ಬ್ರೇಕಿಂಗ್ ನ್ಯೂಸ್
08-02-21 09:19 pm Mangaluru Correspondent ಕರಾವಳಿ
ಮಂಗಳೂರು, ಫೆ.8: ಕಳೆದ ಎರಡು ತಿಂಗಳಲ್ಲಿ ಬ್ಯಾಂಕ್ ಖಾತೆಗಳಿಂದ ತಮಗೆ ಗೊತ್ತೇ ಆಗದ ರೀತಿ ಹಣ ನಾಪತ್ತೆಯಾಗಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಬಹಳಷ್ಟು ಪ್ರಕರಣ ಮಂಗಳೂರಿನ ಸೈಬರ್ ಠಾಣೆಯಲ್ಲಿ ದಾಖಲಾಗಿದ್ದವು. ಆದರೆ, ಯಾವೊಂದು ಪ್ರಕರಣ ಕೂಡ ಟ್ರೇಸ್ ಆಗಿರಲಿಲ್ಲ. ಪ್ರಕರಣದ ಬೆನ್ನು ಹತ್ತಿದ ಸೈಬರ್ ಪೊಲೀಸರು ಮಂಗಳೂರಿನಲ್ಲಿ ಮೂರು ಎಟಿಎಂಗಳಿಗೆ ಹ್ಯಾಕರ್ಸ್ ಕಣ್ಣು ಹಾಕಿದ್ದನ್ನು ಪತ್ತೆ ಮಾಡಿದ್ದಾರೆ.
ಹಿಂದೆಲ್ಲಾ ಈ ಸೈಬರ್ ಕಳ್ಳರು ಎಲ್ಲೋ ಕುಳಿತು ಗ್ರಾಹಕರ ಬ್ಯಾಂಕ್ ಖಾತೆ ಮಾಹಿತಿ ಪಡೆದು, ಹಣ ಪೀಕಿಸುತ್ತಿದ್ದರು. ಆದರೆ, ಈಗ ಹ್ಯಾಕರ್ಸ್ ಮಂಗಳೂರಿನಂಥ ಸುಶಿಕ್ಷಿತ ನಗರಕ್ಕೇ ನುಗ್ಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮಂಗಳೂರು ನಗರದ ನಾಗುರಿಯ ಕೆನರಾ ಬ್ಯಾಂಕ್ ಎಟಿಎಂ, ಚಿಲಿಂಬಿಯ ಕೆನರಾ ಬ್ಯಾಂಕ್ ಎಟಿಎಂ ಮತ್ತು ಸುರತ್ಕಲ್ ಬಳಿಯ ಕುಳಾಯಿನಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂಗಳನ್ನು ಸ್ಕಿಮ್ಮಿಂಗ್ ಮಾಡುವ ಮೂಲಕ ಅಲ್ಲಿನ ಎಟಿಎಂ ಗ್ರಾಹಕರ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಕದ್ದಿರುವ ಮಹತ್ವದ ವಿಚಾರವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಮಂಗಳೂರಿನ ಕುಳಾಯಿ, ಚಿಲಿಂಬಿ ಮತ್ತು ನಾಗುರಿ ಆಸುಪಾಸಿನ ನಾಗರಿಕರ ಬ್ಯಾಂಕ್ ಖಾತೆಗಳಿಂದ ತನ್ನಿಂತಾನೇ ಹಣ ನಾಪತ್ತೆಯಾಗಿದ್ದು ಕಂಡುಬಂದಿತ್ತು. ಡಿಸೆಂಬರ್ 10ರಿಂದ ಜನವರಿ 31ರ ವರೆಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಈ ರೀತಿಯ 22 ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದ್ದವು. ಇದಲ್ಲದೆ, 48 ಮಂದಿಯ ಎನ್ ಸಿ ಕೇಸುಗಳು ದಾಖಲಾಗಿದ್ದವು. 20 ಸಾವಿರಕ್ಕಿಂತ ಹೆಚ್ಚು ಹಣ ಕಳಕೊಂಡವರದ್ದು ಎಫ್ಐಆರ್ ದಾಖಲು ಮಾಡಿದ್ದರೆ, ಅದಕ್ಕಿಂತ ಕಡಿಮೆ ಹಣ ಕಳಕೊಂಡ ಪ್ರಕರಣಗಳಲ್ಲಿ ಎನ್ ಸಿ ಪ್ರಕರಣ ದಾಖಲಾಗಿದ್ದವು.
