ಅಧಿಕಾರ ಹಂಚಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ, ನಮ್ಮದೇನೂ ಇಲ್ಲ ; ಖರ್ಗೆ ಮಾತಿಗೆ ಗುಟುರು ಹಾಕಿದ ಸಿಎಂ ಸಿದ್ದರಾಮಯ್ಯ 

22-12-25 06:29 pm       HK News Desk   ಕರ್ನಾಟಕ

ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಸ್ಥಳೀಯ ಸಮಸ್ಯೆಗಳಿದ್ದರೂ ಹೈಕಮಾಂಡ್ ತೀರ್ಮಾನಕ್ಕೆ ಬೆಲೆ ಕೊಡುತ್ತೇವೆ. ದೆಹಲಿ ನಾಯಕರೇ ಸಮಸ್ಯೆ ಬಗೆಹರಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಗುಟುರು ಹಾಕಿದ್ದಾರೆ. 

ಮೈಸೂರು, ಡಿ.22 : ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಸ್ಥಳೀಯ ಸಮಸ್ಯೆಗಳಿದ್ದರೂ ಹೈಕಮಾಂಡ್ ತೀರ್ಮಾನಕ್ಕೆ ಬೆಲೆ ಕೊಡುತ್ತೇವೆ. ದೆಹಲಿ ನಾಯಕರೇ ಸಮಸ್ಯೆ ಬಗೆಹರಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಗುಟುರು ಹಾಕಿದ್ದಾರೆ. 

ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಖರ್ಗೆ ಹೇಳಿಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಹೌದು, ಖರ್ಗೆ ಹೇಳಿಕೆ ಸರಿಯಾಗೇ ಇದೆ.‌ ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ.‌ ನಾನು ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ನಾವು ತೀರ್ಮಾನ ಮಾಡುತ್ತೇವೆ ಅಂತ ಹೇಳಿದ್ದಾರೆ. ಹೈಕಮಾಂಡ್ ಒಂದು ತೀರ್ಮಾನ ಮಾಡತ್ತೆ.‌  ಮಾಧ್ಯಮಗಳಿಂದ ಇಷ್ಟೊಂದು ಚರ್ಚೆ ಆಗ್ತಿದೆ ಎಂದು ಹೇಳಿದರು. 

ಅಧಿಕಾರ ಹಂಚಿಕೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಮತ್ತೆ ಹೈಕಮಾಂಡ್ ಅಂಗಳಕ್ಕೆ ಚೆಂಡು ಎಸೆದಿದ್ದಾರೆ. ಇದೇ ವೇಳೆ, ಯಾವ ಕ್ರಾಂತಿನೂ ಇಲ್ಲ.‌ ಬಜೆಟ್  ಸಿದ್ಧತೆ ಬಗ್ಗೆ ಆಮೇಲೆ ಹೇಳುತ್ತೇನೆ ಎಂದೂ ಹೇಳಿದರು. 

ರಾಜಣ್ಣ - ಡಿ.ಕೆ ಶಿವಕುಮಾರ್ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ, ಅವರು ಭೇಟಿ ಮಾಡಿದರೆ ತಪ್ಪೇನಿದೆ. ಡಿ.ಕೆ ಶಿವಕುಮಾರ್ ನಮ್ಮ ಪಕ್ಷದ ಅಧ್ಯಕ್ಷ‌‌. ಅವರನ್ನ ಭೇಟಿ ಮಾಡಬಾರದು ಎಂದು ಏನಾದ್ರು ಇದ್ಯಾ‌. ಅದರಲ್ಲಿ ಯಾವ ತಪ್ಪೂ ಇಲ್ಲ ಎಂದರು. ಎಲ್ಲರಿಗಿಂತ ಪಕ್ಷ ದೊಡ್ಡದು ಎಂಬ ಖರ್ಗೆ ಹೇಳಿಕೆಯೂ ಸರಿ ಇದೆ. ನಾವು ಮೊದಲಿನಿಂದಲೂ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ಹೇಳುತ್ತಿದ್ದೇವೆ ಎಂದು ಹೇಳಿದರು ಸಿದ್ದರಾಮಯ್ಯ.‌

Chief Minister Siddaramaiah on Sunday reiterated that the Congress High Command alone will decide on the issue of power-sharing in Karnataka, saying neither he nor any state leader has the authority to take a final call. His remarks effectively endorsed AICC President Mallikarjun Kharge’s recent statement that “no one is bigger than the party.”