ಬ್ರೇಕಿಂಗ್ ನ್ಯೂಸ್
07-07-26 09:04 pm HK News Staffer ಕರಾವಳಿ
ಮಂಗಳೂರ, ಜು.07: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿರುವ ನಡುವೆಯೇ ಮೆಸ್ಕಾಂ ವಿದ್ಯುತ್ ಮೂಲಸೌಕರ್ಯಕ್ಕೆ ಭಾರೀ ಹಾನಿಯಾಗಿದೆ. ಏಪ್ರಿಲ್ 1ರಿಂದ ಜುಲೈ 5ರವರೆಗೆ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 17.38 ಕೋಟಿ ರೂ. ನಷ್ಟ ಸಂಭವಿಸಿದ್ದು, ಸಾವಿರಾರು ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ನೂರಾರು ಕಿಲೋಮೀಟರ್ ವಿದ್ಯುತ್ ಮಾರ್ಗಗಳು ಹಾನಿಗೊಳಗಾಗಿವೆ.
ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಈ ಅವಧಿಯಲ್ಲಿ 11,867 ವಿದ್ಯುತ್ ಕಂಬಗಳು, 43 ಟ್ರಾನ್ಸ್‌ಫಾರ್ಮರ್‌ಗಳು ಹಾಗೂ ಸುಮಾರು 330 ಕಿಲೋಮೀಟರ್ ಉದ್ದದ ವಿದ್ಯುತ್ ಮಾರ್ಗಗಳು ಹಾನಿಗೊಳಗಾಗಿವೆ. ಭಾರೀ ಮಳೆ, ಬಿರುಗಾಳಿ, ಭೂಕುಸಿತ ಮತ್ತು ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಉರುಳಿಬಿದ್ದಿರುವುದು ಈ ಭಾರೀ ಹಾನಿಗೆ ಪ್ರಮುಖ ಕಾರಣವಾಗಿದೆ.
ಹಾನಿಯ ಮೌಲ್ಯದಲ್ಲಿ ಕೇವಲ ವಿದ್ಯುತ್ ಕಂಬಗಳ ನಷ್ಟವೇ ₹14.27 ಕೋಟಿ ಆಗಿದ್ದರೆ, ಟ್ರಾನ್ಸ್‌ಫಾರ್ಮರ್‌ಗಳಿಗೆ ₹45.82 ಲಕ್ಷ ಹಾಗೂ ವಿದ್ಯುತ್ ತಂತಿ ಮತ್ತು ಇತರ ಉಪಕರಣಗಳಿಗೆ ₹2.64 ಕೋಟಿ ನಷ್ಟ ಸಂಭವಿಸಿದೆ. ಒಟ್ಟಾರೆ ಹಾನಿಯ ಮೊತ್ತ ಸುಮಾರು ₹17.37 ಕೋಟಿ ಎಂದು ಮೆಸ್ಕಾಂ ಅಂದಾಜಿಸಿದೆ.
ಜಿಲ್ಲಾವಾರು ಪರಿಶೀಲಿಸಿದರೆ, ದಕ್ಷಿಣ ಕನ್ನಡದಲ್ಲಿ ₹4.72 ಕೋಟಿ, ಚಿಕ್ಕಮಗಳೂರಿನಲ್ಲಿ ₹4.52 ಕೋಟಿ, ಉಡುಪಿಯಲ್ಲಿ ₹4.12 ಕೋಟಿ ಹಾಗೂ ಶಿವಮೊಗ್ಗದಲ್ಲಿ ₹3.99 ಕೋಟಿ ನಷ್ಟ ದಾಖಲಾಗಿದೆ. ನಿರಂತರ ಮಳೆ ಮತ್ತು ಮರಗಳು ವಿದ್ಯುತ್ ಮಾರ್ಗಗಳ ಮೇಲೆ ಉರುಳಿರುವುದರಿಂದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಹಾನಿಯ ಪ್ರಮಾಣ ಹೆಚ್ಚಾಗಿದೆ.
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್. ಅವರು ಮಾಹಿತಿ ನೀಡಿ, ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯವನ್ನು ಶೀಘ್ರ ಸರಿಪಡಿಸಲು ಎಲ್ಲ ವಿಭಾಗಗಳಲ್ಲೂ ವಿಶೇಷ ಮಾನ್ಸೂನ್ ಗ್ಯಾಂಗ್‌ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಹೆಚ್ಚುವರಿ ಸಿಬ್ಬಂದಿ, ವಾಹನಗಳು ಮತ್ತು ತುರ್ತು ನಿರ್ವಹಣಾ ತಂಡಗಳನ್ನು ಕಾರ್ಯನಿರ್ವಹಣೆಗೆ ನಿಯೋಜಿಸಲಾಗಿದ್ದು, ರಾತ್ರಿ ವೇಳೆಯಲ್ಲೂ ಸಿಬ್ಬಂದಿ ನಿರಂತರವಾಗಿ ವಿದ್ಯುತ್ ಮರುಸ್ಥಾಪನೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ.
ಬಹುತೇಕ ಪ್ರದೇಶಗಳಲ್ಲಿ ಪರ್ಯಾಯ ವಿದ್ಯುತ್ ಮಾರ್ಗಗಳಿರುವುದರಿಂದ ಒಂದು ಮಾರ್ಗದಲ್ಲಿ ಸಮಸ್ಯೆ ಎದುರಾದರೂ ಮತ್ತೊಂದು ಮಾರ್ಗದ ಮೂಲಕ ವಿದ್ಯುತ್ ಪೂರೈಕೆ ಕಲ್ಪಿಸಲಾಗುತ್ತಿದೆ. ಆದರೆ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡದ ದಟ್ಟ ಅರಣ್ಯ, ಕಾಫಿ ಹಾಗೂ ಅಡಿಕೆ ತೋಟಗಳಿರುವ ಪ್ರದೇಶಗಳಲ್ಲಿ ಮರ ತೆರವು ಕಾರ್ಯಕ್ಕೆ ಹೆಚ್ಚು ಸಮಯ ಬೇಕಾಗುತ್ತಿರುವುದರಿಂದ ಕೆಲವೆಡೆ ವಿದ್ಯುತ್ ಪೂರೈಕೆ ಪುನಃಸ್ಥಾಪನೆ ವಿಳಂಬವಾಗುತ್ತಿದೆ ಎಂದು ಹೇಳಿದ್ದಾರೆ,
ಮಳೆಗಾಲ ಆರಂಭಕ್ಕೂ ಮುನ್ನವೇ ಪ್ರಿ-ಮಾನ್ಸೂನ್ ಕಾಮಗಾರಿಗಳ ಭಾಗವಾಗಿ ವಿದ್ಯುತ್ ಮಾರ್ಗಗಳಿಗೆ ಅಡ್ಡಿಯಾಗುವ ಮರದ ಕೊಂಬೆಗಳನ್ನು ತೆರವುಗೊಳಿಸುವುದು ಸೇರಿದಂತೆ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ, ಪ್ರಕೃತಿ ವಿಕೋಪದ ತೀವ್ರತೆಯಿಂದ ಹಾನಿಯನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಾಗಿಲ್ಲ ಎಂದು ಮೆಸ್ಕಾಂ ಸ್ಪಷ್ಟಪಡಿಸಿದೆ.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಭಾಗದಲ್ಲಿ ಹೆಚ್ಚಿನ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಅಲ್ಲಿಗೆ ಹೆಚ್ಚುವರಿ ಸಿಬ್ಬಂದಿ ಮತ್ತು ವಾಹನಗಳನ್ನು ಕಳುಹಿಸಿ ತುರ್ತು ಮರುಸ್ಥಾಪನಾ ಕಾರ್ಯಾಚರಣೆ ನಡೆಸಲಾಗಿದೆ. ಮಳೆಗಾಲ ಇನ್ನೂ ಮುಂದುವರಿದಿರುವುದರಿಂದ ಮುಂದಿನ ದಿನಗಳಲ್ಲಿ ಹಾನಿಯ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇರುವುದರಿಂದ, ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳು ಅಥವಾ ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳ ಸಮೀಪ ಸಾರ್ವಜನಿಕರು ಹೋಗದೆ ತಕ್ಷಣವೇ ಮೆಸ್ಕಾಂಗೆ ಮಾಹಿತಿ ನೀಡುವಂತೆ ಇಲಾಖೆ ಮನವಿ ಮಾಡಿದೆ.
07-07-26 09:02 pm
HK News Staffer
ದೇಶದ 'ತೂಗುಸೇತುವೆಗಳ ಸರದಾರ' ಪದ್ಮಶ್ರೀ ಡಾ. ಗಿರೀಶ್...
07-07-26 10:52 am
ಮೈಸೂರು ದಸರಾದಲ್ಲಿ ಕಂಬಳ ಬೇಡವೇ ಬೇಡ ; ಯದುವೀರ್ ಒಡ...
06-07-26 04:40 pm
ಬೆಂಗಳೂರು ಕೆ.ಆರ್ ವೃತ್ತದಲ್ಲಿ ಬಿಎಂಟಿಸಿ ಬಸ್ಸುಗಳ ಡ...
04-07-26 02:51 pm
ರಾಮನಗರ ಕಲ್ಯಾಣ ಮಂಟಪದಲ್ಲಿ ಮತದಾರರನ್ನು ಸೇರಿಸಿ ಎಸ್...
03-07-26 01:21 pm
07-07-26 03:22 pm
HK News Staffer
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
ಚೀನಾ ಮಹಾಗೋಡೆ ಮಾದರಿಯಲ್ಲೇ ಆಫ್ರಿಕಾ ಮರುಭೂಮಿಯಲ್ಲಿ...
04-07-26 08:09 pm
07-07-26 11:13 pm
HK News Staffer
ಭಾರೀ ಮಳೆ ; ಜುಲೈ 8 ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ...
07-07-26 09:26 pm
ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರಕ್ಕೆ ಮೆಸ್ಕಾಂಗೆ 17....
07-07-26 09:04 pm
Sudheer Reddy IPS, Mangalore, Ut Khader: ಎಷ್ಟ...
06-07-26 10:00 pm
ಮಂಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಎಸ್ ಐಆರ್ ಪ್ರಕ್ರ...
06-07-26 09:13 pm
07-07-26 08:07 pm
HK News Staffer
Konaje Police, Accused Escapes, Mangalore: ಪೋ...
07-07-26 03:50 pm
Mangalore Panambur Truck Block; ಪಣಂಬೂರಿನಲ್ಲಿ...
06-07-26 04:49 pm
Panambur Gold Robbery, Photo Released: ಚಿನ್ನದ...
06-07-26 12:28 pm
ಬಂಟ್ವಾಳ ; ಬಸ್ಸಿಗೆ ನಿಂತಿದ್ದ ಪಿಯುಸಿ ವಿದ್ಯಾರ್ಥಿನ...
06-07-26 11:59 am