ಸರದಿಯಂತೆ, ಪ್ರಕರಣ ದಾಖಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ಮೂರು ಎಟಿಎಂಗಳಲ್ಲಿ ಸೆಕ್ಯುರಿಟಿ ಗಾರ್ಡ್ ಇಲ್ಲದಿರುವುದು ಮತ್ತು ಒಂದೇ ರೀತಿಯ ವ್ಯಕ್ತಿಯೊಬ್ಬ ರಾತ್ರಿ ವೇಳೆ ಬಂದು ಎಟಿಎಂ ಬಳಕೆ ಮಾಡುತ್ತಿದ್ದುದನ್ನು ಪತ್ತೆ ಮಾಡಿದ್ದಾರೆ. ಹೀಗಾಗಿ ನ.25ರಿಂದ ಡಿ.3ರ ಅವಧಿಯಲ್ಲಿ ಹ್ಯಾಕರ್ ಬಂದು ಎಟಿಎಂ ಮೆಷಿನಲ್ಲಿ ಡಾಟಾ ಕದಿಯುವ ಉಪಕರಣ ಇಟ್ಟಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಒಂದು ವಾರದ ಅವಧಿಯಲ್ಲಿ ಈ ಮೂರು ಎಟಿಎಂಗಳನ್ನು ಬಳಕೆ ಮಾಡಿದ್ದ ಗ್ರಾಹಕರ ಮಾಹಿತಿಗಳನ್ನು ಹ್ಯಾಕರ್ಸ್ ಸಂಗ್ರಹಿಸಿದ್ದು, ಆಬಳಿಕ ಡುಪ್ಲಿಕೇಟ್ ಎಟಿಎಂ ಕಾರ್ಡ್ ಗಳನ್ನು ಮಾಡಿಸಿ ಹಣ ತೆಗೆದಿದ್ದಾರೆ. ಬೆಂಗಳೂರು, ಮಡಿಕೇರಿ, ಕಾಸರಗೋಡು, ಪಣಜಿ, ದೆಹಲಿ ಹೀಗೆ ಹಲವು ಕಡೆಗಳಲ್ಲಿ ನಕಲಿ ಕಾರ್ಡ್ ಬಳಸಿ ಎಟಿಎಂನಿಂದ ಹಣ ಪಡೆದಿರುವುದನ್ನು ತನಿಖೆಯಲ್ಲಿ ಪತ್ತೆ ಮಾಡಲಾಗಿದೆ. ಡಿ.10ರಂದು ಮೊದಲ ಬಾರಿ, ತನ್ನಿಂತಾನೇ ಹಣ ನಾಪತ್ತೆಯಾಗಿರುವ ಬಗ್ಗೆ ಕುಳಾಯಿ ನಿವಾಸಿಯೊಬ್ಬರು ದೂರು ದಾಖಲಿಸಿದ್ದರು. ಬಳಿಕ ಸರದಿಯಂತೆ ದೂರು ದಾಖಲಾಗಿದ್ದು, ಈಗಲೂ ಹಣ ಕಳಕೊಂಡವರು ಬ್ಯಾಂಕಿಗೆ ದೂರು ಹೇಳಿಕೊಂಡು ಬರುತ್ತಿದ್ದಾರೆ.
ಈ ಮೂರು ಎಟಿಎಂಗಳ ಬಗ್ಗೆ ಸಂಶಯ ಕಂಡುಬರುತ್ತಿದ್ದಂತೆ ಆಯಾ ಬ್ಯಾಂಕ್ ಶಾಖೆಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಅಲ್ಲದೆ, ಎಟಿಎಂ ಬಳಸಿದ್ದ ಗ್ರಾಹಕರ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡುವಂತೆ ಸೂಚಿಸಿದ್ದಾರೆ. ಆದರೆ, ಕೆಲವರು ತಮ್ಮ ಖಾತೆಗಳಿಂದ ಹಣ ಕಳಕೊಂಡ ವಿಚಾರವನ್ನು ಇನ್ನೂ ತಿಳಿಯದವರಿದ್ದಾರೆ. ವಯಸ್ಸಾದವರು ಬ್ಯಾಂಕ್ ಸಂದೇಶ ಮೊಬೈಲಿಗೆ ಬರುತ್ತಿದ್ದರೂ, ಅದನ್ನು ಗಮನಿಸಿರುವುದಿಲ್ಲ. ಪಡೀಲಿನ ಗ್ರಾಹಕರೊಬ್ಬರು ಡಿಸೆಂಬರ್, ಜನವರಿ ತಿಂಗಳಲ್ಲಿ ಮೊಬೈಲ್ ಮತ್ತು ಎಟಿಎಂ ಬಳಕೆ ಮಾಡಿರಲಿಲ್ಲ. ಜನವರಿ ಕೊನೆಗೆ ಬ್ಯಾಂಕಿಗೆ ಹೋದಾಗ 2.84 ಲಕ್ಷ ರೂಪಾಯಿ ಕಳಕೊಂಡಿದ್ದು ಗಮನಕ್ಕೆ ಬಂದಿತ್ತು. ಕೂಡಲೇ ಪೊಲೀಸರಿಗೆ ದೂರು ನೀಡಿದ್ದು, ಅಲ್ಲಿ ಎಟಿಎಂ ಸ್ಕಿಮ್ಮಿಂಗ್ ವಿಚಾರವನ್ನು ಹೇಳಿದ್ದಾರೆ.
ಎಟಿಎಂ Skimming ಅಂದರೇನು ?
ಸಾಮಾನ್ಯವಾಗಿ ಸೆಕ್ಯುರಿಟಿ ಗಾರ್ಡ್ ಇಲ್ಲದ ಎಟಿಎಂಗಳಿಗೆ ರಾತ್ರಿ ವೇಳೆ ನುಗ್ಗುವ ಹ್ಯಾಕರ್ಸ್, ಅಲ್ಲಿ ಸೂಕ್ಷ್ಮ ಉಪಕರಣ ಫಿಕ್ಸ್ ಮಾಡುತ್ತಾರೆ. ನಾವು ಕಾರ್ಡ್ ಹಾಕುವಲ್ಲಿ ಈ ಡಿವೈಸ್ ಇದ್ದು ಕಾರ್ಡ್ ತುರುಕಿಸಿದ ಕೂಡಲೇ ಅದರಲ್ಲಿನ ಮಾಹಿತಿ ಉಪಕರಣಕ್ಕೆ ರವಾನೆಯಾಗುತ್ತದೆ. ಇದೇ ವೇಳೆ, ನಿಗೂಢ ಜಾಗದಲ್ಲಿ ಮತ್ತೊಂದು ಕ್ಯಾಮರಾವನ್ನೂ ಹ್ಯಾಕರ್ಸ್ ಇಡುತ್ತಿದ್ದು, ಎಟಿಎಂ ನಂಬರ್ ಒತ್ತುವುದನ್ನು ಅದು ಸೆರೆ ಹಿಡಿಯುತ್ತದೆ. ಎಟಿಎಂ ಕಾರ್ಡ್ ಮಾಹಿತಿ ಮತ್ತು ಅದರ ಪಿನ್ ನಂಬರ್ ಎರಡನ್ನೂ ಪಡೆಯುವ ಹ್ಯಾಕರ್ಸ್, ಡುಪ್ಲಿಕೇಟ್ ಕಾರ್ಡ್ ಮಾಡಿಸಿ, ಹಣ ತೆಗೆಯುತ್ತಾರೆ. ಈ ವಿಧಾನಕ್ಕೆ ಸೈಬರ್ ಭಾಷೆಯಲ್ಲಿ ಎಟಿಎಂ ಸ್ಕಿಮ್ಮಿಂಗ್ ಎನ್ನಲಾಗುತ್ತದೆ.
ಹ್ಯಾಕರ್ ಇಡುವ ಉಪಕರಣ, ಎಟಿಎಂ ಕಾರ್ಡ್ ನಲ್ಲಿರುವ ಮೈಕ್ರೋ ಚಿಪ್ ನಿಂದ ಮಾಹಿತಿಗಳನ್ನು ಪಡೆಯುತ್ತದೆ. ಪ್ರತೀ ಎಟಿಎಂ ಮೆಷಿನ್ ಜೊತೆಗೆ ಒಬ್ಬ ಸೆಕ್ಯುರಿಟಿ ಗಾರ್ಡ್ ಇರಬೇಕೆಂದು ಸರಕಾರದ ಗೈಡ್ ಲೈನ್ಸ್ ಇದೆ. ಆದರೆ, ಬ್ಯಾಂಕ್ ಸಿಬಂದಿಯ ನಿರ್ಲಕ್ಷ್ಯದಿಂದಾಗಿ ಕೆಲವು ಎಟಿಎಂ ಕೇಂದ್ರಗಳಲ್ಲಿ ಸೆಕ್ಯುರಿಟಿ ಇರುವುದಿಲ್ಲ. ಸೆಕ್ಯುರಿಟಿ ಗಾರ್ಡ್ ಮತ್ತು ಗ್ರಾಹಕರು ಎಟಿಎಂ ಬಳಕೆ ವೇಳೆ ಎಲರ್ಟ್ ಆಗಿರಬೇಕು. ಎಟಿಎಂ ಕಾರ್ಡ್ ಡಾಟಾ ಕದ್ದರೂ, ಪಿನ್ ಕದಿಯಲು ಸುಲಭ ಇಲ್ಲ. ಕ್ಯಾಮರಾಗೆ ಕಾಣದಂತೆ ಪಿನ್ ಒತ್ತುವುದನ್ನು ಜನರು ರೂಢಿ ಮಾಡಬೇಕು ಎನ್ನುತ್ತಾರೆ, ಸೈಬರ್ ತಂತ್ರಜ್ಞಾನದ ಎಕ್ಸ್ ಪರ್ಟ್ ಆಗಿರುವ ಡಾ.ಅನಂತ ಪ್ರಭು.
ಆರೋಪಿ ಪತ್ತೆ ಮಾಡುವುದು ಕಷ್ಟ
ಆರೋಪಿಗಳು ಎಟಿಎಂ ಬಳಕೆ ಮಾಡಿದ್ದು, ಮಂಗಳೂರಿನಲ್ಲಿ ಸ್ಕಿಮ್ಮಿಂಗ್ ಉಪಕರಣ ಇಟ್ಟಿದ್ದು, ಬೆಂಗಳೂರು, ಗೋವಾಗಳಲ್ಲಿ ಹಣ ಕದ್ದಿದ್ದು ಆಯಾ ಎಟಿಎಂಗಳ ಸಿಸಿಟಿವಿಗಳಲ್ಲಿ ದಾಖಲಾಗಿದೆ. ಆದರೆ, ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ಅವರನ್ನು ಪತ್ತೆ ಮಾಡುವುದು ಸಾಧ್ಯವಾಗುವುದಿಲ್ಲ. ಎಟಿಎಂ ಕೇಂದ್ರದ ಬಳಿ ಬರುವಾಗಲೂ ದೂರದಲ್ಲಿ ವಾಹನ ಇಟ್ಟು ಬರುವುದರಿಂದ ಆರೋಪಿಯ ಮೊಬೈಲ್ ನಂಬರ್ ಅಥವಾ ಚಹರೆ ಸರಿಯಾಗಿ ದಾಖಲಾಗದ ಹೊರತು ಪತ್ತೆ ಮಾಡುವುದು ಕಷ್ಟ ಎನ್ನುತ್ತಾರೆ, ಪೊಲೀಸರು.
ನ.25ರಿಂದ ಡಿ.3ರ ಅವಧಿಯಲ್ಲಿ ಈ ಮೂರು ಎಟಿಎಂ ಕೇಂದ್ರಗಳನ್ನು ಯಾರೆಲ್ಲಾ ಬಳಕೆ ಮಾಡಿರುತ್ತಾರೋ ಅವರ ಬ್ಯಾಂಕ್ ಖಾತೆಗಳ ಮಾಹಿತಿ ಕಳವಾಗಿರುತ್ತವೆ. ಆದರೆ, ಎಷ್ಟೋ ಮಂದಿ ದೂರಕ್ಕೆ ಪ್ರಯಾಣಿಸುವವರು ಅಥವಾ ಮಂಗಳೂರು ಹೊರತಾದವರು ತಮ್ಮ ಹಣ ಕಳಕೊಂಡ ವೇಳೆ ಮಂಗಳೂರಿನಲ್ಲಿ ದೂರು ನೀಡಿರಲ್ಲ. ಕೆಲವರು ಹಣ ಹೋಗಿದ್ದು ಅರಿವಾದ ಕೂಡಲೇ ಬ್ಯಾಂಕಿಗೆ ತಿಳಿಸಿ, ಅಕೌಂಟ್ ಸೀಝ್ ಮಾಡಿಸುತ್ತಾರೆ. ಹೀಗಾಗಿ ನೂರಾರು ಮಂದಿ ಈ ರೀತಿ ಹಣ ಕಳಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚಿಲಿಂಬಿಯಲ್ಲಿ ಇದು ಎರಡನೇ ಬಾರಿ !
ಚಿಲಿಂಬಿಯ ಕೆನರಾ ಬ್ಯಾಂಕಿನ ಇದೇ ಎಟಿಎಂ ಕೇಂದ್ರದಲ್ಲಿ 2018ರಲ್ಲಿಯೂ ಇದೇ ರೀತಿ ಸ್ಕಿಮ್ಮಿಂಗ್ ಆಗಿತ್ತು. ಪ್ರಕರಣ ದಾಖಲಾದ ಸಂದರ್ಭದಲ್ಲಿ ಬ್ಯಾಂಕಿಗೆ ಮಾಹಿತಿ ನೀಡಲಾಗಿತ್ತು. ಈ ಬಾರಿ ಎರಡನೇ ಬಾರಿ ಅದೇ ಎಟಿಎಂನಲ್ಲಿ ಸ್ಕಿಮ್ಮಿಂಗ್ ಪ್ರಕರಣ ಆಗಿದೆ. ಅಲ್ಲಿ ಸೆಕ್ಯುರಿಟಿ ಗಾರ್ಡ್ ನೇಮಿಸುವ ಕೆಲಸ ಆಗಿಲ್ಲ ಎನ್ನುತ್ತಾರೆ, ಪೊಲೀಸರು.
ಕಳವಾದ ಹಣಕ್ಕೆ ಬ್ಯಾಂಕ್ ಹೊಣೆ !
ಬ್ಯಾಂಕಿನಿಂದ ಈ ರೀತಿಯಲ್ಲಿ ಹಣ ಕಳವಾದರೆ ಅದಕ್ಕೆ ಬ್ಯಾಂಕ್ ಹೊಣೆಯಾಗುತ್ತದೆ. ಎಟಿಎಂ ಹ್ಯಾಕ್ ಆಗಿ ಅಥವಾ ಸ್ಕಿಮ್ಮಿಂಗ್ ಆಗಿ ಗ್ರಾಹಕರು ಹಣ ಕಳಕೊಂಡರೆ, ಅಂಥವರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ರಿಜಿಸ್ಟರ್ ಮಾಡಿದರೆ ಬ್ಯಾಂಕ್ ಗ್ರಾಹಕರಿಗೆ ಕಳವಾದ ಮೊತ್ತವನ್ನು ನೀಡಬೇಕಾಗುತ್ತದೆ. ಎಟಿಎಂ ಕೇಂದ್ರಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಈ ರೀತಿ ಹ್ಯಾಕ್ ಆಗುವುದರಿಂದ ಅದಕ್ಕೆ ಆಯಾ ಬ್ಯಾಂಕ್ ಜವಾಬ್ದಾರಿ ಆಗಿರುತ್ತದೆ. ಹಣ ಕಳಕೊಂಡ ಗ್ರಾಹಕರಿಗೆ ಕೇಸು ದಾಖಲಾಗಿ 60 ದಿನಗಳ ಒಳಗೆ ಸದ್ರಿ ಹಣವನ್ನು ಮರಳಿಸಬೇಕಾಗುತ್ತದೆ.
ATM Skimming cyber crime has been exposed by Headline Karnataka in Mangalore. Lakhs of rupees has been withdraw from several accounts using ATMS which has no securities
04-04-25 12:00 pm
Bangalore Correspondent
MLC Vishwanath, Siddaramaiah: ಫ್ರೀ ಬಸ್ ಕೊಟ್ಟ...
04-04-25 10:28 am
Mandya Mysuru Bangalore Accident, KSRTC, Car:...
03-04-25 09:44 pm
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
04-04-25 12:44 pm
HK News Desk
Mangalore MP Brijesh Chowta: ನಿವೃತ್ತ ಸೈನಿಕರ ಅ...
03-04-25 11:10 pm
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
04-04-25 01:39 pm
Mangalore Correspondent
Mangalore Police, Inspector Balakrishna: ಪ್ರಕ...
03-04-25 10:14 pm
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
04-04-25 03:03 pm
Mangalore Correspondent
Kalaburagi Murder, Three killed: ಕೌಟುಂಬಿಕ ಕಲಹ...
03-04-25 05:01 pm
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm