ಬ್ರೇಕಿಂಗ್ ನ್ಯೂಸ್
22-12-25 10:30 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.22 : ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಬೆಂಗಳೂರಿನ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾಗರಾಜ್ ಅವರನ್ನು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ಪಿಎಸ್ಐ ನಾಗರಾಜ್ ಕ್ರಿಮಿನಲ್ ಹಿನ್ನೆಲೆಯುಳ್ಳ 'ದಾಸ' ಎಂಬ ವ್ಯಕ್ತಿಯ ಮನೆಯಲ್ಲಿ ನಡೆದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಕೇಕ್ ಕತ್ತರಿಸಿ, ಪಿಎಸ್ಐ ಸನ್ಮಾನ ಸ್ವೀಕರಿಸಿದ್ದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಕ್ರಮ ಜರುಗಿಸಿದ್ದಾರೆ.
ದಾಸ ಎಂಬಾತನ ಮೇಲೆ ರಾಜಾನುಕುಂಟೆ, ಚಿಕ್ಕಜಾಲ ಮತ್ತು ಯಲಹಂಕ ನ್ಯೂಟೌನ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಭೂಹಗರಣ, ಹಲ್ಲೆ ಮತ್ತು ಜೀವ ಬೆದರಿಕೆಯಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ. ಆತನ ಹುಟ್ಟಿದ ಹಬ್ಬದ ಕಾರ್ಯಕ್ರಮ ವಿಚಾರ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ನಗರ ಪೊಲೀಸ್ ಆಯುಕ್ತ ಸೀಮಾಂತ್ ಸಿಂಗ್ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ತನಿಖಾ ವರದಿಯಲ್ಲಿ ಪಿಎಸ್ಐ ನಾಗರಾಜ್ ಭೂಮಾಫಿಯಾ ಮತ್ತು ರೌಡಿ ಚಟುವಟಿಕೆಗಳಲ್ಲಿ ತೊಡಗಿರುವವರೊಂದಿಗೆ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಇಂತಹ ವ್ಯಕ್ತಿಗಳೊಂದಿಗೆ ಗುರುತಿಸಿಕೊಂಡರೆ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತದೆ. ಜನರು ಮುಕ್ತವಾಗಿ ಮತ್ತು ನಂಬಿಕೆಯಿಂದ ಪೊಲೀಸ್ ಠಾಣೆಗೆ ಬರಲು ಸಾಧ್ಯವಾಗುವುದಿಲ್ಲ. ಇದು ಇಲಾಖೆಯ ಶಿಸ್ತಿಗೆ ವಿರೋಧವಾದ ನಡವಳಿಕೆಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ
Yelahanka New Town Police Station Sub-Inspector Nagraj has been suspended after a video surfaced showing him attending the birthday celebration of a person with a criminal background. The suspension order was issued by Bengaluru Police Commissioner Seemant Kumar Singh.
15-04-26 07:05 pm
HK News Staffer
ಸಿಎಂ ಕಾರ್ಯದರ್ಶಿ ನಸೀರ್ ಅಹ್ಮದ್ ವಜಾ ಬೆನ್ನಲ್ಲೇ ಪರ...
15-04-26 03:15 pm
ದಾವಣಗೆರೆ ಗದ್ದಲಕ್ಕೆ ಮತ್ತೊಂದು ತಲೆದಂಡ ; ಸಿಎಂ ರಾಜ...
14-04-26 02:04 pm
ಸುಳ್ಯದಲ್ಲಿ ಪಾಳು ಬಾವಿಗೆ ಬಿದ್ದ ಕಾಡಾನೆ; ಅಡ್ಡಲಾಗಿ...
13-04-26 09:49 pm
ಕುಂದಾಪುರದ 111 ವರ್ಷಗಳ ಸರ್ಕಾರಿ ಶಾಲೆಗೆ ಬಂತು ಎಐ ರ...
13-04-26 08:19 pm
15-04-26 01:18 pm
HK News Staffer
ಅಮೆರಿಕ - ಇಸ್ರೇಲ್ ದಾಳಿಗೆ ಅವಕಾಶ ; ಗಲ್ಫ್ ರಾಷ್ಟ್ರ...
14-04-26 10:48 pm
ಕ್ಯಾಥೋಲಿಕ್ ಪೋಪ್ ಲಿಯೋ ಒಬ್ಬ ದುರ್ಬಲ ವ್ಯಕ್ತಿ, ರಾಜ...
14-04-26 01:46 pm
ಟಿಸಿಎಸ್ ಕಂಪನಿಯಲ್ಲಿ ಹೈಫೈ ಜಿಹಾದ್; ಸೆಕ್ಸ್ ದಂಧೆ,...
13-04-26 10:35 pm
ಬಾಂಗ್ಲಾದಲ್ಲಿ ಮುಸ್ಲಿಂ ಯುವಕರಿಂದಲೇ ಇಬ್ಬರು ಧರ್ಮಗು...
13-04-26 09:07 pm
13-04-26 11:39 pm
Mangalore Correspondent
ಮದುವೆ ಸಮಾರಂಭಕ್ಕೆ ಬಂದಿದ್ದ ವಾಹನಗಳು ಹೆದ್ದಾರಿಯಲ್ಲ...
13-04-26 12:53 pm
Mangalore Live Accident Nantoor: ಓವರ್ ಸ್ಪೀಡ್...
12-04-26 09:05 pm
ಬಂಟ್ವಾಳ ; ಮದರಂಗಿ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ...
11-04-26 05:05 pm
Fr Melvin J Pinto Death: ಸೈಂಟ್ ಅಲೋಶಿಯಸ್ ಶಿಕ್ಷ...
10-04-26 10:12 pm
15-04-26 05:29 pm
HK News Staffer
ಚಿಕ್ಕೋಡಿಯಲ್ಲಿ ಮಾನಗೇಡಿ ಹತ್ಯೆ; ಪತಿಯನ್ನು ಬಿಟ್ಟು...
15-04-26 05:03 pm
ಕೌಟುಂಬಿಕ ಕಲಹ ; 14 ವರ್ಷದ ಮಗಳನ್ನು ಉಸಿರುಗಟ್ಟಿಸಿ...
14-04-26 11:16 pm
ಆರಿಫ್ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ,...
14-04-26 11:52 am
ನಂತೂರು ಭೀಕರ ಅಪಘಾತ ; ಬೈಕ್ ಸವಾರನ ಧಾವಂತಕ್ಕೆ ರಸ್ತ...
14-04-26 11:14 am