ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ ಸ್ವಾಮೀಜಿಗಳ ಸುದ್ದಿಗೋಷ್ಟಿ ; ಹಿಂದೆ ಕೈತಪ್ಪಿ ಹೋಗಿತ್ತು, ಈ ಬಾರಿ ಅವಕಾಶ ಕೊಡಿ ಎಂದು ತುಮಕೂರಿನಲ್ಲಿ ಸ್ವಾಮೀಜಿಗಳ ಒತ್ತಾಯ 

18-12-25 04:31 pm       HK News Desk   ಕರ್ನಾಟಕ

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ನೀಡುವಂತೆ ತುಮಕಯ ಜಿಲ್ಲೆಯ ಹಲವು ಮಠಾಧೀಶರ ಪತ್ರಿಕಾಗೋಷ್ಟಿ ನಡೆಸಿ ಒತ್ತಾಯ ಮಾಡಿದ್ದಾರೆ. ದಲಿತ, ಲಿಂಗಾಯತ, ವೀರಶೈವ, ಒಕ್ಕಲಿಗ ಸ್ವಾಮೀಜಿಗಳು ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿದ್ದು ಪರಂ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. 

ತುಮಕೂರು, ಡಿ.18 : ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ನೀಡುವಂತೆ ತುಮಕಯ ಜಿಲ್ಲೆಯ ಹಲವು ಮಠಾಧೀಶರ ಪತ್ರಿಕಾಗೋಷ್ಟಿ ನಡೆಸಿ ಒತ್ತಾಯ ಮಾಡಿದ್ದಾರೆ. ದಲಿತ, ಲಿಂಗಾಯತ, ವೀರಶೈವ, ಒಕ್ಕಲಿಗ ಸ್ವಾಮೀಜಿಗಳು ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿದ್ದು ಪರಂ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. 

ಒಕ್ಕಲಿಗ ಮಠದ ಹನುಮಂತನಾಥ ಸ್ವಾಮೀಜಿಯವರೂ ಪರಂಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು ಸರಳ ಸಜ್ಜನಿಕೆಯ ರಾಜಕಾರಣಿ ಪರಮೇಶ್ವರ್ ಸಿಎಂ ಆಗಲಿ ಎಂದು ಹಾರೈಸಿದ್ದಾರೆ.

ಪರಮೇಶ್ವರ್ ಮುಖ್ಯಮಂತ್ರಿ ಆಗಲಿ ಅನ್ನೋದು ನಮ್ಮ ಸದುದ್ದೇಶ. ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ಮುಖ್ಯಮಂತ್ರಿ ಬದಲಾವಣೆ ಕೂಗು ಇದೆ. ಕಳೆದ ಬಾರಿಯಿಂದಲೂ ಕೇಳ್ತಾನೆ ಬಂದಿದ್ದೇವೆ. ಎರಡು ಮೂರು ಬಾರಿ ಸಭೆಗಳಲ್ಲಿ ನಾನು ಹೇಳಿಕೊಂಡು ಬಂದಿದ್ದೇನೆ.

ಪಕ್ಷದ ನಿಯಮದಂತೆ ಕೆಪಿಸಿಸಿ ಸ್ಥಾನ ಇದ್ದವರಿಗೆ ಸಿಎಂ ನೀಡಬೇಕಿತ್ತು. 2013ರಲ್ಲಿ ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಅಧಿಕಾರಕ್ಕೆ ತಂದರೂ ಪರಮೇಶ್ವರ್ ಗೆ ಸಿಎಂ ಸ್ಥಾನ ಕೈತಪ್ಪಿತ್ತು. ಈ ಬಾರಿ ಆ ಅವಕಾಶ ಬಂದಿದ್ದು ಪರಮೇಶ್ವರ್ ಅವರನ್ನೇ ಸಿಎಂ ಮಾಡಬೇಕು. ನಮ್ಮ ಜಿಲ್ಲೆಗೆ, ಹಿಂದುಳಿದ ವರ್ಗದ ವ್ಯಕ್ತಿಯೊಬ್ಬರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಅಂತ ಒತ್ತಾಯ ಮಾಡ್ರೀನಿ ಎಂದು ಎಲೆರಾಂಪುರ ಒಕ್ಕಲಿಗರ ಮಠದ ಸ್ವಾಮೀಜಿ ಹೇಳಿದ್ದಾರೆ.  

ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಪರಮೇಶ್ವರ್ ಸಿಎಂ ಆಗಬೇಕು ಎಂದು ಹನುಮಂತನಾಥ ಸ್ವಾಮೀಜಿ ಹೇಳಿದ್ದಾರೆ.

A group of seers from Okkaliga, Lingayat, Veerashaiva and Dalit communities held a joint press conference in Tumakuru on December 18, urging the Congress leadership to appoint Home Minister Dr G Parameshwara as the Chief Minister of Karnataka.