ಬ್ರೇಕಿಂಗ್ ನ್ಯೂಸ್
17-04-26 07:27 pm HK News Staffer ಕರ್ನಾಟಕ
ಧಾರವಾಡ, ಏಪ್ರಿಲ್ 17: ಬಿಜೆಪಿ ಮುಖಂಡ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆನ್ನೆ (ಏ.16) ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಿದ ತೀರ್ಪು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಪ್ರಕರಣದ 15ನೇ ಆರೋಪಿ ಆಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 17 ಜನರನ್ನು ಅಪರಾಧಿಗಳು ಎಂದು ಘೋಷಣೆ ಮಾಡಿದ್ದ ಕೋರ್ಟ್, ಇದೀಗ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ.
ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಇನ್ನು 19ನೇ ಆರೋಪಿ ಚನ್ನಕೇಶವ ಟಿಂಗರಿಕರ್ಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಎ1 ಬಸವರಾಜ ಮುತ್ತಗಿ ಮಾಫಿ ಸಾಕ್ಷಿ ಸ್ಥಾನವನ್ನು ಕೋರ್ಟ್ ಖಚಿತಪಡಿಸಿದೆ. ಈ ಪ್ರಕರಣದಲ್ಲಿ ಯೋಗೇಶ್ ಗೌಡ ಅವರ ಮಕ್ಕಳಿಗೆ 16 ಲಕ್ಷ ರೂ. ಪರಿಹಾರ ನೀಡಲು ಸಹ ನ್ಯಾಯಾಲಯ ಸೂಚನೆ ನೀಡಿದೆ.
ಈ ಪ್ರಕರಣ ಕರ್ನಾಟಕ ರಾಜಕಾರಣದಲ್ಲಿ ಭಾರೀ ದೊಡ್ಡ ಸಂಚಲನವನ್ನು ಮೂಡಿಸಿದ್ದು, ಇದೀಗ ಶಾಸಕ ವಿನಯ್ ಕುಲಕರ್ಣಿಯ ಶಾಸಕ ಸ್ಥಾನಕ್ಕೂ ಕಾನೂನು ಕುತ್ತು ಎದುರಾಗುವ ಸಾಧ್ಯತೆ ಚರ್ಚೆಯಲ್ಲಿದೆ. ಕೇಂದ್ರ ಸರ್ಕಾರ ತಂದಿರುವ ಪ್ರಜಾ ಪ್ರತಿನಿಧಿ ಕಾಯ್ದೆಯಡಿಯಲ್ಲಿ ಅವರು ಶಾಸಕ ಸ್ಥಾನದಿಂದ ವಜಾ ಕೂಡ ಆಗಿರುವುದಾಗಿ ವರದಿಯಾಗಿದೆ.
ಈ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದರು. ಇವರ ಪೈಕಿ ಇಬ್ಬರು ಮಾಫಿಸಾಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ 19 ಆರೋಪಿಗಳನ್ನ ದೋಷಿ ಎಂದು ತೀರ್ಪು ನೀಡಿದೆ. ಎ1 ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗಿ ಹೇಳಿಕೆ ನೀಡಿದ್ದರೆ, ಎ17 ಶಿವಾನಂದ ಮಾಫಿ ಸಾಕ್ಷಿಯಾದ ಬಳಿಕವೂ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮತ್ತೆ ಎ17 ಆರೋಪಿಯನ್ನಾಗಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿದೆ. ಇನ್ನು ಪ್ರಕರಣದ A20 ವಾಸುದೇವ ನಿಲೇಕಣಿ ಮತ್ತು A21 ಸೋಮಶೇಖರ ಅವರನ್ನ ಬಿಡುಗಡೆಗೆ ಕೋರ್ಟ್ ಆದೇಶಿಸಿತ್ತು.
ಇನ್ನು ಉಳಿದಂತೆ ಎ2 ವಿಕ್ರಮ್, ಎ3 ಕೀರ್ತಿ ಕುಮಾರ್, ಎ4 ಸಂದೀಪ್, ಎ5 ವಿನಾಯಕ್, ಎ6 ಮಹಾಬಲೇಶ್ವರ್ ಅಲಿಯಾಸ್ ಮುದಕ, ಎ7 ಸಂತೋಷ್, ಎ8 ದಿನೇಶ್, ಎ9 ಅಶ್ವಥ್, ಎ10 ಸುನಿಲ್, ಎ11 ನಜೀರ್ ಅಹಮದ್, ಎ12 ಷಾನವಾಜ್, ಎ13 ನೂತನ್, ಎ14 ಹರ್ಷಿತ್, ಎ15 ವಿನಯ್ ಕುಲಕರ್ಣಿ, ಎ16 ಚಂದ್ರು ಮಾಮ, ಎ18 ವಿಕಾಸ್ ಕಲಬುರ್ಗಿ, ಎ19 ಚನ್ನಕೇಶವ ಟಿಂಗರಿಕರ್ ಅವರನ್ನು ದೋಷಿಗಳು ಎಂದು ಹೇಳಿ ಶಿಕ್ಷೆ ನೀಡಲಾಗಿದೆ.
ಶಿಕ್ಷೆ ಪ್ರಕಟವಾದ ಬಳಿಕ, ವಿನಯ್ ಕುಲಕರ್ಣಿ ಅವರು ಮೂರು ದಿನದಿಂದ ಒಂದೇ ಬಟ್ಟೆಯಲ್ಲಿದ್ದಾರೆ ಎಂದು ಅವರ ಪರ ವಕೀಲ ಸುನಿಲ್ ಮನವಿ ಮಾಡಿದ್ದಾರೆ. ಬಟ್ಟೆ ಬದಲಿಸಲು ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿದ್ದು, ಜೈಲು ಕೈಪಿಡಿಯಲ್ಲಿರುವಂತೆ ಬಟ್ಟೆ ಒದಗಿಸಲು ಜಡ್ಜ್ ಸೂಚನೆ ನೀಡಿದ್ದಾರೆ. ಪ್ರತಿ ಸೆಕ್ಷನ್ಗೂ ಪ್ರತ್ಯೇಕವಾಗಿ ದಂಡ ವಿಧಿಸಿರುವುದಾಗಿ ತಿಳಿಸಲಾಗಿದೆ.
ಇದಕ್ಕೂ ಮುನ್ನ ಪ್ರಕರಣದ ಹಿನ್ನೆಲೆ ಗಮನಿಸಿದರೆ, 2016ರ ಜೂನ್ 15ರಂದು ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರನ್ನು ಸಪ್ತಾಪುರ ಬಡಾವಣೆಯ ಜಿಮ್ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಉಪನಗರ ಪೊಲೀಸರು ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಬಳಿಕ 2019ರಲ್ಲಿ ಯೋಗೇಶ್ ಗೌಡ ಕುಟುಂಬದ ಒತ್ತಾಯದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂದು ತಿಳಿದುಬಂದಿತ್ತು. ಈ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಕೈವಾಡವಿರುವ ಅನುಮಾನ ವ್ಯಕ್ತವಾಗಿತ್ತು. 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ನಂತರ ಪ್ರಕರಣ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ವರ್ಗವಾಗಿ, ಇದೀಗ ಅಂತಿಮವಾಗಿ ಶಿಕ್ಷೆ ಪ್ರಕಟವಾಗಿದೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm