ಬ್ರೇಕಿಂಗ್ ನ್ಯೂಸ್
09-01-21 02:19 pm Mangalore Correspondent ಕರಾವಳಿ
ಉಳ್ಳಾಲ, ಜ.9: ತೊಕ್ಕೊಟ್ಟು ಒಳಪೇಟೆಯ ಅಂಗಡಿಯೊಂದರಲ್ಲಿ ಸೀಯಾಳ ಕುಡಿಯುತ್ತಾ ನಿಂತಿದ್ದ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಮತ್ತು ಅವರ ತಂಡ ಇದ್ದ ಜಾಗಕ್ಕೆ ಬಂದ ತಾತಪ್ಪನೊಬ್ಬ ಸಾರ್ವಜನಿಕವಾಗಿ ಎಲ್ರೂ ಮಾಸ್ಕ್ ಹಾಕ್ರಿ ಎಂದು ಬೊಬ್ಬೆ ಹೊಡೆದು ಪೊಲೀಸರನ್ನು ಪರೋಕ್ಷವಾಗಿ ಎಚ್ಚರಿಸಿದ ಘಟನೆ ನಡೆದಿದೆ.
ತಾತಪ್ಪನ ಕಾಳಜಿ ಕಂಡು ಅವ ಅವಾಕ್ಕಾದ ಪೊಲೀಸ್ ಕಮಿಷನರ್ ಕೂಡ ಮಾಸ್ಕನ್ನು ಮುಖಕ್ಕೆ ಏರಿಸಿಕೊಂಡು ತಾತಪ್ಪನನ್ನು ಹತ್ತಿರಕ್ಕೆ ಕರೆದು ಸೀಯಾಳ ಕೊಟ್ಟು ಉಪಚರಿಸಿದ್ದಾರೆ.

ತೊಕ್ಕೊಟ್ಟು ಒಳಪೇಟೆಯ ಮೂರು ಅನಧಿಕೃತ ಬೀಫ್ ಸ್ಟಾಲ್ ಗಳಿಗೆ ನಿನ್ನೆ ರಾತ್ರಿ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು ಘಟನಾ ಸ್ಥಳಕ್ಕೆ ಇಂದು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಮೀಷನರ್, ಡಿಸಿಪಿ, ಎಸಿಪಿ, ಉಳ್ಳಾಲ ಪಿಐ ಅವರನ್ನು ಒಳಗೊಂಡಿದ್ದ ತಂಡವು ಒಳಪೇಟೆಯ ಅಂಗಡಿಯೊಂದರಲ್ಲಿ ಸೀಯಾಳ ಕುಡಿದು ಮಾಸ್ಕನ್ನು ಕತ್ತಿಗೆ ಜಾರಿಸಿಕೊಂಡು ಮಾತುಕತೆಯಲ್ಲಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯ ಪ್ರಾಯದ ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಮಾಸ್ಕ್ ಹಾಕ್ರಿ ಎಂದು ಗಟ್ಟಿಯಾಗಿ ಒಸರಿದ್ದು, ಇದು ಪೊಲೀಸ್ ತಂಡಕ್ಕೂ ಪರೋಕ್ಷವಾಗಿ ಎಚ್ವರಿಸಿದಂತಿತ್ತು. ಕೂಡಲೇ ಕಮೀಷನರ್, ಡಿಸಿಪಿಯವರು ಕತ್ತಲ್ಲಿದ್ದ ಮಾಸ್ಕನ್ನು ಮುಖಕ್ಕೆ ಏರಿಸಿಕೊಂಡಿದ್ದಾರೆ.

ಈ ವೇಳೆ, ಕಮಿಷನರ್ ಅವರ ಸಹಾಯಕರು ತಾತಪ್ಪ ಸೇರಿ ಸಾರ್ವಜನಿಕರನ್ನು ಗದರಿಸಲು ಮುಂದಾಗಿದ್ದಾರೆ. ಕಮಿಷನರ್ ಶಶಿಕುಮಾರ್ ಮಾತ್ರ ಮಾಸ್ಕ್ ಬಗ್ಗೆ ಕಾಳಜಿ ಮೂಡಿಸಿದ ತಾತಪ್ಪನನ್ನು ಆಲಿಂಗಿಸಿ ಸೀಯಾಳ ಕೊಟ್ಟು ಉಪಚರಿಸಿ ಸ್ಥಳದಿಂದ ತೆರಳಿದ್ದಾರೆ.
An Elderly Man in Ullal was found advising Police Commissioner and team to wear mouth mask when they were found without wearing a mask.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 04:32 pm
HK News Staffer
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm