ಕುಮಾರಧಾರಾ ನದಿಗೆ ಹಾರಿದ ಮಹಿಳೆ ಮೊಸಳೆ ನೋಡಿ ದುರಂತದಿಂದ ಪಾರು ! ಅದೃಷ್ಟ ನೆಟ್ಟಗಿದ್ದರೆ ಸಮುದ್ರಕ್ಕೆ ಬಿದ್ದರೂ ಬದುಕಿ ಬರ್ತಾರೆ !

05-11-26 02:07 pm       HK News Staffer   ಕರಾವಳಿ

ವೈಯಕ್ತಿಕ ಕಾರಣಗಳಿಂದ ನೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಉಡುಪಿ ಮೂಲದ ಮಹಿಳೆಯೊಬ್ಬರ ಮೇಲೆ ಮೊಸಳೆ ದಾಳಿ ನಡೆಸಲು ಬಂದಿದ್ದರಿಂದ ಆಕೆಯ ಜೀವಂತ ಬದುಕಿ ಬಂದದ ರೋಚಕ ಘಟನೆ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರಧಾರಾ ಸೇತುವೆ ಬಳಿ ನಡೆದಿದೆ.

ಸುಳ್ಯ, ನ.5: ವೈಯಕ್ತಿಕ ಕಾರಣಗಳಿಂದ ನೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಉಡುಪಿ ಮೂಲದ ಮಹಿಳೆಯೊಬ್ಬರ ಮೇಲೆ ಮೊಸಳೆ ದಾಳಿ ನಡೆಸಲು ಬಂದಿದ್ದರಿಂದ ಆಕೆಯ ಜೀವಂತ ಬದುಕಿ ಬಂದದ ರೋಚಕ ಘಟನೆ  ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರಧಾರಾ ಸೇತುವೆ ಬಳಿ ನಡೆದಿದೆ.

ನವೆಂಬರ್ 4ರ ಬುಧವಾರ ರಾತ್ರಿ ಮಹಿಳೆ ಉಡುಪಿಯಿಂದ ಸುಬ್ರಹ್ಮಣ್ಯಕ್ಕೆ ಬಂದಿದ್ದು ಕುಮಾರಧಾರಾ ಸೇತುವೆ ಬಳಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ನದಿಯಲ್ಲಿದ್ದ ಮೊಸಳೆ ಆಕೆಯನ್ನು ಕಚ್ಚಿ ತಿನ್ನಲು ಬಂದಿದೆ. ಇದನ್ನು ನೋಡಿ ಬೆಚ್ಚಿದ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾರೆ. 

ಮೊಸಳೆಯ ದಾಳಿಯ ಭಯದಲ್ಲಿ ಮಹಿಳೆ ಜೋರಾಗಿ ಬೊಬ್ಬೆ ಹಾಕಿದ್ದು ಶಬ್ದ ಕೇಳಿ ತಕ್ಷಣ ಎಚ್ಚೆತ್ತ ಸಮೀಪದ ಲಾಡ್ಜ್‌ ಒಂದರ ಕೆಲಸಗಾರರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಸುಬ್ರಹ್ಮಣ್ಯ ಪೊಲೀಸರು, ಸ್ಥಳೀಯರ ಸಹಕಾರದೊಂದಿಗೆ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಆಕೆಯ ಮನೆಯವರನ್ನು ಸಂಪರ್ಕಿಸಿ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ. ಬುದ್ದಿ ಕೆಟ್ಟು ದುರಂತ ಆಹ್ವಾನಿಸಿದರೂ, ಅದೃಷ್ಟ ಚೆನ್ನಾಗಿದ್ದರೆ ಸಮುದ್ರಕ್ಕೆ ಹಾರಿದರೂ ಬದುಕಿ ಬರಬಹುದು ಎಂಬುದಕ್ಕೆ ಇದು ನಿದರ್ಶನ.