ಬ್ರೇಕಿಂಗ್ ನ್ಯೂಸ್
25-12-25 12:12 pm HK News Desk ಕರ್ನಾಟಕ
ಚಿತ್ರದುರ್ಗ, ಡಿ.25: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೆದ್ದಾರಿ 48 ರ ಗೊರ್ಲತ್ತು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ದುರ್ಘಟನೆಯಲ್ಲಿ 17ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಕಂಟೈನರ್ ವಾಹನವು ಡಿವೈಡರ್ ದಾಟಿ ಎದುರುಗಡೆಯಿಂದ ಬರುತ್ತಿದ್ದ ಸೀಬರ್ಡ್ ಸ್ಲೀಪರ್ ಬಸ್ಸಿಗೆ ಅಪ್ಪಳಿಸಿದ ಪರಿಣಾಮ ಬಸ್ ಹೊತ್ತಿ ಉರಿದಿದೆ. ಬಸ್ನಲ್ಲಿದ್ದ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಇನ್ನುಳಿದವರಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಸುಕಿನ ವೇಳೆ ದುರ್ಘಟನೆ ನಡೆದಿದ್ದು ಒಂದು ಕಡೆಯಿಂದ ಬರುತ್ತಿದ್ದ ಕಂಟೈನರ್, ಡಿವೈಡರ್ ಹಾರಿ ಎದುರುಗಡೆಯಿಂದ ಬರುತ್ತಿದ್ದ ಬಸ್ಗೆ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ಅಪ್ಪಳಿಸುವಿಕೆಯಿಂದಾಗಿ ಸ್ಲೀಪರ್ ಕೋಚ್ ಬಸ್ ರಸ್ತೆಯ ಮಧ್ಯೆಯೇ ಬೆಂಕಿ ಹತ್ತಿಕೊಂಡು ಧಗಧಗನೆ ಉರಿದಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಹಿರಿಯೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಲಾರಿ, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬಸ್ಗೆ ಡಿಕ್ಕಿ ಹೊಡೆದಿದೆ.




ಡಿಸೆಂಬರ್ 24, 2025 ರಂದು ರಾತ್ರಿ 8:25ಕ್ಕೆ ಬೆಂಗಳೂರಿನ ಗಾಂಧಿನಗರದಿಂದ ಹೊರಟಿದ್ದ ಸೀಬರ್ಡ್ ಬಸ್‌ನಲ್ಲಿ ಒಟ್ಟು 29 ಪ್ರಯಾಣಿಕರು ಮತ್ತು 3 ಜನ ಬಸ್ ಸಿಬ್ಬಂದಿ ಇದ್ದರು. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 25 ಜನ ಪ್ರಯಾಣಿಕರು ಗೋಕರ್ಣಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಇನ್ನುಳಿದವರಲ್ಲಿ ಇಬ್ಬರು ಶಿವಮೊಗ್ಗಕ್ಕೆ ಮತ್ತು ಇಬ್ಬರು ಕುಮಟಾಗೆ ಪ್ರಯಾಣ ಬೆಳೆಸುತ್ತಿದ್ದರು.
ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ 28 ಪ್ರಯಾಣಿಕರ ಪಟ್ಟಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ರೆಡ್ ಬಸ್ ಮೂಲಕ 19 ಹಾಗೂ ಅಭಿ ಬಸ್ ಮೂಲಕ 9 ಸೀಟುಗಳನ್ನು ಪ್ರಯಾಣಿಕರು ಬುಕ್ ಮಾಡಿದ್ದರು. ಬೆಂಗಳೂರಿನಿಂದ ಹೊರಟಿದ್ದವರಲ್ಲಿ ಹೆಚ್ಚಿನವರು ಗೋಕರ್ಣಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು.
20 ಕಿಲೋಮೀಟರ್ ಟ್ರಾಫಿಕ್ ಜಾಮ್ :
ಅಪಘಾತದಿಂದ ಜವನಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಶಿರಾ ಹಿರಿಯೂರು ನಡುವೆ ಸುಮಾರು 30 ಕಿಲೋಮೀಟರ್ ದೂರ ವಾಹನಗಳು ನಿಂತಿದ್ದು, ಮುಂಬೈಗೆ ಹೋಗುವ ಮಾರ್ಗ ಸಂಪೂರ್ಣ ಜಾಮ್ ಆಗಿದೆ.
ತನಿಖೆಗೆ ಆದೇಶ :
ರಸ್ತೆ ಅಪಘಾತದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಪಘಾತದಲ್ಲಿ ಹಲವು ಪ್ರಯಾಣಿಕರು ಸಜೀವ ದಹನವಾದ ಘೋರ ದುರಂತದ ಸುದ್ದಿ ಕೇಳಿ ಎದೆ ನಡುಗಿತು. ಕ್ರಿಸ್ಮಸ್ ರಜೆಯಲ್ಲಿ ಊರಿಗೆ ತೆರಳುತ್ತಿದ್ದವರ ಪ್ರಯಾಣ ಈ ರೀತಿ ದುರಂತದಲ್ಲಿ ಕೊನೆಗೊಂಡಿರುವುದು ವಿಷಾದನೀಯ' ಎಂದು ಅವರು ದುಃಖಿತರಾಗಿದ್ದಾರೆ.
ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ ತಲಾ 2 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ‘ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾಗಿದೆ ಎಂದು ತಿಳಿದು ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ’ ಎಂದು ತಿಳಿಸಿದೆ.
‘ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್)ಯಿಂದ 2 ಲಕ್ಷ ರೂ. ತಾತ್ಕಾಲಿಕ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು’ ಎಂದು ಪ್ರಧಾನಿ ತಿಳಿಸಿದ್ದಾರೆ.
A horrific road accident occurred in the early hours of Wednesday near Gorlattu Cross on National Highway-48 in Hiriyur taluk of Chitradurga district, claiming the lives of more than 17 passengers. According to preliminary reports, a speeding container truck crossed the highway divider and rammed head-on into a Seabird sleeper bus that was travelling from Bengaluru to Gokarna. The impact was so severe that the bus immediately caught fire and was completely gutted.
25-12-25 08:00 pm
Bangalore Correspondent
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
24-12-25 10:30 pm
Mangalore Correspondent
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್...
23-12-25 10:51 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm