ಬ್ರೇಕಿಂಗ್ ನ್ಯೂಸ್
08-09-20 09:26 pm Mangalore Reporter ಕರಾವಳಿ
ಮಂಗಳೂರು, ಸೆಪ್ಟೆಂಬರ್ 8: ಡಿಜಿಪಿ ಪ್ರವೀಣ್ ಸೂದ್ ಇಂದು ಕರಾವಳಿ ಜಿಲ್ಲೆಗಳಿಗೆ ಆಗಮಿಸಿದ್ದರು. ಉಡುಪಿ ಜಿಲ್ಲೆಗೆ ಬಂದ ಬಳಿಕ ಮಂಗಳೂರಿಗೆ ಆಗಮಿಸಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಸಿದ್ರು. ಸಭೆಯಲ್ಲಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್, ಎಸ್ಪಿ ಮತ್ತು ಐಜಿಪಿ ಪಾಲ್ಗೊಂಡಿದ್ದರು.
ಸಭೆಯ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಪ್ರವೀಣ್ ಸೂದ್, ಈಗೆಲ್ಲ ಹಳೆ ಸಂಪ್ರದಾಯದಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡಕ್ಕಾಗಲ್ಲ. ಆಧುನಿಕ ತಂತ್ರಜ್ಞಾನ ಬಳಸ್ಕೊಂಡು ಕೆಲಸ ಮಾಡಬೇಕಾಗತ್ತೆ. ಆರೋಪಿಗಳನ್ನು ಹಿಡಿಯೋದಾಗಲೀ, ಪ್ರಕರಣ ದಾಖಲಿಸೋದಾಗಲೀ ಎಲ್ಲ ವಿಚಾರಗಳೂ ಮೊದಲಿನ ಹಾಗಲ್ಲ ಅಂತ ಹೇಳಿದರು.
ಇನ್ನು ಡ್ರಗ್ ಮಾಫಿಯಾ ಬಗ್ಗೆ ಮುಖ್ಯಮಂತ್ರಿ ಮೊದ್ಲಿಂದಲೂ ಹೇಳ್ತಾನೇ ಇದ್ರು. ಕಟ್ಟುನಿಟ್ಟಿನ ಏಕ್ಷನ್ ಬಗ್ಗೆ ಸೂಚನೆ ಕೊಟ್ಟಂತೆ ನಾವು ಕೆಲಸ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಈಗ ಒಂದಷ್ಟು ಮಂದಿಯನ್ನು ಎರೆಸ್ಟ್ ಮಾಡಿದ್ದೇವೆ. ರಾಜಧಾನಿ ಆಗಿರೋ ಕಾರಣ ಈ ವಿಚಾರ ಹೆಚ್ಚು ಹೈಲೈಟ್ ಆಗಿದೆ. ಆದರೆ ಪೊಲೀಸ್ ಇಲಾಖೆ ರಾಜ್ಯದ ಎಲ್ಲೆಡೆ ಕಾರ್ಯಾಚರಣೆ ಮಾಡ್ತಾ ಇದೆ. ಬೆಂಗಳೂರು ಅಲ್ಲದೆ, ಕೋಲಾರ, ಚಿತ್ರದುರ್ಗ, ಮಂಗಳೂರಲ್ಲೂ ಹಲವರಿಗೆ ಬಂಧಿಸಿದ್ದೇವೆ ಎಂದರು ಸೂದ್.
ಎನ್ ಡಿಪಿಎಸ್ ಆ್ಯಕ್ಟ್ ತುಂಬ ಕಠಿಣವಾಗಿದ್ದು ಏಕ್ಷನ್ ಮಾಡುತ್ತಿದ್ದೇವೆ. ಪೊಲೀಸರಿಗೆ ಕಟ್ಟುನಿಟ್ಟಾಗಿ ಕಾನೂನು ಪಾಲನೆಗೆ ಸೂಚಿಸಿದ್ದೇವೆ. ಈ ಬಗ್ಗೆ ಬಹಳಷ್ಟು ಕಡೆ ಅಧಿಕಾರಿಗಳಿಗೆ ತರಬೇತಿ ಕೂಡ ಮಾಡ್ತಾ ಇದೇವೆ. ಹಾಗಂತ, ಡ್ರಗ್ ಕಂಟ್ರೋಲ್ ಕೇವಲ ಎನ್ ಸಿಬಿ ಪೊಲೀಸರ ಕೆಲಸ ಮಾತ್ರ ಅಲ್ಲ. ನಾರ್ಕೋಟಿಕ್ ಆ್ಯಕ್ಟ್ ಬಗ್ಗೆ ಎಲ್ಲರದ್ದೂ ಜವಾಬ್ದಾರಿ ಇದೆ. ಪ್ರತಿ ಠಾಣೆಯಲ್ಲೂ ಇದರ ಜಾಗೃತಿ ಇರಬೇಕು.
ಲಾಕ್ಡೌನ್ ಬಳಿಕ ಕ್ರೈಂ ಕಮ್ಮಿಯಾಗಿದೆ, ಈ ಸಮಯದಲ್ಲಿ ಡ್ರಗ್ಸ್ ಹೆಚ್ಚಾಗಿದೆ ಅನ್ನಕ್ಕಾಗಲ್ಲ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದ ಪ್ರವೀಣ್ ಸೂದ್, ಗಾಂಜಾಕ್ಕಿಂತಲೂ ಸಿಂಥೆಟಿಕ್ ಡ್ರಗ್ ಹಿಡಿಯೋಕೆ ತುಂಬ ಕಷ್ಟ. ಅದರ ಪರಿಮಿತಿ ತುಂಬ ಸಣ್ಣದು ಎಂದ್ರು.
ಇನ್ನು ಬೆಂಗಳೂರಿನಲ್ಲಿ ಬಂಧಿರಾಗಿರೋರು ಹೈಪ್ರೊಫೈಲ್ ಅನ್ನುವುದು ಮೀಡಿಯಾ ಮಂದಿಗೆ ಮಾತ್ರ, ನಮ್ಗೆ ಎಲ್ರೂ ಒಂದೇ. ಕಾನೂನು ಎಲ್ರಿಗೂ ಒಂದೇ. ಹಾಗಾಗಿ ಅವ್ರು ಡ್ರಗ್ ಪೆಡ್ಲರ್ ಅಷ್ಟೇ, ಕಾನೂನು ಹೇಗಿದೆಯೋ ಅದ್ರ ಹಾಗೆ ಕ್ರಮ ಕೈಗೊಳ್ತೀವಿ ಎಂದ್ರು.
ಇನ್ನು ಡ್ರಗ್ ಸೇವನೆ ವಿಚಾರದಲ್ಲಿ ನಮ್ ಸಮಾಜ, ಶಿಕ್ಷಣ ಸಂಸ್ಥೆಗಳು, ಮೀಡಿಯಾ ಎಲ್ಲ ಸೇರಿ ಕೆಲ್ಸ ಮಾಡ್ಬೇಕು. ಡ್ರಗ್ ಕಡಿವಾಣ ಹಾಕೋದು ಕೇವಲ ಪೊಲೀಸರಿಂದ ಸಾಧ್ಯವಿಲ್ಲ ಎಂದು ಸಲಹೆ ಮಾಡಿದ ಡಿಜಿಪಿಯವರು, ಬೆಂಗಳೂರು ಪ್ರಕರಣದ ಬಗ್ಗೆ ತನಿಖೆ ಆಗ್ತಿದ್ದು ಆ ಬಗ್ಗೆ ಈಗ ಏನೂ ಹೇಳೋಕೆ ಆಗಲ್ಲ. ಡ್ರಗ್ಸ್ ಕೇವಲ ಗೋವಾ, ಆಂಧ್ರದಿಂದ ಬರ್ತಿದೆ ಅನ್ನೋದು ತಪ್ಪು ಕಲ್ಪನೆ. ವಿದೇಶಗಳಿಂದ ವಿಮಾನದಲ್ಲೂ ಬರ್ತಾ ಇದೆ. ಹೀಗಾಗಿ ಪೊಲೀಸರು ಎಲ್ಲ ಕೋನಗಳಿಂದಲು ತನಿಖೆ ನಡೆಸ್ತಿದಾರೆ ಎಂದು ಸೂಚ್ಯವಾಗಿ ಹೇಳಿದ್ರು.
Join our WhatsApp group for latest news updates
ಇದನ್ನೂ ಓದಿ: ಡ್ರಗ್ಸ್ ವಿಚಾರದಲ್ಲಿ ನಮ್ಮದು ಜೀರೋ ಟಾಲರೆನ್ಸ್ : ಡಿಜಿಪಿ ಪ್ರವೀಣ್ ಸೂದ್
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 01:09 pm
Mangalore Correspondent
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm