು ಗೆದ್ದಿದ್ದು, ಇನ್ನೊಂದು ಪಂದ್ಯ ಗೆದ್ದರೂ ಫೈನಲ್ ತಲುಪುವ ಅತ್ಯುತ್ತಮ ಅವಕಾಶ ಹೊಂದಿದೆ.
ಅತ್ತ ಪಾಕಿಸ್ತಾನ ತಂಡ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಅಫಘಾನಿಸ್ತಾನ (ಸೆಪ್ಟೆಂಬರ್ 7) ಮತ್ತು ಶ್ರೀಲಂಕಾ (ಸೆಪ್ಟೆಂಬರ್ 9) ಎದುರು ಪೈಪೋಟಿ ನಡೆಸಲಿದ್ದು, ಎರಡರಲ್ಲಿ ಕನಿಷ್ಠ ಒಂದು ಗೆಲುವಿನ ಹುಡುಕಾಟದಲ್ಲಿದೆ. ಹೀಗಾಗಿ ಟೀಮ್ ಇಂಡಿಯಾಗೆ ತನ್ನ ಮುಂದಿನ ಎರಡೂ ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಅಫಘಾನಿಸ್ತಾನ ಎದುರು ಬೃಹತ್ ಗೆಲುವು ದಾಖಲಿಸುವ ಅನಿವಾರ್ಯತೆ ಎದುರಾಗಿದೆ.
ಭಾರತ ತಂಡ ಅಫಘಾನಿಸ್ತಾನ ಮತ್ತು ಶ್ರೀಲಂಕಾ ಎದುರು ಗೆದ್ದರೆ ಒಟ್ಟು 4 ಅಂಕಗಳನ್ನು ಗಳಿಸಲಿದೆ. ಅತ್ತ, ಪಾಕಿಸ್ತಾನ ತಂಡಕ್ಕೆ ಕನಿಷ್ಠ ಒಂದು ಜಯ ಸಿಕ್ಕರೂ 4 ಅಂಕ ಗಳಿಸಲಿದೆ. ಸದ್ಯಕ್ಕೆ 2 ಪಂದ್ಯಗಳನ್ನು ಅತ್ಯುತ್ತಮವಾಗಿ ಗೆಲ್ಲುವ, ಅಂದರೆ ಉತ್ತಮ ರನ್ರೇಟ್ನೊಂದಿಗೆ ಗೆಲ್ಲುವ ತಂಡಕ್ಕೆ ಫೈನಲ್ ಟಿಕೆಟ್ ಸಿಗಲಿದೆ. ಭಾರತ ತಂಡ ಇನ್ನೊಂದು ಪಂದ್ಯ ಸೋತರೂ ಸ್ಪರ್ಧೆಯಿಂದ ಹೊರ ಬೀಳಲಿದೆ.
ಏಷ್ಯಾ ಕಪ್ 2022 ಟೂರ್ನಿಯ ಸೂಪರ್-4 ಹಂತದ ವೇಳಾಪಟ್ಟಿ/ಫಲಿತಾಂಶ
ಸೆಪ್ಟೆಂಬರ್ 03 (ಶನಿವಾರ): ಸೂಪರ್ 4 ಹಂತದ ಪಂದ್ಯ ಅಫಘಾನಿಸ್ತಾನ vs ಶ್ರೀಲಂಕಾ (ಶಾರ್ಜಾ)
(ಶ್ರೀಲಂಕಾ ತಂಡಕ್ಕೆ 4 ವಿಕೆಟ್ಗಳ ಜಯ)
ಸೆಪ್ಟೆಂಬರ್ 04 (ಭಾನುವಾರ): ಸೂಪರ್ 4 ಹಂತದ ಪಂದ್ಯ ಭಾರತ vs ಪಾಕಿಸ್ತಾನ (ದುಬೈ)
(ಭಾರತಕ್ಕೆ 5 ವಿಕೆಟ್ಗಳ ಸೋಲು)
Team India Can Still Make It To The Final Of Asia Cup 2022, Here Is All You Need To Know About
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 10:33 pm
HK News Desk
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
14-10-25 10:36 pm
Mangalore Correspondent
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
ರಸ್ತೆಯಲ್ಲೇ ತ್ಯಾಜ್ಯ ಸುರಿಸುವ ಮೀನಿನ ಲಾರಿಗಳಿಗೆ ಮತ...
14-10-25 09:12 pm
ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ಯುವಕನ ಮೃತದೇಹ...
14-10-25 06:39 pm
ಬಿ.ಸಿ ರೋಡ್ ; ಹೆದ್ದಾರಿ ಬದಿ ಕಾರು ರಿಪೇರಿ ಮಾಡುತ್...
14-10-25 05:46 pm
14-10-25 04:44 pm
HK News Desk
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm