ಬ್ರೇಕಿಂಗ್ ನ್ಯೂಸ್
04-02-21 04:31 pm Mangalore Correspondent ಕರಾವಳಿ
ಮಂಗಳೂರು, ಫೆ.4: ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಕಂಪನಿಗೆ ಗುತ್ತಿಗೆ ಕೊಟ್ಟಿದ್ದನ್ನು ವಿರೋಧಿಸಿ ವಿಮಾನ ನಿಲ್ದಾಣದ ನೌಕರರೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವಿಮಾನ ನಿಲ್ದಾಣ ಪ್ರಾಧಿಕಾರದ ಉದ್ಯೋಗಿಗಳ ಸಂಘ ಹೈಕೋರ್ಟಿಗೆ ಸಲ್ಲಿಸಿದ್ದ ಪಿಐಎಲ್ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು ಈ ಕುರಿತು ಕೇಂದ್ರ ವಿಮಾನ ಯಾನ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದೆ.
ಮಂಗಳೂರು ಏರ್ಪೋರ್ಟ್ ನಿರ್ವಹಣೆಯನ್ನು ಅದಾನಿ ಕಂಪನಿಗೆ 50 ವರ್ಷಕ್ಕೆ ಗುತ್ತಿಗೆ ನೀಡಲಾಗಿದ್ದು ಕೇಂದ್ರ ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು.
ವಿಚಾರಣೆ ಬಳಿಕ ಪ್ರತಿವಾದಿಗಳಾದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಮಂಗಳೂರು ವಿಮಾನ ನಿಲ್ದಾಣ ನಿರ್ದೇಶಕ ಮತ್ತು ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ಗೆ ಹೈಕೋರ್ಟ್ ನೋಟಿಸ್ ನೀಡಿದ್ದು ಆಕ್ಷೇಪಣೆ ಸಲ್ಲಿಸಲು ಹೇಳಿ ವಿಚಾರಣೆ ಮುಂದೂಡಿದೆ.
ಸರಕಾರಿ- ಖಾಸಗಿ ಸಹಭಾಗಿತ್ವ ಯೋಜನೆಯಡಿ ಅಹಮದಾಬಾದ್, ಜೈಪುರ, ಲಖನೌ, ಗೋವಾ, ಗುವಾಹಟಿ ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ 2018ರ ನ.8ರಂದು ಕೇಂದ್ರ ಸಚಿವ ಸಂಪುಟ ನಿರ್ಣಯ ಕೈಗೊಂಡಿತ್ತು. ಇಂತಹ ನಿರ್ಣಯ ಮಾಡಿದ್ದೇ ಕಾನೂನುಬಾಹಿರ ಮತ್ತು ವಿಮಾಣ ನಿಲ್ದಾಣ ಪ್ರಾಧಿಕಾರ ಕಾಯಿದೆಯ ಉಲ್ಲಂಘನೆ ಎಂದು ಅರ್ಜಿದಾರರು ದೂರಿದ್ದಾರೆ.
Mangaluru International Airport workers file suit in court on Adani group opposing take over and the court has issued notice to the central government on the same.
03-04-25 09:44 pm
Bangalore Correspondent
Hubballi student suicide attempt: ಯುವತಿಯ ಖಾಸಗ...
02-04-25 10:48 pm
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
03-04-25 11:10 pm
HK News Desk
Waqf Bill, Amit Shah; ಸುದೀರ್ಘ ಚರ್ಚೆ ಬಳಿಕ ಸಂಸತ...
03-04-25 01:04 pm
ವಕ್ಫ್ ತಿದ್ದುಪಡಿ ವಿಧೇಯಕ ಸಂಸತ್ತಿನಲ್ಲಿ ಮಂಡನೆ ; ವ...
02-04-25 07:35 pm
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
03-04-25 10:14 pm
Dinesh Nayak, Mangaluru Correspondent
Mangalore Court, Lawyers Protest, Judge: ಜಡ್ಜ...
03-04-25 04:04 pm
Belthangady, Head Constable Praveen, Cm Medal...
03-04-25 03:09 pm
Sdpi Protest Mangalore: ವಕ್ಫ್ ತಿದ್ದುಪಡಿ ಮಸೂದೆ...
02-04-25 11:02 pm
Kora Kannada Movie, Release, P Murthy, Sunami...
02-04-25 04:11 pm
03-04-25 05:01 pm
HK News Desk
Mandya Marriage Fraud: ಒಬ್ಬರಲ್ಲ, ಮೂವರು ಯುವಕರ...
03-04-25 01:02 pm
Mangalore police, Cow trafficking, Kaikamba,...
02-04-25 05:49 pm
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm