ಬ್ರೇಕಿಂಗ್ ನ್ಯೂಸ್

Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ     |    ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ    |    Mahesh Shetty Timarodi, Arms, FIR: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಮತ್ತೊಂದು ಎಫ್ಐಆರ್, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು    |   

ಪುತ್ತೂರು ; ಕುಡಿದ ಅಮಲಿನಲ್ಲಿ ತಂದೆಯನ್ನೇ ಕೊಲೆಗೈದ ಮಗ ! 

18-08-20 12:47 pm       Mangalore Reporter   ಕರಾವಳಿ

ಮಗನೇ ತಂದೆಯನ್ನು ಕಡಿದು ಕೊಲೆಗೈದ ಪೈಶಾಚಿಕ ಕೃತ್ಯ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ತಿಂಗಳಾಡಿ ಗ್ರಾಮದ ಬಾಲಯ ಎಂಬಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.

ಪುತ್ತೂರು, ಆಗಸ್ಟ್ 18: ಕುಡಿತದ ಅಮಲಿನಲ್ಲಿ ಮಗನೇ ತಂದೆಯನ್ನು ಕಡಿದು ಕೊಲೆಗೈದ ಪೈಶಾಚಿಕ ಕೃತ್ಯ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಕುಡಿತದ ಅಮಲು ತಲೆಗೇರಿ ತಂದೆ ಹಾಗೂ ಮಗ ಹೊಡೆದಾಡಿದ್ದು, ಈ ಸಂದರ್ಭ ಮಗ ತನ್ನ ಕೈಗೆ ಸಿಕ್ಕಿದ ಕತ್ತಿಯಿಂದ ತಂದೆಯ ಮೇಲೆ ಕಡಿದಿದ್ದು, ತಂದೆ ಆಸ್ಪತ್ರೆಗೆ ಸಾಗಿಸುವ ವೇಳೆಯೇ ಮೃತಪಟ್ಟಿದ್ದಾರೆ. 

ಪುತ್ತೂರು ತಾಲೂಕಿನ ತಿಂಗಳಾಡಿ ಗ್ರಾಮದ ಬಾಲಯ ಎಂಬಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. 68 ವರ್ಷದ ಗಂಗಾಧರ ನಾಯ್ಕ ಕೊಲೆಯಾದವರಾಗಿದ್ದು ಪುತ್ರ ಶಶಿಧರ್ ನಾಯ್ಕ್ ಹತ್ಯೆಗೈದ ಆರೋಪಿಯಾಗಿದ್ದಾನೆ. 

ಅತ್ಯಂತ ಸ್ಥಿತಿವಂತ ಕುಟುಂಬವಾಗಿರುವ ಶಶಿಧರ್ ನಾಯ್ಕ್ ಹಾಗೂ ಆತನ ತಂದೆ ಗಂಗಾಧರ್ ನಾಯ್ಕ್ ತಿಂಗಳಾಡಿಯ ಬಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಕುಟುಂಬಕ್ಕೆ ಪುತ್ತೂರು ನಗರದ ಕೃಷ್ಣನಗರ ಎಂಬಲ್ಲಿಯೂ ಒಂದು ಮನೆಯಿದೆ. ಸ್ಥಿತಿವಂತ ಕುಟುಂಬದ ಮಗನಾದ ಶಶಿಧರ್ ನಾಯ್ಕ್ ಗೆ ಕುಡಿತದ ಜೊತೆಗೆ ಗಾಂಜಾದ ಚಟ ಇತ್ತೆಂದು ಸ್ಥಳೀಯರು ತಿಳಿಸಿದ್ದಾರೆ.

ನಿನ್ನೆ ಎಂದಿನಂತೆ ಕುಡಿದು ಮನೆಗೆ ಬಂದಿದ್ದ ಶಶಿಧರ್ ಕ್ಷುಲ್ಲಕ ವಿಚಾರಕ್ಕೆ ತಂದೆಯ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ತಂದೆ ಹಾಗೂ ಮಗನ ನಡುವೆ ತಳ್ಳಾಟ ನಡೆದಿದೆ. ರೊಚ್ಚಿಗೆದ್ದ ಶಶಿಧರ್ ನಾಯ್ಕ್ ಮನೆಯಲ್ಲೇ ಇದ್ದ ಕತ್ತಿಯಿಂದ ತಂದೆ ಗಂಗಾಧರ್ ನಾಯ್ಕ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾನೆ. ಗಂಗಾಧರ್ ನಾಯ್ಕ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.