ಬ್ರೇಕಿಂಗ್ ನ್ಯೂಸ್
14-08-20 08:58 am Mangalore Reporter ಕರಾವಳಿ
ಪುತ್ತೂರು, ಆಗಸ್ಟ್ 14: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರ್ಹರಲ್ಲದವರೂ ಬಿಪಿಎಲ್ ಪಡಿತರ ಚೀಟಿ ಪಡೆದು ಸೌಲಭ್ಯ ಅನುಭವಿಸುತ್ತಿರುವ ಬಗ್ಗೆ ಎರಡು ವರ್ಷಗಳಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದರು. ಇದೀಗ ಈ ಮಾಹಿತಿ ಲಭಿಸಿದ್ದು ನಿಮಯ ಉಲ್ಲಂಘಿಸಿ ಪಡಿತರ ಪಡೆದಿರುವ 6,956 ಮಂದಿಯನ್ನು ಪತ್ತೆ ಹಚ್ಚಲಾಗಿದೆ.
ದ.ಕ. ಜಿಲ್ಲೆಯಲ್ಲಿ ನಿಯಮ ಮೀರಿ 6,956 ಕುಟುಂಬಗಳು ಬಿಪಿಎಲ್ (ಆದ್ಯತಾ ಪಡಿತರ ಚೀಟಿ) ಆಧಾರದಲ್ಲಿ ಪಡಿತರ ಚೀಟಿ ಪಡೆದು, ಸವಲತ್ತುಗಳನ್ನು ಅನುಭವಿಸುತ್ತಿರುವುದು ಪತ್ತೆ ಆಗಿದೆ. ಹೀಗೆ ನಿಯಮ ಬಾಹಿರ ಪಡಿತರ ಇರುವವರು ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚು ಅನ್ನುವುದು ಕಂಡುಬಂದಿದೆ. ಮಂಗಳೂರು ಗ್ರಾಮಾಂತರ -477, ಮಂಗಳೂರು- 1,256, ಬಂಟ್ವಾಳ ತಾಲೂಕು - 1,301, ಪುತ್ತೂರು-1,247, ಬೆಳ್ತಂಗಡಿ- 1,873, ಸುಳ್ಯ-801 ಅನರ್ಹ ಕಾರ್ಡ್ ಗಳನ್ನು ಪತ್ತೆ ಮಾಡಲಾಗಿದೆ.
26 ಲಕ್ಷ ರೂಪಾಯಿ ದಂಡ ವಸೂಲಿ:
ಅನರ್ಹ ಪಡಿತರ ಚೀಟಿ ಪಡೆದವರಿಗೆ ಅಧಿಕಾರಿಗಳು ದಂಡವನ್ನೂ ವಿಧಿಸುತ್ತಿದ್ದಾರೆ. ಜನವರಿಯಿಂದ ಈ ತನಕ 26,89,406 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಆಹಾರ ಮತ್ತು ಸರಬರಾಜು ಇಲಾಖೆ ಮಾಹಿತಿ ನೀಡಿದೆ. ಬಿಪಿಎಲ್ ಪಡಿತರ ಕಾರ್ಡ್ ಅನ್ನು ಆ ಕುಟುಂಬ ಯಾವಾಗ ಪಡೆದುಕೊಂಡಿದ್ದ ವರ್ಷದಿಂದ ಹಿಡಿದು, ಸವಲತ್ತು ಉಪಯೋಗಿಸಿದ ಪ್ರಮಾಣ ಆಧರಿಸಿ ದಂಡ ವಿಧಿಸಲಾಗಿದೆ. ಮಂಗಳೂರು ಗ್ರಾಮಾಂತರ -3,63,339 ರೂ., ಮಂಗಳೂರು ನಗರ - 5,63,463 ರೂ., ಬಂಟ್ವಾಳ- 5,24,224 ರೂ., ಪುತ್ತೂರು- 49,535 ರೂ., ಬೆಳ್ತಂಗಡಿ- 8,80,006 ರೂ., ಸುಳ್ಯ ತಾಲೂಕಿನಲ್ಲಿ 3,08,839 ರೂ. ದಂಡ ಸಂಗ್ರಹಿಸಲಾಗಿದೆ.
ಸರಕಾರಿ ನೌಕರರಿಗೂ ದಂಡ !
ಸರಕಾರದ ಮಾನದಂಡಗಳನ್ನು ಮೀರಿ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದರೆ ದಂಡ ರಹಿತವಾಗಿ ಕಳೆದ 2019ರ ಸೆಪ್ಟೆಂಬರ್ 3ರೊಳಗೆ ಆಯಾ ತಾಲೂಕು ಕಚೇರಿಯ ಆಹಾರ ಶಾಖೆಗೆ ತೆರಳಿ ಪಡಿತರ ಚೀಟಿ ಒಪ್ಪಿಸಲು ಅವಕಾಶ ನೀಡಲಾಗಿತ್ತು. ಸ್ವತಃ ರದ್ದು ಮಾಡುವಂತೆ ಸರಕಾರ ನೀಡಿದ್ದ ಅವಕಾಶವನ್ನು ಆ ಬಳಿಕ ಅಕ್ಟೋಬರ್ 15ರ ತನಕ ವಿಸ್ತರಣೆ ಮಾಡಲಾಗಿತ್ತು. ಎರಡು ಬಾರಿ ನೀಡಿದ ಅವಕಾಶದಲ್ಲಿ ಪಡಿತರ ಚೀಟಿ ರದ್ದು ಮಾಡದೆ, ಇದ್ದ ಅನರ್ಹ ಪಡಿತರ ಚೀಟಿದಾರರಿಂದ ಈಗ ದಂಡ ವಸೂಲಿ ಮಾಡಲಾಗಿದೆ. ಅನಂತರ ಸರಕಾರ ದಂಡ ವಿಧಿಸುವುದನ್ನು ತಡೆ ಹಿಡಿದು ವಸೂಲಿ ಕಾರ್ಯಕ್ಕೆ ಆದೇಶ ನೀಡಿತ್ತು. ಈಗ ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರೂ ದಂಡ ವಿಧಿಸಲಾಗುತ್ತಿದೆ. ಆದಾಯ ಪರಿಮಿತಿ, ಪಡಿತರ ಬಳಕೆಯ ಅವಧಿ ಆಧರಿಸಿ ಉಳಿದವರಿಗೆ ದಂಡ ವಿಧಿಸಲಾಗುತ್ತಿದೆ.
23-06-26 05:58 pm
HK News Staffer
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
Cross Voting Row, Vijayendra: ಅಡ್ಡ ಮತದಾನ ; ಧರ...
21-06-26 02:18 pm
23-06-26 12:21 pm
HK News Staffer
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
23-06-26 06:02 pm
HK News Staffer
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
ಮುಸ್ಲಿಮರಿಗೆ ಸಚಿವ ಸ್ಥಾನ ; ಕಾಂಗ್ರೆಸಿಗೆ ಓಟ್ ಹಾಕದ...
23-06-26 11:49 am
ಉಡುಪಿ ಕೋರ್ಟ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ; ಕೆ...
22-06-26 05:23 pm
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
23-06-26 02:15 pm
HK News Staffer
ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತಾ ? ಲಿವ್-ಇನ್...
23-06-26 12:57 pm
ಅಕ್ರಮ ಪೊಲೀಸ್ ಕ್ಲಿಯರೆನ್ಸ್ ; ಮೂರೇ ದಿನದಲ್ಲಿ ಸಿಸಿ...
22-06-26 10:21 pm
ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ; ವೈದ್...
22-06-26 08:01 pm
ಹಂದಿ ಜ್ವರಕ್ಕೆ ಕಾರವಾರದ ವ್ಯಕ್ತಿ ಮಂಗಳೂರಿನಲ್ಲಿ ಬಲ...
22-06-26 07:58 pm