ಹರ್ಷ ಕೊಲೆ ಪ್ರಕರಣ ; ಒಂದೋ ಆರೋಪಿಗಳನ್ನು ಗಲ್ಲಿಗೇರಿಸಿ, ಇಲ್ಲವೇ ಎನ್ಕೌಂಟರ್ ಮಾಡಿ ; ಬಜರಂಗಿಗಳ ಆಗ್ರಹ 

23-02-22 09:31 pm       Udupi Correspondent   ಕರಾವಳಿ

ಧರ್ಮದ ಪರವಾಗಿ‌ ಕೆಲಸ ಮಾಡುವ ಕಾರ್ಯಕರ್ತರನ್ನು ಗುರಿ ಮಾಡಿದ್ದೀರಿ. ಈವರೆಗೆ 29 ಮಂದಿ ಹಿಂದು ಕಾರ್ಯಕರ್ತರ ಹತ್ಯೆ ಆಗಿದೆ.‌ ಆದರೆ ನಾವು ಮಾನಸಿಕವಾಗಿ ಕುಗ್ಗಲ್ಲ.

ಉಡುಪಿ, ಫೆ.23 : ಧರ್ಮದ ಪರವಾಗಿ‌ ಕೆಲಸ ಮಾಡುವ ಕಾರ್ಯಕರ್ತರನ್ನು ಗುರಿ ಮಾಡಿದ್ದೀರಿ. ಈವರೆಗೆ 29 ಮಂದಿ ಹಿಂದು ಕಾರ್ಯಕರ್ತರ ಹತ್ಯೆ ಆಗಿದೆ.‌ ಆದರೆ ನಾವು ಮಾನಸಿಕವಾಗಿ ಕುಗ್ಗಲ್ಲ. ಗಲ್ಲಿ ಗಲ್ಲಿಯಲ್ಲಿ ಬಜರಂಗದಳದ ಕಾರ್ಯಕರ್ತರು, ಹರ್ಷ ಹುಟ್ಟುತ್ತಾರೆ.‌ ಯಾವುದೇ ದಾಳಿಗಳು ನಡೆದರೂ ಸಮರ್ಥ ಎದುರಿಸುತ್ತೇವೆ.‌ ನಾವು ಎಲ್ಲದಕ್ಕೂ ತಯಾರಾಗಿದ್ದೇವೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ. ಆರ್ ಹೇಳಿದ್ದಾರೆ.‌

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯನ್ನು ಖಂಡಿಸಿ ಉಡುಪಿಯಲ್ಲಿ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಸುನಿಲ್ ಕೆ.ಆರ್ ಮಾತನಾಡಿದರು.‌ ಇದು ವೈಯಕ್ತಿಕ‌ ಕೇಸ್ ಅಲ್ಲ, ಗಾಂಜಾ ಕೇಸ್ ಅಲ್ಲ. ಗೊಂದಲಗಳಿಗೆ ಅವಕಾಶ ಇಲ್ಲ. ಕೇವಲ ಕೋಮು ದ್ವೇಷದಿಂದ ಈ ಕೊಲೆ ಮಾಡಿದ್ದಾರೆ. ಈ ಬಗ್ಗೆ ಕೇವಲ ಘೋಷಣೆ ಕೂಗಿದರೆ ಪ್ರಯೋಜನ ಇಲ್ಲ. ‌ಇದಕ್ಕೆ ತಕ್ಕ ಉತ್ತರ ಕೊಟ್ಟೇ ಸಿದ್ಧ.‌ ನಾವು ಬಜರಂಗಿಗಳು, ಎಲ್ಲವನ್ನೂ ಎದುರಿಸುತ್ತೇವೆ.‌ ಪಿಎಫ್ ಐ, ಎಸ್ ಡಿಪಿಐ ಯಾವ ಲೆಕ್ಕ.‌ ಭಾರತೀಯರಾಗಿ ಬದುಕುತ್ತಾ ಇದ್ದೇವೆ. ಸಂವಿಧಾನಕ್ಕೆ ಗೌರವ ಕೊಡ್ತೇವೆ.‌ ಆದರೆ ಕಾನೂನು ಮೀರಿ ಹೋಗಲ್ಲ. 

ಹಿಜಾಬ್ ಬೇಡ ಎಂದು‌ ಹೈಕೋರ್ಟ್ ಹೇಳಿದರೂ ನೀವು ಕೇಳಲ್ಲ.‌ ಅದರ ನೆಪದಲ್ಲಿ ಹಿಂದುಗಳ ಮೇಲೆ ದ್ವೇಷ ಸಾಧಿಸುತ್ತೀರಿ.‌ ಹಿಂದು ಸಾತ್ವಿಕ ಸಮಾಜವನ್ನು ಹತ್ಯೆ ಮಾಡಲು ನಿಮ್ಮ ಸಂಘಟನೆಯವರು ತರಬೇತಿ ನೀಡಿದ್ದಾರೆ. ಆದರೆ ನಾವು ಜೈಲಿನೊಳಗೆ ಚಮಚಾದಲ್ಲಿ ಜಿಹಾದಿಗಳನ್ನು‌ ಕೊಚ್ಚಿ ಹಾಕಿದ್ದೇವೆ. ಹರ್ಷನ ಕೊಲೆಗೂ ಪ್ರತ್ಯುತ್ತರ ನೀಡುತ್ತದೆ.‌ ಹಿಂದು ಸಮಾಜ ತಕ್ಕ ಉತ್ತರ ಕೊಡುತ್ತೆ.‌ ದೇಶಕ್ಕೋಸ್ಕರ ಬಜರಂಗಿಗಳು ಯಾವ ಬಲಿದಾನಕ್ಕೂ ಸಿದ್ಧ. ನಾವು 80 ಶೇ. ಹಿಂದೂಗಳು ತಿರುಗಿ ನಿಂತ್ರೆ ನಿಮ್ಮ ಗತಿ ಏನು‌ ಅನ್ನೋದನ್ನು ಯೋಚಿಸಿ.‌ ಈ ದೇಶದಲ್ಲಿ ನಿಮ್ಮ ಆಟ ನಡೆಯಲ್ಲ.‌

ಇವತ್ತು ಹರ್ಷನನ್ನು‌ ಮುಟ್ಟಿದ್ದೀರಿ.‌ ಯಾರು ಅಧರ್ಮ ಮಾಡ್ತಾರೋ ಅವರಿಗೆ ಅಧರ್ಮದಿಂದಲೇ ಉತ್ತರ ಕೊಡಬೇಕು.‌ ನೂರಕ್ಕೆ ನೂರು ಪ್ರತ್ಯುತ್ತರ ಕೊಡ್ತೇವೆ.‌ ಒಂದೋ ಆರೋಪಿಗಳನ್ಬು ಗಲ್ಲಿಗೇರಿಸಿ ಇಲ್ಲವೇ ಎನ್ಕೌಂಟರ್ ಮಾಡಿ ಎಂದು ಸುನಿಲ್ ಕೆ.ಆರ್ ಆಗ್ರಹ ಮಾಡಿದ್ದಾರೆ. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಪಿಎಫ್ಐ, ಎಸ್ಡಿಪಿಐ ವಿರುದ್ಧ ಘೋಷಣೆ ಕೂಗಿದ್ದಾರೆ. ‌

Udupi Bajarang dal mass protest over murder of Harsha in Shivamogga. The protest was held in Udupi, Mangaluru and Kodagu on Wednesday seeking an inquiry by the National Investigation Agency (NIA) in the murder of a right wing activist Harsha in Shivamogga on Sunday night.