ಬ್ರೇಕಿಂಗ್ ನ್ಯೂಸ್
03-08-26 10:50 pm HK News Desk ಕರಾವಳಿ
ಉಳ್ಳಾಲ, ಆ.3: ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರು ಅವಧಿ ಮೀರಿ ಅಧಿಕಾರ ನಡೆಸುತ್ತಿರುವುದಲ್ಲದೆ ಲೆಕ್ಕ ಪರಿಶೋಧಕರಿಂದ ವಾರ್ಷಿಕ ಆಡಿಟಿಂಗ್ ಮಾಡಿಸಿಲ್ಲವೆಂದು ಆಡಳಿತ ಸಮಿತಿಯ ಸದಸ್ಯರೇ ಆಗಿರುವ ಪವನ್ ರಾಜ್ ಕೊಲ್ಯ ಸಂಘ ಸಂಸ್ಥೆಗಳ ಜಿಲ್ಲಾ ನೋಂದಣಾಧಿಕಾರಿಗೆ ದೂರು ನೀಡಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಆಡಳಿತ ಸಮಿತಿ ಉಪಾಧ್ಯಕ್ಷ ದಿನೇಶ್ ಕುಂಪಲ, ನಮ್ಮ ಸಂಘ ನೋಂದಣಿಯೇಗೊಂಡಿಲ್ಲ. ಹಾಗಾಗಿ ವಾರ್ಷಿಕ ಆಡಿಟಿಂಗ್ ಮಾಡಿಸುವ ಅಗತ್ಯವಿಲ್ಲವೆಂದು ಹೇಳಿಕೊಂಡಿದ್ದರೆ, ಸಮಿತಿ ವತಿಯಿಂದ ಇದೇ ಭಾನುವಾರ ನಡೆಯಲಿರುವ ಕಾರ್ಯಕ್ರಮದ ಆಮಂತ್ರಣದಲ್ಲಿ ಮಾತ್ರ ಸಮಿತಿ ನೋಂದಾಯಿತವೆಂದು(ರಿ) ನಮೂದಿಸಿರುವುದು ತಮ್ಮದೇ ಮಾತನ್ನು ಅಲ್ಲಗಳೆಯುವಂತೆ ಮಾಡಿದೆ.
ಚೀರುಂಭ ಭಗವತೀ ಕ್ಷೇತ್ರದ ಆಡಳಿತ ಸಮಿತಿಯ ವಿರುದ್ಧ ಉಪ ನಿಬಂಧಕರಿಗೆ ದೂರು ನೀಡಿದ್ದ ಪವನ್ ರಾಜ್ ಅವರಿಗೆ ಕೈ ಮುಖಂಡ, ಬೆಂಗಳೂರಿನ ಉದ್ಯಮಿ ಪ್ರಕಾಶ್ ಕುಂಪಲ ಎಂಬವರು ತೀಯಾ ಸಮಾಜದ ವ್ಯಕ್ತಿಗಳಿಗೆ ಕರೆ ಮಾಡಿ ಪರೋಕ್ಷವಾಗಿ ಜೀವ ಬೆದರಿಕೆ ನೀಡಿದ್ದ ಆಡಿಯೋ ವೈರಲ್ ಆಗಿದ್ದು ಭಗವತಿ ಕ್ಷೇತ್ರದ ವಿವಾದವು ಮುನ್ನಲೆಗೆ ಬರುವಂತಾಗಿತ್ತು.


ಚೀರುಂಭ ಭಗವತಿ ತೀಯಾ ಸಮಾಜ ಸೇವಾ ಸಂಘದ ವತಿಯಿಂದ ಇದೇ ಭಾನುವಾರ ನಡೆಯಲಿರುವ "ತೀಯರೆ ಚೇರ್ ಲಿ ಒರಿನಾಳ್" ಕೆಸರು ಗದ್ದೆ ಕ್ರೀಡಾಕೂಟದ ಬಗ್ಗೆ ಪತ್ರಿಕಾಗೋಷ್ಟಿಯನ್ನು ಇಂದು ಬೆಳಗ್ಗೆ ಭಗವತಿ ಕ್ಷೇತ್ರದಲ್ಲಿ ಕರೆಯಲಾಗಿತ್ತು. ಈ ವೇಳೆ ಪತ್ರಕರ್ತರು ಆಡಳಿತ ಸಮಿತಿಯ ವಿವಾದದ ಬಗ್ಗೆ ಸ್ಪಷ್ಟನೆ ಕೇಳಿದ್ದಾರೆ. ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ಚಿದಾನಂದ ಗುರಿಕಾರ ಮಾತನಾಡಿ ಹಿರಿಯರಾದ ಯು.ಚಂದಪ್ಪ ಹಾಗೂ ಈಶ್ವರ್ ಉಳ್ಳಾಲ್ ಅವರು ನಲ್ವತ್ತು ವರುಷಗಳಿಂದ ಕ್ಷೇತ್ರವನ್ನ ಸುಸಜ್ಜಿತವಾಗಿ ನಡೆಸಿಕೊಂಡು ಬಂದಿದ್ದರು. ಕ್ಷೇತ್ರ ನಿರ್ವಹಣೆಗಾಗಿ ತೀಯಾ ಸೇವಾ ಸಮಾಜ ಸಂಘ ಎಂಬ ನೋಂದಾಯಿತ ಸಂಘವನ್ನು ಸ್ಥಾಪಿಸಿದ್ದರು. ಕ್ಷೇತ್ರದ ನಿಯಮ ಪ್ರಕಾರ ಐದು ವರ್ಷಕ್ಕೊಮ್ಮೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಾ ಬಂದಿದೆ.
2024-25 ರಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ಆಡಳಿತ ಮೊಕ್ತೇಸರರಾಗಿ ಸುರೇಶ್ ಭಟ್ನಗರ ಹಾಗೂ ಆಡಳಿತ ಸಮಿತಿ ಅಧ್ಯಕ್ಷರಾಗಿ ಉಮೇಶ್ ಬೆಂಜನಪದವು ಆಯ್ಕೆಗೊಂಡಿದ್ದರು. ಈ ಸಂದರ್ಭದಲ್ಲಿ ಸಭಾಂಗಣ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಕ್ಕಾಗಿ ಸುಮಾರು 47 ಲಕ್ಷ ರೂಪಾಯಿಗಳ ಸಾಲವು ಕ್ಷೇತ್ರದ ಮೇಲಿತ್ತು. ಇಷ್ಟೊಂದು ಸಾಲ ಹಾಗೂ ವೈಯಕ್ತಿಕ ವಿಚಾರ ಮುಂದಿಟ್ಟು ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಉಮೇಶ್ ಬೆಂಜನಪದವು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರದ ಎಲ್ಲರ ಒಮ್ಮತ ಅಭಿಪ್ರಾಯ ಪ್ರಕಾರ ನನ್ನನ್ನ ಆಡಳಿತ ಸಮಿತಿಯ ಅಧ್ಯಕ್ಷರನ್ನಾಗಿಸಿದ್ದರೆಂದರು.
ನೋಂದಾಯಿತ ಸಮಿತಿಯು ವಾರ್ಷಿಕ ಆಡಿಟಿಂಗ್ ಮಾಡಿಸಬೇಕಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಆಡಳಿತ ಸಮಿತಿ ಉಪಾಧ್ಯಕ್ಷ ದಿನೇಶ್ ಕುಂಪಲ ಅವರು ನಮ್ಮ ಸಂಘ ನೋಂದಣಿಯೇ ಆಗಿಲ್ಲ. ಹಾಗಾಗಿ ವಾರ್ಷಿಕ ಆಡಿಟಿಂಗ್ ಮಾಡಿಸುವ ಅಗತ್ಯವಿಲ್ಲವೆಂದು ಹೇಳಿಕೊಂಡಿದ್ದಾರೆ. ಮಾತು ಮುಂದುವರಿಸಿದ ಅವರು ಕಮಿಟಿ ಸದಸ್ಯ ಪವನ್ ರಾಜ್ ಉಪ ನಿಬಂಧಕರಿಗೆ ಕ್ಷೇತ್ರದ ಆಡಳಿತ ವಿರುದ್ಧ ದೂರು ನೀಡಿದ ಮೇಲೆಯೇ ಈ ಕ್ಷೇತ್ರಕ್ಕೆ ಬೈಲಾ ಇದೆಯೆಂದು ನಮಗೆ ಗೊತ್ತಾಗಿದೆ. ಆಡಳಿತ ಕಮಿಟಿಗೆ ಬೈಲಾ ಮಾಡಲಾಗಿದೆಯೆಂಬುದನ್ನ ನಾವು ಕೇಳಿ ತಿಳಿದುಕೊಂಡಿದ್ದೆವು ಹೊರತು ಯಾರೂ ಅದನ್ನ ನೋಡಿಲ್ಲ. ಆದರೆ ನಮಗೆಲ್ಲ ಗೊತ್ತಿಲ್ಲದ ರೀತಿಯಲ್ಲಿ ನಮ್ಮ ಕ್ಷೇತ್ರದ ಬೈಲಾ ಹೇಗೆ ಸಿದ್ಧವಾಯಿತು. ಹಿಂದಿನವರು ಮಾಡಿದ ಬೈಲಾವನ್ನು ಯಾರು ಕದ್ದುಕೊಂಡು ಹೋದರೆಂಬುದು ನಮಗೆ ಗೊತ್ತಿಲ್ಲ. ಉಪ ನಿಬಂಧಕರ ಕಚೇರಿಗೆ ಬೈಲಾ ತಲುಪಿದ ಮೇಲೆ ಅದರ ನಕಲು ಪ್ರತಿ ನಮಗೆ ದೊರೆತ್ತಿದ್ದು, ಅದರಲ್ಲಿ ಪೆನ್ನಿನಲ್ಲಿ ತಿದ್ದಿದ ಅಕ್ಷರಗಳನ್ನು ನಾವು ಗ್ರಹಿಸಿದ್ದೇವೆ, ಅವೆಲ್ಲ ಸತ್ಯಕ್ಕೆ ದೂರವಾಗಿವೆ. ಆ ಬೈಲಾ ಪ್ರಕಾರ ನಮ್ಮ ಸಂಘಟನೆ ಮುನ್ನಡೆಸಲು ಸಾಧ್ಯವಿಲ್ಲ. ಇಲ್ಲಿ ನಾಲ್ಕು ತರವಾಡು, ನಾಲ್ಕು ಊರ್ಯಗಳ ಸಂವಿಂಧಾನವಿದ್ದು ಅದರ ಪ್ರಕಾರ ನಾವು ಮುಂದುವರೆಯುತ್ತೇವೆ ಎಂದರು.

ಭಾನುವಾರ ಕಮಿಟಿ ಸಭೆ ನಡೆಸಿದ್ದು ಕ್ಷೇತ್ರದ ಆಡಳಿತ ಸಮಿತಿ ವಿರುದ್ಧ ಅಪಪ್ರಚಾರ ಮಾಡಿದ ಹಾಗೂ ಉಪ ನಿಬಂಧಕರ ಕಚೇರಿಗೆ ದೂರು ನೀಡಿರುವ ಪವನ್ ರಾಜ್ ಅವರನ್ನ ಸಮಿತಿಯಿಂದ ಉಚ್ಚಾಟಿಸುವ ತೀರ್ಮಾನ ಕೈಗೊಂಡಿದ್ದೇವೆ. ಪ್ರಧಾನ ಕಾರ್ಯದರ್ಶಿಯೂ ವೈಯಕ್ತಿಕ ಕಾರಣಗಳಿಂದ ಸಭೆಗಳಿಗೆ ಹಾಜರಾಗದ ನಿಟ್ಟಿನಲ್ಲಿ ಆ ಸ್ಥಾನಕ್ಕೂ ಬೇರೆಯವರನ್ನ ನಿಯೋಜಿಸಲು ತೀರ್ಮಾನಿಸಿದ್ದೇವೆಂದು ದಿನೇಶ್ ಕುಂಪಲ ಸ್ಪಷ್ಟನೆ ನೀಡಿದ್ದಾರೆ.
ಪವನ್ ರಾಜ್ ಅವರು ಉಪ ನಿಬಂಧಕರ ಕಚೇರಿಗೆ ನೀಡಿದ ದೂರಿಗೆ ಇಲಾಖೆಯಿಂದ ಸಿಕ್ಕ ಹಿಂಬರಹದಲ್ಲಿ ಉಳ್ಳಾಲದ ಶ್ರೀ ಚೀರುಂಭ ಭಗವತಿ ತೀಯಾ ಸಮಾಜ ಸೇವಾ ಸಂಘ(ರಿ) ವು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರಡಿ ನೋಂದಣಿ ಸಂಖ್ಯೆ 198/1990-91, ದಿನಾಂಕ:02-03-1991 ರಲ್ಲಿ ನೋಂದಣಿಯಾಗಿದ್ದು, ಕಾಯ್ದೆ ಕಲಂ 11 ಹಾಗೂ 13ರ ಪ್ರಕಾರ ಪ್ರತೀ ವರ್ಷ ವಾರ್ಷಿಕ ಮಹಾಸಭೆ ನಡೆಸಿ ನಿಯಮಾನುಸಾರ ವಾರ್ಷಿಕ ಫೈಲಿಂಗ್ ಗೆ ಸಂಬಂಧಿಸಿದ ದಾಖಲೆಗಳನ್ನು ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಗೆ ಸಲ್ಲಿಸಿ ಸ್ವೀಕೃತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ನಿಮ್ಮ ಸಂಘವು ನೋಂದಣಿಯಾದ ದಿನಾಂಕದಿಂದ ಈ ವರೆಗೂ ಸುಮಾರು 36 ವರ್ಷಗಳ ಕಾಲ ವಾರ್ಷಿಕ ಫೈಲಿಂಗ್ ಮಾಡಿಲ್ಲವೆಂದು ಉಲ್ಲೇಖಿಸಲಾಗಿತ್ತು.
ಆದರೆ ಇಂದು ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಕಮಿಟಿ ಉಪಾಧ್ಯಕ್ಷ ದಿನೇಶ್ ಕುಂಪಲ ಅವರು ಮಾತ್ರ ನಮ್ಮ ಸಮಿತಿ ನೋಂದಣಿಯೇ ಗೊಂಡಿಲ್ಲವೆಂದು ಹೇಳಿ ಪತ್ರಕರ್ತರನ್ನ ಯಾಮಾರಿಸಲು ಯತ್ನಿಸಿದ್ದಾರೆ. ಇನ್ನು ದೂರುದಾರ ಪವನ್ ಅವರಿಗೆ ಅನ್ಯ ಸಮಾಜದ ವ್ಯಕ್ತಿ ಜೀವ ಬೆದರಿಕೆ ನೀಡಿರುವ ಪ್ರಶ್ನೆಗೆ ಉತ್ತರಿಸಿದ ಅವರು ಭಗವತಿ ಕ್ಷೇತ್ರಕ್ಕೆ ಸ್ವಜಾತಿಯವರಲ್ಲದೆ ಇತರ ಜಾತಿ ಬಾಂಧವರೂ ಭಕ್ತರಾಗಿದ್ದಾರೆ. ಕ್ಷೇತ್ರದ ಭಕ್ತನಾಗಿರುವ ನಿಟ್ಟಿನಲ್ಲಿ ಮನಸ್ಸಿನ ವೇದನೆಯನ್ನ ಆತ ವ್ಯಕ್ತಪಡಿಸಿರಬಹುದು. ನಮ್ಮ ಕ್ಷೇತ್ರದ ಬಗ್ಗೆ ಮಾತನಾಡುವಂತೆ ನಾವು ಇತರ ಸಮುದಾಯದವರಲ್ಲಿ ಹೇಳಿಕೊಂಡಿಲ್ಲ. ಆಡಳಿತ ಸಮಿತಿಗೆ ಇತ್ತೀಚಿಗೆ ಬಂದವರೇ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಹೆಸರು ಎತ್ತಲೂ ನಾವು ಅಸಹ್ಯವಾಗುತ್ತದೆ, ಅಷ್ಟು ದೊಡ್ಡ ಜನವೂ ಅವರು ಆಗಿಲ್ಲವೆಂದು ಹೇಳಿದರು.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
21-09-26 08:21 pm
HK News Staffer
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm