ಬ್ರೇಕಿಂಗ್ ನ್ಯೂಸ್
07-02-21 04:40 pm Headline Karnataka News Network ಕರಾವಳಿ
ಉಡುಪಿ, ಫೆ. 7: ಈಗಾಗಲೇ ಐದು ವಿಶ್ವ ದಾಖಲೆಗಳನ್ನು ಮಾಡಿರುವ ಯೋಗಪಟು ತನುಶ್ರೀ ಪಿತ್ರೋಡಿ ಮತ್ತೊಂದು ವಿಶ್ವದಾಖಲೆ ಮಾಡಿದ್ದಾರೆ. ಒಂದು ನಿಮಿಷದಲ್ಲಿ 55 ಬಾರಿ ಹಿಮ್ಮುಖವಾಗಿ ಬಾಡಿ ಸ್ಕಿಪ್ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಉಡುಪಿ ಸೈಂಟ್ ಸಿಸಿಲಿಸ್ ಸಮೂಹ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 12ರ ಹರೆಯದ ತನುಶ್ರೀ, ತನ್ನ ಎರಡೂ ಕೈಯನ್ನು ಹಿಂಬದಿಗೆ ಜೋಡಿಸಿಕೊಂಡು, ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡುತ್ತಾ ವಿಶಿಷ್ಟ ದಾಖಲೆ ಮಾಡಿದ್ದಾರೆ.
ಈ ಪ್ರದರ್ಶನವನ್ನು ವಿಡಿಯೋ ಚಿತ್ರೀಕರಣ ಮಾಡಿದ್ದು, ಬಳಿಕ ಪರಿಶೀಲಿಸಿದ ಗೋಲ್ಡನ್ ಬುಕ್ನ ಭಾರತದ ಪ್ರತಿನಿಧಿ ಡಾ.ವೈಷ್ಣವ್ ಮನೀಶ್, ತನುಶ್ರೀಯ ಹೊಸ ದಾಖಲೆಯನ್ನು ಘೋಷಿಸಿದರು. ಈ ಮೊದಲು 48 ಬಾರಿ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡುವ ಮೂಲಕ ಮಾಡಿದ್ದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ತನುಶ್ರೀ ಮುರಿದರು.
‘ಈ ಹಿಂದೆ ಗೋಲ್ಡನ್ ಬುಕ್ನಲ್ಲಿ ದುಬೈಯಲ್ಲಿ ಬಾಲಕನೋರ್ವ ಮುಂದಿನಿಂದ 47 ಬಾರಿ ಫಾರ್ವಡ್ ಬಾಡಿ ಸ್ಕಿಪ್ ಮಾಡಿ ದಾಖಲೆ ನಿರ್ಮಿಸಿದ್ದಾನೆ. ಆದರೆ ತನುಶ್ರೀ ಹಿಂಬದಿಯಿಂದ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡಿರುವುದು ಗೋಲ್ಡನ್ ಬುಕ್ನಲ್ಲಿ ಹೊಸ ದಾಖಲೆಯಾಗಿದೆ. ತನುಶ್ರೀಗೆ ಈಗ ತಾತ್ಕಾಲಿಕ ಪ್ರಮಾಣಪತ್ರ ನೀಡಲಾಗಿದ್ದು, ಮುಂದೆ ಅಧಿಕೃತ ಪ್ರಮಾಣಪತ್ರ ನೀಡಲಾಗುವುದೆಂದು ಡಾ.ವೈಷ್ಣವ್ ಮನೀಶ್ ಹೇಳಿದರು.
ಸಂಧ್ಯಾ ಮತ್ತು ಉದಯ ಕುಮಾರ್ ದಂಪತಿಯ ಪುತ್ರಿಯಾಗಿರುವ ತನುಶ್ರೀ, ಉಡುಪಿ ಸೈಂಟ್ ಸಿಸಿಲಿಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ. ಈಕೆ 2017ರಲ್ಲಿ ನಿರಾಲಾಂಭ ಪೂರ್ಣ ಚಕ್ರಾಸನ, 2018ರಲ್ಲಿ ಮೋಸ್ಟ್ ಫುಲ್ ಬಾಡಿ ರೆವಲ್ಯುಶನ್ ಮೈಂಟಿಂಗ್ ಎ ಚೆಸ್ಟ್ ಸ್ಟಾಂಡ್ ಪೊಸಿಶನ್ ಭಂಗಿ, 2019ರಲ್ಲಿ ಧನುರಾಸನ ಭಂಗಿಯಲ್ಲಿ, ಚಕ್ರಾಸನ ರೇಸ್ನಲ್ಲಿ ವಿಶ್ವ ದಾಖಲೆ ಮಾಡಿದ್ದಾರೆ.
ಇಟೆಲಿಗೆ ಹೋಗಿದ್ದಾಗ ಅಲ್ಲಿ ತಮಿಳುನಾಡಿನ ವ್ಯಕ್ತಿಯೊಬ್ಬರು 48 ಬಾರಿ ಬ್ಯಾಕ್ವರ್ಡ್ ಬಾಡಿ ಸ್ಕಿಪ್ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಿರುವುದು ತಿಳಿಯಿತು. ಹಾಗೆ ನಾನು ಕೂಡ ಊರಿಗೆ ಬಂದು ಅಭ್ಯಾಸ ಮಾಡಿದೆ. ಮೊದಲು 20 ಬಾರಿ ಮಾಡಿದೆ. ಮುಂದೆ ಕಠಿಣ ಅಭ್ಯಾಸ ಮಾಡಿ 40-50 ಬಾರಿ ಮಾಡಿದೆ. ಲಾಕ್ಡೌನ್ ಸಂದರ್ಭದಲ್ಲಿ ಹೆಚ್ಚು ತರಬೇತಿ ಪಡೆದು ಗಿನ್ನೆಸ್ ರೆಕಾರ್ಡ್ಗೆ ಅರ್ಜಿ ಹಾಕಿದೆ. ಆದರೆ ಕನಿಷ್ಠ ವಯಸ್ಸು 16 ವರ್ಷ ಆಗಿರಬೇಕೆಂಬ ನಿಯಮದಿಂದ ಗಿನ್ನಿಸ್ ದಾಖಲೆ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕೆ ಗೋಲ್ಡನ್ ಬುಕ್ ನಲ್ಲಿ ಈ ದಾಖಲೆ ಮಾಡಿದ್ದಾಗಿ ತನುಶ್ರೀ ಪಿತ್ರೋಡಿ ಹೇಳಿದರು.
ದಾಖಲೆಯ ಈ ಕಾರ್ಯಕ್ರಮದಲ್ಲಿ ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉದ್ಯಾವರ ನಾಗೇಶ್ ಕುಮಾರ್, ರಿಯಾಝ್ ಪಳ್ಳಿ, ನಾಗರಾಜ್ ರಾವ್, ಮುಹಮ್ಮದ್ ಮೌಲಾ, ವಿಶು ಶೆಟ್ಟಿ ಅಂಬಲಪಾಡಿ, ಅನುಪಮಾ ಶೆಟ್ಟಿ, ತನುಶ್ರೀ ಗುರು ರಾಮಕೃಷ್ಣ ಕೊಡಂಚ, ರಾಜ್ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
Class 7 student Tanushree Pithrody from Udupi on Saturday set a record by performing 55 backward body skips in a minute. A provisional certificate of the Golden Book of World Records was handed over to her.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm