ಬ್ರೇಕಿಂಗ್ ನ್ಯೂಸ್
18-04-21 09:09 pm Mangaluru correspondent ಕರಾವಳಿ
ಮಂಗಳೂರು, ಎ.18: ಗುಜರಾತ್ ನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು ಅಹ್ಮದಾಬಾದ್ ಮತ್ತು ಬರೋಡಾ ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ಆರು ಮಂದಿ ಕೆಥೋಲಿಕ್ ಚರ್ಚ್ ಪಾದ್ರಿಗಳು 30 ಗಂಟೆಗಳ ಅಂತರದಲ್ಲಿ ಕೋವಿಡ್ ಕಾರಣದಿಂದ ಸಾವು ಕಂಡಿದ್ದಾರೆ.
ಮಂಗಳೂರು ಮೂಲದ ಫಾ.ಜೆರ್ರಿ ಸಿಕ್ವೇರಾ, ಫಾ.ಜೇಸುರಾಜ್ ಅರ್ಪುತಮ್, ಫಾ. ಇರ್ವಿನ್ ಲಸರಾಡೊ, ಫಾ.ರಾಯಪ್ಪನ್, ಫಾ.ಜಾನ್ ಫಿಶರ್ ಮತ್ತು ಬರೋಡಾ ಡಯಾಸಿಸ್ ವ್ಯಾಪ್ತಿಯ ಫಾ. ಪೌಲ್ ರಾಜ್ ನೆಪೋಲಿಯನ್ ಸಾವನ್ನಪ್ಪಿದವರು.
ಫಾ.ಜೆರ್ರಿ ಸಿಕ್ವೇರಾ (73) ಕೆಥೋಲಿಕ್ ಸಮುದಾಯದಲ್ಲಿ ಪ್ರಮುಖರಾಗಿದ್ದು ಅಹ್ಮದಾಬಾದಿನ ಸೈಂಟ್ ಇಗ್ನೇಷಿಯಸ್ ಲೊಯೊಲಾ ಚರ್ಚ್ ನಲ್ಲಿ ಫಾದರ್ ಆಗಿದ್ದರು. ಅವರು ಕೊರೊನಾ ಸೋಂಕು ತಗಲಿ ಸೋಲಾ ಸಿವಿಲ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆಯಲ್ಲಿದ್ದು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಜೆರ್ರಿಯವರು ಗುಜರಾತಿನಲ್ಲಿ 42 ವರ್ಷಗಳಿಂದ ಫಾದರ್ ಆಗಿ ಸೇವೆ ಸಲ್ಲಿಸಿದ್ದಾರೆ. ಜೆರ್ರಿ ಮೂಲತಃ ಬಂಟ್ವಾಳ ತಾಲೂಕಿನ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಚರ್ಚ್ ಗೆ ಸೇರಿದವರು.
ಜೇಸುಟ್ ಆಗಿದ್ದ ಫಾ. ಜೇಸುರಾಜ್ ಅರ್ಪುತಮ್ (60) ಎ.16ರಂದು ಸಂಜೆ 5.25 ಗಂಟೆಗೆ ದಿಂಡಿಗಲ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರಿಗೂ ಕೋವಿಡ್ ಸೋಂಕು ದೃಢಪಟ್ಟಿತ್ತು.
ಮೂಲತಃ ಮಂಗಳೂರಿನವರಾದ ಫಾ. ಎರ್ವಿನ್ ಲಸರಾಡೊ(58) ಎ.17ರಂದು ರಾತ್ರಿ ವಡೋದರಾದ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾರೆ. ಅವರು 37 ವರ್ಷಗಳಿಂದ ಜೇಸುಟ್ ಹಾಗೂ 25 ವರ್ಷಗಳಿಂದ ಫಾದರ್ ಕೂಡ ಆಗಿದ್ದರು. 2013ರಲ್ಲಿ ಅವರಿಗೆ ಕ್ಯಾನ್ಸರ್ ಕಂಡುಬಂದು ಚೇತರಿಕೆ ಕಂಡಿದ್ದರು. ಇತ್ತೀಚೆಗೆ ಕೆಲವು ದಿನಗಳ ಹಿಂದೆ ಎರ್ವಿನ್ ಅವರಿಗೆ ನ್ಯೂಮೋನಿಯಾ ಆಗಿದ್ದಲ್ಲದೆ ಕೋವಿಡ್ ಪಾಸಿಟಿವ್ ಆಗಿತ್ತು. ಮಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದ ಎರ್ವಿನ್ ಬಳಿಕ ಮುಂಬೈಗೆ ಹೋಗಿ ನೆಲೆಸಿದ್ದರು.
ಫಾದರ್ ಜಾನ್ ಫಿಶರ್ ಕೂಡ ಕೋವಿಡ್ ಆಗಿ ಚೇತರಿಕೆ ಕಂಡಿದ್ದರು. ಆದರೆ ಎ.16 ರಂದು ಅವರಿಗೆ ಎರಡು ಬಾರಿ ಹಾರ್ಟ್ ಅಟ್ಯಾಕ್ ಆಗಿದ್ದು ರಾತ್ರಿ ವೇಳೆಗೆ ಮೂರನೇ ಬಾರಿ ಹೃದಯಾಘಾತ ಆಗಿ ಕೊನೆಯುಸಿರೆಳೆದಿದ್ದಾರೆ.
ಬರೋಡಾ ಧರ್ಮಪ್ರಾಂತ್ಯದ ಫಾ.ಪೌಲ್ ರಾಜ್ ನೆಪೋಲಿಯನ್ ಅವರಿಗೆ ಕೇವಲ 38 ವರ್ಷ ವಯಸ್ಸಾಗಿತ್ತು. ಐದು ವರ್ಷಗಳಿಂದ ಫಾದರ್ ಆಗಿ ಸೇವೆಯಲ್ಲಿದ್ದರು. ಕೋವಿಡ್ ಸೋಂಕಿನಿಂದಾಗಿ ವಲ್ಸಡ್ ನಲ್ಲಿ ಕಸ್ತೂರ್ಬಾ ಹಾಸ್ಪಿಟಲ್ ನಲ್ಲಿ ದಾಖಲಾಗಿದ್ದ ನೆಪೋಲಿಯನ್ ಎ.17ರಂದು ಬೆಳಗ್ಗೆ ಮೃತರಾಗಿದ್ದಾರೆ. ಮಂಗಳೂರು ಮತ್ತು ಬೆಂಗಳೂರು ಮೂಲದ ಆರು ಮಂದಿ ಪಾದ್ರಿಗಳ ಸಾವು ಕೆಥೋಲಿಕ್ ಸಮುದಾಯದಲ್ಲಿ ಆಘಾತದ ಅಲೆ ಸೃಷ್ಟಿಸಿದೆ.
In a press release by Ahmedabad catholic Diocese In just about thirty hours since last evening 16th April to 18th April Six Catholic Priests of Mangalore serving in Gujarat have died due to covid 19.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 12:51 pm
Mangalore Correspondent
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm