ಬ್ರೇಕಿಂಗ್ ನ್ಯೂಸ್
17-12-25 01:38 pm HK News Desk ದೇಶ - ವಿದೇಶ
ನವದೆಹಲಿ, ಡಿ.17 : ಆಸ್ಟ್ರೇಲಿಯಾದ ಬೊಂಡಿ ಬೀಚ್ನಲ್ಲಿ ಇತ್ತೀಚೆಗೆ ಯಹೂದಿಗಳ ಮೇಲೆ ಗುಂಡಿನ ದಾಳಿಗೈದು ಮೃತಪಟ್ಟ ಸಾಜಿದ್ ಅಕ್ರಮ್ ಭಾರತದ ಹೈದರಾಬಾದ್ ಮೂಲದವನು ಎಂದು ತೆಲಂಗಾಣ ಪೊಲೀಸರು ದೃಢಪಡಿಸಿದ್ದಾರೆ. 27 ವರ್ಷಗಳ ಹಿಂದೆ ಅಕ್ರಮ್ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದು, ಭಾರತೀಯ ಪಾಸ್ ಪೋರ್ಟ್ ಹೊಂದಿರುವುದು ಬೆಳಕಿಗೆ ಬಂದಿದೆ.
16 ಜನರನ್ನು ಬಲಿ ಪಡೆದ ಈ ಪ್ರಕರಣದ ಇಬ್ಬರೂ ದಾಳಿಕೋರರನ್ನು ಪಾಕಿಸ್ತಾನ ಮೂಲದ ಅಪ್ಪ-ಮಗ ಎಂದು ಆಸ್ಟ್ರೇಲಿಯಾ ಪೊಲೀಸರು ಹೇಳಿದ್ದರು. ದಾಳಿಕೋರರ ಪೈಕಿ ಸಾಜಿದ್ ಅಕ್ರಮ್ (50) ಪ್ರತಿದಾಳಿಯಲ್ಲಿ ಮೃತಪಟ್ಟಿದ್ದ. 24 ವರ್ಷದ ಮತ್ತೊಬ್ಬ ದಾಳಿಕೋರ ನವೀದ್ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.





ಬಿಕಾಂ ಪದವೀಧರ
'ಸಾಜಿದ್ ಆಕ್ರಮ್ ಹೈದರಾಬಾದಿನ ಅನ್ವರ್ ಅಲ್ ಉಲೂಮ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದ, 1998ರಲ್ಲಿ 27 ವರ್ಷಗಳ ಹಿಂದೆ ಆತ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದು ಅಲ್ಲಿಯದೇ ಪ್ರಜೆಯಾಗಿದ್ದ. ಬಳಿಕ ಆಸ್ಟ್ರೇಲಿಯಾದ ವೆನೆರಾ ಗ್ರೋಸ್ಸೋ ಎಂಬ ಮಹಿಳೆಯನ್ನು ವಿವಾಹವಾಗಿದ್ದ. ಪುತ್ರ ನವೀದ್ ಹಾಗೂ ಮತ್ತೊಬ್ಬ ಹೆಣ್ಣು ಮಗಳು ಆಸ್ಟ್ರೇಲಿಯಾದಲ್ಲೇ ಜನಿಸಿದ್ದರು. ಅವರಿಬ್ಬರೂ ಆಸ್ಟ್ರೇಲಿಯಾ ಪೌರತ್ವ ಪಡೆದಿದ್ದಾರೆ ಎಂದು ತೆಲಂಗಾಣ ಡಿಜಿಪಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಆಸ್ಟ್ರೇಲಿಯಾಕ್ಕೆ ವಲಸೆ ಹೋದ ಬಳಿಕ ಸಾಜಿದ್ ಅಕ್ರಮ್ ಹೈದರಾಬಾದ್ನಲ್ಲಿರುವ ತನ್ನ ಕುಟುಂಬದೊಂದಿಗೆ ಸಂಪರ್ಕವನ್ನು ಕಡಿಮೆ ಮಾಡಿದ್ದ. ಕೇವಲ ಆರು ಸಂದರ್ಭಗಳಲ್ಲಿ ಮಾತ್ರ ಭಾರತಕ್ಕೆ ಭೇಟಿ ನೀಡಿದ್ದ. ತಂದೆಯ ನಿಧನದ ಸಮಯದಲ್ಲೂ ಭಾರತಕ್ಕೆ ಬಂದಿರಲಿಲ್ಲ ಎಂಬುದು ತಿಳಿದುಬಂದಿದೆ. 2001ರಲ್ಲಿ ತನ್ನ ಪತ್ನಿಯನ್ನು ಹೈದ್ರಾಬಾದ್ ಗೆ ಕರೆತಂದು ತನ್ನ ಹೆತ್ತವರಿಗೆ ತೋರಿಸಿ ನಿಖಾವನ್ನೂ ನೆರವೇರಿಸಿದ್ದ. ಆಬಳಿಕ ಬಂದು ತನ್ನ ಕುಟುಂಬಕ್ಕೆ ಸೇರಿದ ಪಾಲಿನ ಜಾಗವನ್ನು ಮಾರಾಟ ಮಾಡಿ ಹೋಗಿದ್ದ.
ಹೈದ್ರಾಬಾದ್ ನಗರದ ಟೋಲಿ ಚೌಕಿಯ ಅಲ್ ಹಸ್ನತ್ ಕಾಲನಿಯಲ್ಲಿ ಸಾಜಿದ್ ಅಕ್ರಮ್ ಸೋದರ ಮತ್ತು ಸಂಬಂಧಿಕರು ನೆಲೆಸಿದ್ದಾರೆ. ಸಾಜಿದ್ ತಂದೆ ಭಾರತೀಯ ಸೇನೆಯಲ್ಲಿ ನಿವೃತ್ತರಾಗಿದ್ದು 2009ರಲ್ಲಿ ನಿಧನರಾಗಿದ್ದರು. ಸಾಜಿದ್ ಸೋದರ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದಾರೆ. ಸಾಜಿದ್ ಮತ್ತು ಮಗ ಉಗ್ರವಾದಿಗಳ ಗುಂಪಿಗೆ ಸೇರಿದ ವಿಚಾರ ತಮಗೇನೂ ಗೊತ್ತಿಲ್ಲ ಎಂದಿದ್ದಾರೆ. ಇವರು ಐಸಿಸ್ ಸಿದ್ಧಾಂತಕ್ಕೆ ಒಳಪಟ್ಟು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ಬೀಚ್ ದಾಳಿಯಲ್ಲಿ ಗಾಯಗೊಂಡ 40 ಮಂದಿಯ ಪೈಕಿ ಮೂವರು ಭಾರತ ಮೂಲದ ವಿದ್ಯಾರ್ಥಿಗಳಿದ್ದಾರೆ. ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Telangana Police have confirmed that Sajid Akram, who was killed in the recent gun attack targeting Jews at Bondi Beach in Australia, was originally from Hyderabad. Akram had migrated to Australia nearly 27 years ago and was holding an Indian passport, officials said.
17-12-25 12:45 pm
Bangalore Correspondent
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
17-12-25 01:38 pm
HK News Desk
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm