ಬ್ರೇಕಿಂಗ್ ನ್ಯೂಸ್
21-09-26 10:36 pm HK News Desk ಕರಾವಳಿ
ಮೂಡುಬಿದಿರೆ, ಸೆ.21: ಇಡೀ ಜಗತ್ತು ವೃದ್ಧ ಆಗುತ್ತಿದ್ದರೆ, ಭಾರತ ಯುವಜನರ ದೇಶ. 65 ಶೇಕಡಾ ಜನರು ದೇಶದಲ್ಲಿ ಯುವಕರಿದ್ದಾರೆ. ಯುವಜನತೆ ಕೌಶಲ್ಯ ಮತ್ತು ಜೀವನದಲ್ಲಿ ಧೈರ್ಯ ಬೆಳೆಸಿಕೊಳ್ಳಬೇಕು. ಇಡೀ ಜಗತ್ತು ಭಾರತದ ವೈದ್ಯ ಕೌಶಲ್ಯಗಳತ್ತ ನೋಡುತ್ತಿದೆ. ಹೀಗಾಗಿ ಭಾರತೀಯ ವೈದ್ಯರು ಹಾಗೂ ಶುಶ್ರೂಷಕರ ಮೇಲೆ ವಿಶ್ವಾಸ ಹೆಚ್ಚುತ್ತಿದೆ. ದಕ್ಷಿಣ ಕನ್ನಡವು ಕೇವಲ ದೇಶಕ್ಕಲ್ಲ, ಇಡೀ ಜಗತ್ತಿಗೆ ವೈದ್ಯಕೀಯ ಹಬ್ ಆಗಿ ಬೆಳೆಯಬೇಕು ಎಂದು ಶಿಕ್ಷಣ, ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆರಂಭಗೊಂಡ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್ (ಆಳ್ವಾಸ್ ಮೆಡಿಕಲ್ ಕಾಲೇಜು) ಅನ್ನು ಸೋಮವಾರ ಮಿಜಾರಿನಲ್ಲಿ ಸಚಿವ ಪ್ರಹ್ಲಾದ ಜೋಷಿ ಉದ್ಘಾಟಿಸಿ ಮಾತನಾಡಿದರು. 'ನೂರು ಕೈಯಿಂದ ಗಳಿಸಿ, ಸಾವಿರ ಕೈಗಳಿಂದ ಕೊಡಬೇಕು' ಎಂಬುದನ್ನು ನಮ್ಮ ಭಾರತೀಯ ಸಂಸ್ಕೃತಿ ಹೇಳುತ್ತದೆ. ಅದಕ್ಕೆ ನಿದರ್ಶನ ಆಳ್ವರು. ಅಶಕ್ತರಿಗೆ ಕೊಡುವ ಸಂಸ್ಥೆ ಆಳ್ವಾಸ್. ಇಂಥ ಶಿಕ್ಷಣ ಸಂಸ್ಥೆಯನ್ನು ಕಟ್ಟಿದವರು ಮೋಹನ ಆಳ್ವರ ಬಗ್ಗೆ ತಿಳಿಯದವರಿಲ್ಲ. ಇಂಥ ಶಿಕ್ಷಣ ಸಂಸ್ಥೆಗೆ ಪರಿಗಣಿತ ವಿಶ್ವವಿದ್ಯಾಲಯದ ಮಾನ್ಯತೆ ಸಿಗಬೇಕಾಗಿದೆ. ಇನ್ನೊಂದು ತಿಂಗಳಲ್ಲಿ ಅದು ಸಿಗಲಿದೆ ಎನ್ನುವ ಭರವಸೆ ಕೊಡುತ್ತೇನೆ' ಎಂದು ಹೇಳಿದರು.
ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ಜಿಡಿಪಿ ಏಳರ ಗಡಿ ದಾಟಿದೆ ಎನ್ನುವುದನ್ನು ಕೆಲವರಿಗೆ ಅರಗಿಸಲು ಆಗುತ್ತಿಲ್ಲ. ವಿದ್ಯುತ್ ಉತ್ಪಾದನೆಯಲ್ಲಿ ಇಡೀ ದೇಶ ಸ್ವಾವಲಂಬಿಯಾಗಿ ಬೇರೆ ದೇಶಕ್ಕೆ ಮಾರಾಟ ಮಾಡುವಷ್ಟು ಬೆಳೆದಿದೆ. ಇಂದು 863 ಬಿಲಿಯನ್ ಡಾಲರ್ ರಫ್ತು ಮಾಡುತ್ತಿದೆ. ದೇಶದ ಆರ್ಥಿಕ ಸಾಧನೆ ಕಂಡು ಹಲವು ಮುಂಚೂಣಿ ರಾಷ್ಟ್ರಗಳು ನಮ್ಮ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತಿವೆ ಎಂದರು.
ಶೇ. 98ರಷ್ಟು ಮೊಬೈಲ್ ಉತ್ಪಾದನೆಯನ್ನು ಭಾರತವೇ ಇಂದು ಮಾಡುತ್ತಿದೆ. ಮುಂದಿನ 6ಜಿ ತಂತ್ರಜ್ಞಾನದ ಮೊಬೈಲನ್ನು ಭಾರತವೇ ನೀಡಲಿದೆ ಎಂದು ಭವಿಷ್ಯ ನುಡಿದರು.
ಭಾರತದಲ್ಲಿ ಪ್ರಸ್ತುತ 560 ಮೆಡಿಕಲ್ ಕಾಲೇಜು, 1.4 ಲಕ್ಷ ವೈದ್ಯಕೀಯ ಸೀಟುಗಳಿವೆ. 1.03 ಲಕ್ಷ ಪೇಟೆಂಟ್, 2.3 ಲಕ್ಷ ಸ್ಟಾರ್ಟ್ ಅಪ್ ಗಳಿದ್ದು ಭಾರತದ ಶೈಕ್ಷಣಿಕ ಸಾಧನೆ ಜಾಗತಿಕ ಗಮನ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸ್ಟಾರ್ಟ್ ಅಪ್ ಗಳು ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಕನ್ನಡದಿಂದ ಬರಬೇಕಾಗಿದೆ ಎಂದು ಆಶಿಸಿದ ಅವರು, ಹೊಸ ಯೋಚನೆ - ಹೊಸ ಯೋಜನೆ ವೈದ್ಯಕೀಯ ಕ್ಷೇತ್ರದಿಂದ ಬರಬೇಕಾಗಿದೆ ಎಂದು ಹೇಳಿದರು. ಯುವ ಜನತೆಗೆ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು ಮ ಕೇಂದ್ರವು ಪ್ರಸ್ತುತ 2.5 ಲಕ್ಷ ಕೋಟಿ ರೂಪಾಯಿ ಸಂಶೋಧನೆಗೆ ಮೀಸಲಿಟ್ಟಿದೆ. 19ನೇ ಶತಮಾನ ಇಂಗ್, 20ನೇ ಶತಮಾನ ಅಮೆರಿಕದ್ದಾಗಿದ್ದರೆ, 21ನೇ ಶತಮಾನ ಭಾರತದ್ದಾಗಲಿದೆ, 2047 ಕ್ಕೆ ವಿಕಸಿತ ಭಾರತ ಆಗಲಿದೆ ಎಂದರು.
ಹೀಲಿಂಗ್ ರಾಜಧಾನಿ ದಕ್ಷಿಣ ಕನ್ನಡ ಆಗಲಿ
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಆರ್ಥಿಕವಾಗಿ ಕೈಗೆಟಕುವ, ಗುಣಮಟ್ಟದ ಆರೋಗ್ಯ ಸೇವೆ ನಮ್ಮದಾಗಬೇಕು ಎಂಬುದು ಕೇಂದ್ರ ಸರ್ಕಾರದ ಕನಸು. ನಮ್ಮ ಜಿಲ್ಲೆ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಆರೋಗ್ಯ ಮತ್ತು ಆಧ್ಯಾತ್ಮಿಕವಾಗಿ ಹೀಲಿಂಗ್ ರಾಜಧಾನಿಯಾಗುವ ಅರ್ಹತೆ ದಕ್ಷಿಣ ಕನ್ನಡಕ್ಕಿದೆ. ಆರೋಗ್ಯ, ವೈದ್ಯಕೀಯ ಕ್ಷೇತ್ರದ ಪ್ರವಾಸಿ ತಾಣವಾಗಲಿ ಎಂದು ಹಾರೈಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ಎನ್. ತಿಪ್ಪೇಸ್ವಾಮಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ ಶುಭಹಾರೈಸಿದರು. ಪ್ರಾಸ್ತಾವಿಕ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಆಳ್ವಾಸ್ ಮೆಡಿಕಲ್ ಕಾಲೇಜು ನಿರ್ಮಾಣದ ಹಿಂದೆ ಶ್ರಮಿಸಿದ, ಕೊಡುಗೆ ನೀಡಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು. ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹಿರಿಯ ವೈದ್ಯರು ಹಾಗೂ ವೈದ್ಯಕೀಯ ದಿಗ್ಗಜರ ಸ್ಮರಣೆಯನ್ನು ಗೌರವಿಸುವ ಉದ್ದೇಶದಿಂದ ಕಾಲೇಜಿನ ವಿವಿಧ ಚಿಕಿತ್ಸಾ ಕೇಂದ್ರಗಳು ಮತ್ತು ವಿಭಾಗಗಳಿಗೆ ಟಿ.ಎಂ.ಎ. ಪೈ, ಡಾ. ಎಸ್. ಕಾಂತ, ಡಾ. ಶಂಕರ್ ನಾಯಕ್, ಡಾ. ವಿ.ಎಸ್. ಆಚಾರ್ಯ, ಡಾ. ಶಾಂತರಾಮ್ ಶೆಟ್ಟಿ, ವಿನಯ್ ಹೆಗ್ಡೆ, ಡಾ. ಚಂದ್ರಶೇಖರ್ ಶೆಟ್ಟಿ, ಡಾ. ಸುಧಾಕರ್ ಶೆಟ್ಟಿ, ಡಾ. ವಿ.ಎಸ್. ಕಾಮತ್, ಡಾ. ಮನೋರಮಾ, ಡಾ. ಕೃಷ್ಣಮೂರ್ತಿ ಹಾಗೂ ಡಾ. ಅಮರನಾಥ ಹೆಗ್ಡೆ ಅವರ ಹೆಸರುಗಳನ್ನು ಇಡಲಾಗಿದೆ ಎಂದು ತಿಳಿಸಿದರು.
ಶಾಸಕ ಉಮಾನಾಥ ಎ. ಕೋಟ್ಯಾನ್, ವಿವಿಧ ವಿವಿಗಳ ವಿಶ್ರಾಂತ ಕುಲಪತಿಗಳಾದ ಡಾ.ಎಸ್. ಕಾಂತಾ, ಡಾ. ಎಸ್. ಚಂದ್ರಶೇಖರ್ ಶೆಟ್ಟಿ, ಡಾ. ಎಚ್.ಎಸ್. ಬಲ್ಲಾಳ್, ಡಾ. ರಮಾನಂದ ಶೆಟ್ಟಿ, ಡಾ. ಎಸ್. ಸಚ್ಚಿದಾನಂದ, ಡಾ. ಜಯಕರ್ ಶೆಟ್ಟಿ, ಮಂಗಳೂರು ವಿ.ವಿ. ವಿಸಿ ಡಾ. ಪಿ.ಎಲ್. ಧರ್ಮ, ಡಿ. ಸುರೇಂದ್ರ ಕುಮಾರ್ ಧರ್ಮಸ್ಥಳ, ಡಿ. ಹರ್ಷೇಂದ್ರ ಕುಮಾರ್, ಡಾ. ಎ.ಜೆ. ಶೆಟ್ಟಿ, ವಿಶಾಲ್ ಹೆಗ್ಡೆ, ಡಾ. ಅಬ್ದುಲ್ ಕುಂಞ, ಫೌಸ್ಟಿನ್ ಲ್ಯೂಕಸ್ ಲೋಬೋ, ಡಾ. ಹಾಜಿ ಯು.ಕೆ. ಮೋನು, ಚಿದಾನಂದ ಗೌಡ, ಡಾ.ಶ್ರೀನಿವಾಸ ರಾವ್, ಎಸ್. ಗಣೇಶ್ ರಾವ್, ಡಾ. ರಾಜೇಶ್ ಶೆಟ್ಟಿ, ಡಾ. ಪ್ರಕಾಶ್ ಶೆಟ್ಟಿ, ರವೀಂದ್ರನಾಥ ಆಳ್ವ, ಪಾಲುದಾರರು, ಕುಮಾರಸ್ವಾಮಿ ಮಿನರಲ್ಸ್, ಬಳ್ಳಾರಿ, ಕಿಶೋರ್ ಆಳ್ವ, ರೆ. ಫಾ. ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಡಾ. ಎಂ.ಎಸ್. ಆಳ್ವ ಮುಂಬೈ, ಕುಲದೀಪ ಎಂ., ಚೌಟರ ಅರಮನೆ, ಡಾ. ಪಿ.ಜಿ.ಆರ್. ಸಿಂಧ್ಯಾ, ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ. ಶಾಂತಾರಾಮ್ ಶೆಟ್ಟಿ, ಡಾ. ಕಿರಣ್ ಕೆ.ವಿ. ಆಚಾರ್ಯ, ಡಾ. ಶಿವಶರಣ್ ಶೆಟ್ಟಿ, ಡಾ. ವೈಶಾಲಿ ಶ್ರೀಜಿತ್, ಎಂ.ಬಿ.ಪುರಾಣಿಕ್, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಮತ್ತಿತರ ಗಣ್ಯರು ಇದ್ದರು.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm