ಬ್ರೇಕಿಂಗ್ ನ್ಯೂಸ್

Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿಂಗರತಿ ಲೈಂಗಿಕ ದೌರ್ಜನ್ಯ ; ಬೇಕಲ ಶಿಕ್ಷಣಾಧಿಕಾರಿ, ರೈಲ್ವೇ ಉದ್ಯೋಗಿ, ಜಮಾತೆ ಇಸ್ಲಾಮಿ, ಲೀಗ್ ಕಾರ್ಯಕರ್ತರು ಸೇರಿ ಹತ್ತು ಮಂದಿ ಪೊಲೀಸ್ ಬಲೆಗೆ, ಕಾಸರಗೋಡಿನಲ್ಲಿ ಸಂಚಲನ ಮೂಡಿಸಿದ ಪ್ರಕರಣ     |    ಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆಬಂಗ್ಲೆಗುಡ್ಡೆ ಕಾಡಿನಲ್ಲಿ 9 ಕಡೆ ಮನುಷ್ಯನ ಎಲುಬು, ಬುರುಡೆಗಳು ಪತ್ತೆ, ಧರ್ಮಸ್ಥಳ ಪ್ರಕರಣಕ್ಕೆ ಮತ್ತೆ ತಿರುವು, ಎಸ್ಐಟಿ ಶೋಧ ಕಾರ್ಯ ಮುಂದುವರಿಕೆ    |    Mahesh Shetty Timarodi, Arms, FIR: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿಯಲ್ಲಿ ಮತ್ತೊಂದು ಎಫ್ಐಆರ್, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು    |   

ನಾಯಿ ಮರಿಗೆ ಕೃಷ್ಣ ವೇಷ ; ಕೃಷ್ಣಾಷ್ಟಮಿಯಂದೇ ಅಣಕಿಸಿದ ಮಾಡೆಲ್ !

13-08-20 12:45 pm       Mangalore Reporter   ಕರಾವಳಿ

ಕೃಷ್ಣ ಜನ್ಮಾಷ್ಟಮಿಯ ಹಬ್ಬದಂದೇ ಕ್ರಿಸ್ತಿಯನ್ ಯುವತಿಯೊಬ್ಬಳು ತನ್ನ ಮುದ್ದಿನ ನಾಯಿಗೆ ಕೃಷ್ಣ ವೇಷ ಹಾಕಿ ಹಿಂದು ದೇವರನ್ನು ನಿಂದಿಸಿರುವ ಆರೋಪ ಕೇಳಿಬಂದಿದೆ.

ಮಂಗಳೂರು, ಆಗಸ್ಟ್ 13: ಪ್ರವಾದಿ ಪೈಗಂಬರ್ ಅವರನ್ನು ಅವಹೇಳನ ಮಾಡಿದ ವಿಚಾರ ಒಂದ್ಕಡೆ ಹಿಂಸೆಯ ಕಿಡಿ ಹಬ್ಬಿಸಿದ್ದರೆ, ಇದೇ ವೇಳೆ ನಾಯಿ ಮರಿಗೆ ಕೃಷ್ಣ ವೇಷ ಹಾಕಿ, ಫೋಟೊಗಳನ್ನು ಅಪ್ಲೋಡ್ ಮಾಡಿರುವ ವಿಚಾರ ಈಗ ಆಕ್ರೋಶದ ಅಲೆ ಎಬ್ಬಿಸಿದೆ‌.‌

ಕೃಷ್ಣ ಜನ್ಮಾಷ್ಟಮಿಯ ಹಬ್ಬದಂದೇ ಕ್ರಿಸ್ತಿಯನ್ ಯುವತಿಯೊಬ್ಬಳು ತನ್ನ ಮುದ್ದಿನ ನಾಯಿಗೆ ಕೃಷ್ಣ ವೇಷ ಹಾಕಿ ಹಿಂದು ದೇವರನ್ನು ನಿಂದಿಸಿರುವ ಆರೋಪ ಕೇಳಿಬಂದಿದೆ. ಮಂಗಳೂರು ಮೂಲದ ಜೋಶಿಯಲ್ ಲೋಬೊ ಎನ್ನುವ ಮಾಡೆಲಿಂಗ್ ಕ್ಷೇತ್ರದಲ್ಲಿರುವ ಯುವತಿ ತನ್ನ ನಾಯಿ ಮರಿಗೆ ಕೃಷ್ಣನ ವೇಷ ಹಾಕಿದ್ದಾಳೆ. ಕೃಷ್ಣ ಜನ್ಮಾಷ್ಟಮಿಯಂದು ಹಿಂದುಗಳೆಲ್ಲ ತಮ್ಮ ಮಕ್ಕಳಿಗೆ ಕೃಷ್ಣ ವೇಷ ಹಾಕಿ, ಫೋಟೋಗಳನ್ನು ಫೇಸ್ಬುಕ್ ನಲ್ಲಿ ಹಾಕ್ಕೊಂಡಿದ್ದರೆ ಈ ಕ್ರಿಸ್ತಿಯನ್ ಯುವತಿ ಉದ್ದೇಶಪೂರ್ವಕವಾಗೇ ತನ್ನ ನಾಯಿ ಮರಿಗೆ ಕೃಷ್ಣ ವೇಷ ಹಾಕಿ, ತಲೆಗೆ ನವಿಲಿನ ಗರಿ, ಸೊಂಟಕ್ಕೆ ಕೊಳಲನ್ನು ಸಿಕ್ಕಿಸಿಕೊಂಡಿರುವ ಫೋಟೊಗಳನ್ನು ತನ್ನ ಇನ್ ಸ್ಟಾ ಗ್ರಾಮಿನಲ್ಲಿ ಪೋಸ್ಟ್ ಮಾಡಿದ್ದಾಳೆ. 

ಈ ಫೋಟೊಗಳು ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ಭಾರೀ ಆಕ್ರೋಶ ಕೇಳಿಬಂದಿದೆ. ತನ್ನ ಪೋಸ್ಟ್ ವೈರಲ್ ಆಗಿ ವಿರೋಧ ಕೇಳಿಬರುತ್ತಿದ್ದಂತೆ ಜೋಶಿಲ್ ಲೋಬೊ ಪೋಸ್ಟನ್ನು ಡಿಲೀಟ್ ಮಾಡಿದ್ದಾಳೆ. ನಾಲ್ಕು ದಿನಗಳ ಹಿಂದೆ ಈಕೆ ಈ ಫೋಟೊಗಳನ್ನು ಪೋಸ್ಟ್ ಮಾಡಿದ್ದಾಳೆ ಎನ್ನಲಾಗ್ತಿದ್ದು ವಿರೋಧ ಬಂದ ಬಳಿಕ ಕ್ಷಮೆ ಯಾಚಿಸಿ ಹೇಳಿಕೆಯನ್ನೂ ಹಾಕಿದ್ದಳು. ಈಗ ಬೆಂಗಳೂರಿನಲ್ಲಿ ದೇವ ನಿಂದೆಯ ವಿಚಾರ ಹಿಂಸೆಯ ಕಿಡಿ ಎಬ್ಬಿಸುತ್ತಿದ್ದಂತೆ ಎಲ್ಲವನ್ನೂ ಡಿಲೀಟ್ ಮಾಡಿ ಕಣ್ಮರೆಯಾಗಿದ್ದಾಳೆ.