ಬ್ರೇಕಿಂಗ್ ನ್ಯೂಸ್

Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ     |    ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ    |    Mahesh Shetty Timarodi, Arms, FIR: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಮತ್ತೊಂದು ಎಫ್ಐಆರ್, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು    |   

ದಕ್ಷಿಣ ಕನ್ನಡ ; ಒಂದೇ ದಿನ 307 ಮಂದಿಗೆ ಕೊರೊನಾ ಸೋಂಕು 

14-08-20 09:29 pm       Mangalore Reporter   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 307 ಮಂದಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಅಲ್ಲದೆ, ಆರು ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. 

ಮಂಗಳೂರು, ಆಗಸ್ಟ್ 14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 307 ಮಂದಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಅಲ್ಲದೆ, ಆರು ಮಂದಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ. 

ಇದರೊಂದಿಗೆ ಕೊರೋನಾ ಸೋಂಕಿಗೆ ದ.ಕ. ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 256ಕ್ಕೆ ಏರಿಕೆಯಾಗಿದೆ. ಇನ್ನು ಇಂದು ಪಾಸಿಟಿವ್ ಆದವರ ಪೈಕಿ, ಮಂಗಳೂರು ತಾಲೂಕಿನಲ್ಲಿ 197 ಮಂದಿ ಕೊರೋನಾ ಪಾಸಿಟಿವ್ ಆಗಿದ್ದಾರೆ. ಉಳಿದಂತೆ ಬಂಟ್ವಾಳ ತಾಲೂಕು 57, ಸುಳ್ಯ 17, ಪುತ್ತೂರು 14, ಬೆಳ್ತಂಗಡಿ 14 ಹಾಗೂ ಹೊರ ಜಿಲ್ಲೆಯಿಂದ ಬಂದ 8 ಮಂದಿ ಪಾಸಿಟಿವ್ ಆಗಿದ್ದಾರೆ. ಕೊರೊನಾ ಲಕ್ಷಣಗಳಿದ್ದ 139 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಸಂಪರ್ಕವೇ ಪತ್ತೆಯಾಗದ 124 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ.

ಪ್ರಾಥಮಿಕ ಸಂಪರ್ಕದಿಂದ 44 ಮಂದಿಗೆ ಸೋಂಕು ತಗಲಿದೆ. ಇದೇ ವೇಳೆ 242 ಮಂದಿ ಕೊರೊನಾ ಮುಕ್ತರಾಗಿ ಗುಣಮುಖರಾಗಿದ್ದಾರೆ.