ಬ್ರೇಕಿಂಗ್ ನ್ಯೂಸ್
26-02-21 05:47 pm Mangalore Correspondent ಕರಾವಳಿ
ಮಂಗಳೂರು, ಫೆ.26: ಉಳ್ಳಾಲದ ಬಿಲ್ಲವ ವೇದಿಕೆಯವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬ್ರಹ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಬಿಲ್ಲವರಲ್ಲೇ ಒಡಕು ಮೂಡಿಸಿದೆ. ರಾಜಕೀಯ ಮುಖಂಡನೊಬ್ಬನನ್ನು ಬ್ರಹ್ಮಶ್ರೀ ಎನ್ನುವ ಪ್ರತಿಷ್ಠಿತ ಹೆಸರಿನ ಪ್ರಶಸ್ತಿಗೆ ಪರಿಗಣಿಸಿದ್ದರ ಹಿಂದೆ ಯಾವ ಮಾನದಂಡ ಇದೆ ಎಂದು ಜಾಲತಾಣದಲ್ಲಿ ತೀವ್ರ ಟೀಕೆ ಕೇಳಿಬಂದಿದೆ.
ಇತ್ತೀಚೆಗಷ್ಟೇ ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಬಿಲ್ಲವರು ಮತ್ತು ಕೋಟಿ ಚೆನ್ನಯರ ಬಗ್ಗೆ ಅವಹೇಳನ ಮಾಡಿದ್ದು, ಆ ಬಗ್ಗೆ ಬಿಲ್ಲವ ಸಮುದಾಯ ಕೆರಳಿ ಕೆಂಡವಾಗಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದೂ ಆಗಿತ್ತು. ಈ ವಿಚಾರದಲ್ಲಿ ಜಗದೀಶ ಅಧಿಕಾರಿಯನ್ನು ಬಿಜೆಪಿ ಪಕ್ಷದಿಂದಲೇ ಕಿತ್ತು ಹಾಕಬೇಕೆಂಬ ಆಗ್ರಹವೂ ಕೇಳಿಬಂದಿತ್ತು. ಆದರೆ, ಬಿಜೆಪಿ ಮುಖಂಡರಾಗಲೀ, ಪಕ್ಷದ ವತಿಯಿಂದಾಗಲೀ ಈ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ಇಂಥ ಸಂದರ್ಭದಲ್ಲಿಯೇ ಬಿಲ್ಲವರಲ್ಲದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನು ಬಿಲ್ಲವ ವೇದಿಕೆ ಕೊಡಮಾಡುವ ಪ್ರಶಸ್ತಿಗೆ ಪರಿಗಣಿಸಿದ್ದು ಬಿಲ್ಲವರಲ್ಲಿ ಅಸಮಾಧಾನ ಮೂಡಿಸಿದೆ.
ಈ ಬಗ್ಗೆ ನಮ್ಮ ಬಿಲ್ಲವರು ಅನ್ನುವ ಫೇಸ್ಬುಕ್ ಪೇಜಿನಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು, ಬಿಲ್ಲವರಿಗೆ ಯಾವುದೇ ಕೊಡುಗೆ ನೀಡದ ನಳಿನ್ ಕುಮಾರ್ ಹೆಸರನ್ನು ಆಯ್ಕೆ ಮಾಡಿದ ಉಳ್ಳಾಲದ ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ. ಸುವರ್ಣ ವಿರುದ್ಧ ಆಕ್ರೋಶ ತಿರುಗಿದೆ. ಕೆ.ಟಿ. ಸುವರ್ಣ ಅವರಿಗೆ ತಿಂಗಳ ಹಿಂದೆ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕ ಸ್ಥಾನ ಲಭಿಸಿತ್ತು. ನಳಿನ್ ಕುಮಾರ್ ಕಟೀಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆ.ಟಿ.ಸುವರ್ಣ ಅವರನ್ನು ಅದೇ ನೆಲೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ಇದೀಗ ಋಣ ಸಂದಾಯವೋ ಏನೋ ಎಂಬಂತೆ ಕೆ.ಟಿ.ಸುವರ್ಣ, ನಳಿನ್ ಕುಮಾರ್ ಅವರನ್ನು ತಾವು ಅಧ್ಯಕ್ಷರಾಗಿರುವ ಬಿಲ್ಲವ ವೇದಿಕೆಯಿಂದ ಕೊಡುವ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ಈ ಪರಿ ಬಕೆಟ್ ಹಿಡಿಯಬಾರದಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಬಿಲ್ಲವರ ಅವಹೇಳನ ಮಾಡಿದ ಜಗದೀಶ ಅಧಿಕಾರಿಯ ಹೇಳಿಕೆ ಬಗ್ಗೆ ಸೊಲ್ಲೆತ್ತದ ನಾಯಕನಿಗೆ ಬಿಲ್ಲವರಿಂದಲೇ ಪ್ರಶಸ್ತಿಯೇ ? ಬಿಲ್ಲವ ನಾಯಕರನ್ನು ತುಳಿದಂತಹ ವ್ಯಕ್ತಿಗೆ ಈ ರೀತಿಯ ಗೌರವವೇ ? ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಲು ಸಾಧ್ಯವಾಗಿಲ್ಲ. ಬಿಲ್ಲವ ಈಡಿಗ ಅಭಿವೃದ್ಧಿ ನಿಗಮ ಮಾಡಲು ಸಾಧ್ಯವಾಗಿಲ್ಲ. ಜಿಲ್ಲೆಯ ಬಿಲ್ಲವರ ಬಗ್ಗೆ ಅಭಿವೃದ್ಧಿಗೆ ಯಾವೊಂದು ಕೊಡುಗೆಯನ್ನೂ ನೀಡದ ವ್ಯಕ್ತಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಲ್ಲಿ ಪ್ರಶಸ್ತಿ ನೀಡುವುದೇ ಎಂದು ನಳಿನ್ ಕುಮಾರ್ ವಿರುದ್ಧ ಖಂಡ ತುಂಡವಾಗಿ ಟೀಕಿಸಿ ಬರೆಯಲಾಗಿದೆ.
ಈ ಹಿಂದೆ ಉಳ್ಳಾಲದ ಬಿಲ್ಲವ ವೇದಿಕೆಯಿಂದ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನಚಂದ್ರ ಡಿ ಸುವರ್ಣ ,ನವೀನ್ ಡಿ ಪಡೀಲ್,ಖ್ಯಾತ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರಿಗೆ ಬ್ರಹ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಇವರು ಮೂವರು ಬಿಲ್ಲವರೇ ಆಗಿದ್ದು, ಈ ಬಾರಿ ಮಾತ್ರ ರಾಜಕೀಯ ನಾಯಕನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಬಿಲ್ಲವರಲ್ಲಿ ಒಡಕು ಮೂಡಿಸಿದೆ. ಜಗದೀಶ ಅಧಿಕಾರಿಯ ಪ್ರಕರಣದ ಬಳಿಕ ನಳಿನ್ ಕುಮಾರ್ ಮತ್ತು ಬಿಜೆಪಿಯ ಜಿಲ್ಲೆಯ ನಾಯಕರ ಬಗ್ಗೆ ಬಿಲ್ಲವರಲ್ಲೇ ಅಸಮಾಧಾನ ಮೂಡಿದ್ದು ಇಂಥ ಸಂದರ್ಭದಲ್ಲೇ ಬಿಲ್ಲವರ ಪ್ರಶಸ್ತಿಗೆ ನಳಿನ್ ಹೆಸರನ್ನು ಆಯ್ಕೆ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿಯ ಪ್ರಶಸ್ತಿಗಳಿಗೆ ರಾಜಕೀಯ ರಹಿತ ಸಾಧಕ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕೆಂದು ಕೆಲವರು ಸಲಹೆಯನ್ನೂ ಮಾಡಿದ್ದಾರೆ.
ಅಂದಹಾಗೆ, ಈ ಪ್ರಶಸ್ತಿಯನ್ನು ಫೆ.28ರಂದು ತೊಕ್ಕೊಟ್ಟು ಕಾಪಿಕಾಡಿನ ಗಟ್ಟಿ ಸಮಾಜ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲು ಬಿಲ್ಲವ ವೇದಿಕೆ ಈಗಾಗ್ಲೇ ನಿರ್ಧಾರ ಮಾಡಿದೆ.
ಸಂಸದ ನಳಿನ್ ಕುಮಾರ್ ಕಟೀಲ್ ಗೆ ಬಿಲ್ಲವ ವೇದಿಕೆಯಿಂದ "ಬ್ರಹ್ಮಶ್ರೀ" ಪ್ರಶಸ್ತಿ
The Mangalore Billava community people are now opposing Brahmashree Award that has been conferred to Naleen Kumar Kateel.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm