ಬ್ರೇಕಿಂಗ್ ನ್ಯೂಸ್
25-01-21 02:21 pm Mangalore Correspondent ಕರಾವಳಿ
ಮಂಗಳೂರು, ಜ.25: ಕರಾವಳಿಯಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸಕ್ರಿಯವಾಗಿದ್ದು ಗುಪ್ತಚರ ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಣ್ಯ ಭಾಗದಲ್ಲಿ ಸ್ಯಾಟಲೈಟ್ ಫೋನ್ ಮತ್ತೆ ಸಂಪರ್ಕ ಕಂಡುಕೊಂಡಿದ್ದನ್ನು ಕೇಂದ್ರೀಯ ಗುಪ್ತಚರ ಸಂಸ್ಥೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಕಳೆದ ಒಂದು ವಾರದಲ್ಲಿ 5 ಬಾರಿ ಸ್ಯಾಟಲೈಟ್ ಫೋನ್ ಸಂಪರ್ಕ ಆಗಿರುವ ಬಗ್ಗೆ ಪತ್ತೆ ಮಾಡಲಾಗಿದ್ದು ನಿಗೂಢ ವ್ಯಕ್ತಿಗಳು ವಿದೇಶಕ್ಕೆ ಸಂಪರ್ಕ ಸಾಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ 5 ಕಡೆಗಳಲ್ಲಿ ನಿಷೇಧಿತ ತುರಾಯ ಫೋನ್ ರಿಂಗಣಿಸಿದ್ದನ್ನು ಕೇಂದ್ರ ಗುಪ್ತಚರ ಸಂಸ್ಥೆ ರಾ ಅಧಿಕಾರಿಗಳು ಖಚಿತ ಪಡಿಸಿದ್ದು ಈ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ನಾವೂರು, ಧರ್ಮಸ್ಥಳ, ಕನಕಮಜಲು ಸೇರಿದಂತೆ 5 ಕಡೆಗಳಲ್ಲಿ ತುರಾಯ ಸ್ಯಾಟಲೈಟ್ ಫೋನ್ ವರ್ಕ್ ಆಗಿದ್ದು ನಿಗೂಢ ವ್ಯಕ್ತಿಗಳ ಜೊತೆ ಸಂಪರ್ಕ ಮಾಡಿವೆ. ಫೋನ್ ಆ್ಯಕ್ಟಿವ್ ಆಗಿರುವ ಪ್ರದೇಶಗಳು ಅರಣ್ಯ ಭಾಗಗಳಾಗಿದ್ದು ಯಾರು, ಯಾರೊಂದಿಗೆ ಮಾತನಾಡಿದ್ದಾರೆ ಎಂಬುದನ್ನು ಅಧಿಕಾರಿಗಳಿಗೆ ಪತ್ತೆ ಮಾಡಲು ಸಾಧ್ಯ ಆಗಿಲ್ಲ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯದ ಗುಪ್ತಚರ ಅಧಿಕಾರಿಗಳು ತನಿಖೆ ಆರಂಭಿಸಿದ್ದು ತೀವ್ರ ತಲೆಕೆಡಿಸಿ ಕೊಂಡಿದ್ದಾರೆ.

ಫೋನ್ ಸಂಪರ್ಕ ಆಗಿರುವ ಬಗ್ಗೆ ಲೊಕೇಷನ್ ಟ್ರೇಸ್ ಮಾಡಿರೋ 'ರಾ' ಅಧಿಕಾರಿಗಳು ಅದರ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ.
ಸ್ಯಾಟಲೈಟ್ ಫೋನ್ ಗಳು ಕರಾವಳಿಯಲ್ಲಿ ದಿಢೀರಾಗಿ ಆ್ಯಕ್ಟಿವ್ ಆಗಿರುವುದು ಕುತೂಹಲ ಮತ್ತು ಆತಂಕ ಮೂಡಿಸಿದೆ. ತುರಾಯ ಸ್ಯಾಟಲೈಟ್ ಫೋನ್ ಗಳನ್ನು ಉಗ್ರರು ದುರ್ಬಳಕೆ ಮಾಡುತ್ತಿದ್ದಾರೆಂಬ ನೆಲೆಯಲ್ಲಿ ಭಾರತದಲ್ಲಿ ಅದರ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ನಡುವೆ, ಉಗ್ರರ ಸ್ಲೀಪರ್ ಸೆಲ್ ಎಂದೇ ಹೇಳಲಾಗಿರುವ ಕರಾವಳಿಯಲ್ಲಿ ದಿಢೀರ್ ಆಗಿ ಸ್ಯಾಟಲೈಟ್ ಫೋನ್ ರಿಂಗಣಿಸಿದ್ದು ನಿಗೂಢ ಚಲನವಲನಕ್ಕೆ ಸಾಕ್ಷಿಯೆಂದೇ ಹೇಳಲಾಗುತ್ತಿದೆ. ಹೀಗಾಗಿ ಕೇಂದ್ರ ಗೂಢಚಾರರು ಮತ್ತೆ ನಿಗೂಢವಾಗಿಯೇ ಕರಾವಳಿಯತ್ತ ಹೆಜ್ಜೆ ಇಟ್ಟಿದ್ದಾರೆ.
ಕರಾವಳಿಯಲ್ಲಿ ಮತ್ತೆ ರಿಂಗಣಿಸ್ತಿದೆ ಸ್ಯಾಟಲೈಟ್ ಫೋನ್ !! ಉಗ್ರರ ಸ್ಲೀಪರ್ ಸೆಲ್ ನಂಟಿನ ಬಗ್ಗೆ ಶಂಕೆ !
Satellite phone call signals are once again revealed in Belhangady of Mangalore. Security has been briefed up in Coastal areas.
22-12-25 06:29 pm
HK News Desk
ಸ್ಥಳೀಯ ಮಟ್ಟದಲ್ಲೇ ಗೊಂದಲ ಬಗೆಹರಿಸಿಕೊಳ್ಳಿ, ಎಲ್ಲದಕ...
21-12-25 05:33 pm
ಸಿಎಂ ಸ್ಥಾನ ಉಳಿಸಿಕೊಳ್ಳಲು ಅಹಿಂದ ಶಾಸಕರು, ಸಚಿವರ ರ...
20-12-25 03:05 pm
ನನ್ನ ಮತ್ತು ಸಿಎಂ ನಡುವೆ ಒಂದು ಒಪ್ಪಂದವಾಗಿದೆ ; ಅದರ...
19-12-25 10:03 pm
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
22-12-25 12:26 pm
Mangalore Correspondent
ಕೇಪು ಜಾತ್ರೆ ಕೋಳಿ ಅಂಕಕ್ಕೆ ಎರಡನೇ ದಿನವೂ ಪೊಲೀಸ್ ದ...
21-12-25 11:04 pm
ಕೇಪು ಜಾತ್ರೆ ಕೋಳಿ ಅಂಕ ಮಾಡಿಸಿದ ಶಾಸಕರ ವಿರುದ್ಧ ಕೇ...
20-12-25 10:53 pm
ಕಟ್ಲೆ ಕಟ್ಲೆ.. ಏರ್ಲಾ ಬಲಿಪೊಡ್ಚಿ..!ವಿಟ್ಲ ಪೊಲೀಸರ...
20-12-25 08:47 pm
ಮೃದು ಧೋರಣೆ ; ಎಸ್ಡಿಪಿಐ ಆರೋಪದ ಬಗ್ಗೆ ಕಮಿಷನರ್ ಸುಧ...
20-12-25 08:44 pm
22-12-25 04:00 pm
Mangalore Correspondent
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm
Cyber Fraud: ಸೈಬರ್ ವಂಚಕರಿಗೆ 22 ಲಕ್ಷ ವರ್ಗಾವಣೆ...
21-12-25 08:55 pm