ಬ್ರೇಕಿಂಗ್ ನ್ಯೂಸ್
28-09-20 09:45 am Headline Karnataka News Network ಕ್ರೀಡೆ
ಮುಂಬೈ, ಸೆಪ್ಟಂಬರ್ 28: ಗುರುವಿನಂತೆ ಶಿಷ್ಯ ಎನ್ನುತ್ತಾರೆ. ಈ ದೃಶ್ಯ ನೋಡಿದರೆ ಯಾರು ಕೂಡ ಈ ಮಾತನ್ನು ನಿರಾಕರಣೆ ಮಾಡಲಾಗದು. ಬೌಂಡರಿ ಗೆರೆ ದಾಟಿ ಸಿಕ್ಸರ್ ಅಟ್ಟಿದ್ದ ಚೆಂಡನ್ನು ಆತ ಗಾಳಿಯಲ್ಲಿ ಹಾರುತ್ತಾ ಹಿಡಿದು ಮೈದಾನಕ್ಕೆ ತಿರುಗಿ ಎಸೆಯುವ ದೃಶ್ಯ ಕ್ರಿಕೆಟ್ ಪ್ರೇಮಿಗಳಲ್ಲಿ ಹುಚ್ಚೆಬ್ಬಿಸಿದೆ. ಫೀಲ್ಡಿಂಗ್ ಕ್ಷೇತ್ರದಲ್ಲಿ ವಿಶ್ವಖ್ಯಾತಿ ಗಳಿಸಿರುವ ಜಾಂಟಿ ರೋಡ್ಸ್ ಕಲಿಸಿದ ಪಾಠವನ್ನು ಯಥಾವತ್ತಾಗಿ ಶಿಷ್ಯ ಪಾಲನೆ ಮಾಡಿದ್ದ..!

ಇದು ನಡೆದಿರುವುದು ನಿನ್ನೆಯ ಪಂಜಾಬ್ ಮತ್ತು ರಾಜಸ್ಥಾನ ನಡುವಿನ ಐಪಿಎಲ್ ಪಂದ್ಯದಲ್ಲಿ. ಪಂಜಾಬ್ ತಂಡದ ಕೋಚ್ ಜಾಂಟಿ ರೋಡ್ಸ್. ಪಂಜಾಬ್ ತಂಡದ 224 ರನ್ ಬೆನ್ನತ್ತುವ ಸಂದರ್ಭ, ರಾಜಸ್ಥಾನ ತಂಡದ ಸಂಜು ಸ್ಯಾಮ್ಸನ್ ಸಿಕ್ಸರ್ ಅಟ್ಟಿದ್ದ ಚೆಂಡನ್ನು ಫೀಲ್ಡರ್ ನಿಕೋಲಸ್ ಪೂರಣ್ ಗಾಳಿಯಲ್ಲಿ ಹಾರಾಡುತ್ತಾ ಕ್ಯಾಚ್ ಮಾಡಿದ್ದಾರೆ. ಆದರೆ, ಕ್ಯಾಚ್ ಹಿಡಿದು ನೆಲಕ್ಕೆ ಬಿದ್ದರೆ ಸಿಕ್ಸರ್ ಆಗುವುದರಿಂದ ಚೆಂಡನ್ನು ಹಾಗೆಯೇ ನೆಲಕ್ಕೆ ಬೀಳುವ ಮೊದಲು ಮೈದಾನದತ್ತ ಎಸೆದಿದ್ದಾರೆ.. ಆಮೂಲಕ ಸಿಕ್ಸರ್ ತಡೆದಿದ್ದಲ್ಲದೆ ನಾಲ್ಕು ರನ್ ಉಳಿಸಿದ್ದ ಪೂರಣ್. ಈ ಮಾದರಿಯ ಫೀಲ್ಡಿಂಗ್ ಭಾರೀ ಅಪರೂಪದ್ದಾಗಿದ್ದು ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳನ್ನು ಸೆಳೆದಿದೆ. ಅಷ್ಟೇ ಅಲ್ಲ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ನಾನು ಕ್ರಿಕೆಟ್ ಜೀವನದಲ್ಲಿ ನೋಡೇ ಇಲ್ಲದ ಚಮತ್ಕಾರ ಎಂದು ಟ್ವೀಟ್ ಮೂಲಕ ಉದ್ಗರಿಸಿದ್ದಾರೆ.
ವಿಶೇಷ ಅಂದ್ರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್ ಸಚಿನ್ ಟ್ವೀಟನ್ನು ಮರು ಟ್ವೀಟ್ ಮಾಡಿದ್ದು ತುಳುವಿನಲ್ಲಿ "ಶೇ ಎಂಚಿನ ಫೀಲ್ಡಿಂಗ್ ಮಾರ್ರೆ..! " (ಛೇ, ಎಂತ ಫೀಲ್ಡಿಂಗ್ ಮಾರ್ರೆ..) ಎಂದು ಕಮೆಂಟಿಸಿದ್ದು ತುಳುವರಲ್ಲಿ ಕಿಚ್ಚು ಹಚ್ಚಿದೆ. ತುಳುವರು ಈ ಟ್ವೀಟ್ ನೋಡಿ ಫಿದಾ ಆಗಿದ್ದು ಅದನ್ನು ಕಾಪಿ ಮಾಡಿ ಹಂಚುತ್ತಿದ್ದಾರೆ. ಹೀಗಾಗಿ ಕರಾವಳಿ ಸೇರಿ ವಿಶ್ವಾದ್ಯಂತ ಇರುವ ತುಳುವರು ಅಲ್ಲಿನ ವಿಡಿಯೋಗಿಂತಲೂ ಸ್ಟಾರ್ ಸ್ಪೋರ್ಟ್ಸ್ ಟ್ವೀಟ್ ಬಗ್ಗೆಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ…! 😳😳😳 #RRvKXIP https://t.co/2dJ6C5VIQU
— Star Sports Kannada (@StarSportsKan) September 27, 2020
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm